ಮೈಸೂರು, (ಮಾ.10): ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಾಬಲೇಶ್ವರ ರಥದ ಚಕ್ರಕ್ಕೆ ಬಿಡಿಸಲಾಗಿರುವ ಆಕ್ಷೇಪಾರ್ಹ ಲಾಂಛನ ಪೇಂಟಿಂಗ್ ಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ.

ಇದೇ ಮಾ.15 ರಂದು ಮಹಾಬಲೇಶ್ವರ ರಥೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ರಥಕ್ಕೆ ಬಣ್ಣ ಬಳಿಯಲು ಗುತ್ತಿಗೆ ನೀಡಲಾಗಿತ್ತು. ಗುತ್ತಿಗೆದಾರರು ಪಾಕಿಸ್ತಾನದ ಧ್ವಜ ಮೇಲೆ ಇರುವ ಅರ್ಧ ಚಂದ್ರನ ಚಿಹ್ನೆಯನ್ನು ರಥದ ಗಾಲಿಗೆ ಬಿಡಿಸಿದ್ದಾರೆ.

ಕರ್ನಾಟಕದಲ್ಲಿ 4 ಕರೋನಾ ಪಾಸಿಟಿವ್, ಎಂಪಿಯಲ್ಲಿ ಕಾಂಗ್ರೆಸ್‌ಗೆ ಎಲ್ಲವೂ ನೆಗೆಟಿವ್..ಮಾ. 10ರ ಟಾಪ್ 10 ಸುದ್ದಿ

ಇದಕ್ಕೆ ಭಕ್ತರಿಂದ ಆಕ್ಷೇಪ ವ್ಯಕ್ತವಾಗಿದ್ದು, ಪೇಟಿಂಗ್ ಮಾಡಿದವರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅಲ್ಲದೇ ಇದಕ್ಕೆ ಮೈಸೂರು ಸಂಸದ ಪ್ರತಾಪ್ ಸಿಂಹ ಸಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ದು, ಚಾಮುಂಡಿ ಬೆಟ್ಟದ ರಥದ ಚಕ್ರಕ್ಕೆ ಮಾಡಿರುವ ಪೇಂಟಿಂಗ್ ನೋಡಿ. ಇಂಥದ್ದನ್ನು ಸಹಿಸಬೇಕಾ ಹೇಳಿ? ನಿಮ್ಮ ಗಮನಕ್ಕೆ ಇರಲಿ ಅಂತ ಫೋಟೋ ಹಾಕಿದ್ದೇನೆ, ಪಾಠ ಕಲಿಸದೇ ಬಿಡಲ್ಲ ಎಂದು ಪೇಂಟರ್ ವಿರುದ್ಧ ಗರಂ ಆಗಿದ್ದಾರೆ.

ಪೇಟಿಂಗ್ ಮಾಡಿದ್ಯಾರು ಎನ್ನುವುದು ಮಾತ್ರ ಇನ್ನೂ ತಿಳಿದುಬಂದಿಲ್ಲ. ಈ ಪೇಟಿಂಗ್ ವಿವಾದ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಎನ್ನುವುದನ್ನ ಕಾದುನೋಡಬೇಕಿದೆ.