ಕರ್ನಾಟಕದಲ್ಲಿ ಕರೋನಾ ಪಾಸಿಟಿವ್ ಕೇಸ್ ಗಳು ವರದಿಯಾಗಿ ಆತಂಕ ತಂದರೆ ಅತ್ತ ಷೇರು ಮಾರುಕಟ್ಟೆ ತಲ್ಲಣ ಮುಂದುವರಿದೇ ಇದೆ. ಪಕ್ಕದ ಮಧ್ಯಪ್ರದೇಶದಲ್ಲಿ ರಾಜಕೀಯ ಆಪರೇಶನ್ ಇದೆಲ್ಲದರ ನಡುವೆ ಐಪಿಎಲ್ ಹಬ್ಬ ಹತ್ತಿರ ಬರುತ್ತಿದೆ. ಕರ್ನಾಟಕದ ಮಾತ್ರವಲ್ಲದೇ ಇಡೀ ದೇಶದಲ್ಲಿ ಕರೋನಾ ಆತಂಕ ಮುಂದುವರೆದಿದ್ದು ಆಯಾ ರಾಜ್ಯ ಸರ್ಕಾರಗಳು ಸುರಕ್ಷಾ ಕ್ರಮಗಳನ್ನು ಒಂದೊಂದಾಗಿ ತೆಗೆದುಕೊಳ್ಳುತ್ತಿವೆ. 

ಮಧ್ಯಪ್ರದೇಶದ ಕಮಲ್‌ನಾಥ್ ಸರ್ಕಾರ ಕೊನೆಯುಸಿರು? 

ಮಧ್ಯ ಪ್ರದೇಶದಲ್ಲಿ ಅಚ್ಚರಿಯ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು, ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತnಗೊಳ್ಳುವುದು ಬಹುತೇಕ ಪಕ್ಕಾ ಆಗಿದೆ. ಈಗಾಗಲೇ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ರಾಜೀನಾಮೆ ನೀಡುತ್ತಿದ್ದಂತೆಯೇ ಬೆಂಗಳೂರಿನಲ್ಲಿ ಠಿಕಾಣಿ  ಹೂಡಿರುವ ಕಾಂಗ್ರೆಸ್ 19 ಶಾಸಕರು ರಾಜೀನಾಮೆ ನೀಡಿದ್ದಾರೆ.

 

ಕರ್ನಾಟಕದಲ್ಲಿ ನಾಲ್ವರಿಗೆ ಕೊರೋನಾ: ದಿಟ್ಟ ಕ್ರಮಕೈಗೊಂಡ ರಾಜ್ಯ ಸರ್ಕಾರ

ರಾಜ್ಯದಲ್ಲಿ ನಾಲ್ವರಿಗೆ ಕೊರೋನಾ ಸೋಂಕು ತಗುಲಿದ್ದು ದೃಢವಾಗಿದ್ದು, ಸೋಂಕು ಹರಡದಂತೆ ತಡೆಯಲು ಸಮಿತಿ ರಚಿಸಲಾಗಿದೆ ಎಂದು  ಸಿಎಂ ಬಿಎಸ್ ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

 

ರಾಕಿಂಗ್ ಸ್ಟಾರ್ ವಿರುದ್ಧ ನವರಸ ನಾಯಕ ಜಗ್ಗೇಶ್ ಗರಂ!

ನಟ ಜಗ್ಗೇಶ್ ಗರಂ ಆಗಿದ್ದಾರೆ. ಅದು ನ್ಯಾಷನಲ್ ಸ್ಟಾರ್ ಯಶ್ ಮೇಲೆ. ನವರಸ ನಾಯಕನ ಕೋಪದ ಕಣ್ಣು ಬಿದ್ದಿದೆ. ಅದಕ್ಕೆ ಕಾರಣ ಇತ್ತೀಚಿಗಷ್ಟೆ ನಡೆದ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ.

 

ಬಿಎಸ್‌ ಯಡಿಯೂರಪ್ಪ ಕುರ್ಚಿಗೆ ಸಂಚಕಾರ ತರಲು ಸಿದ್ಧವಾದ ಕತೆ

ಬಿಎಸ್ವೈ ಕುರ್ಚಿಗೆ ಕಂಟಕ ತರಲು ಯೋಗೇಶ್ವರ್ ಜೊತೆ ಮತ್ತೊಬ್ಬರು ಕೈ ಜೋಡಿಸಿದ್ದಾರೆ. ಈ ಭಲೇ ಜೋಡಿ ಸೇರ್ಕೊಂಡು ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಳಿಸಲು ಸಂಚು ಮಾಡಿದ್ದಾರೆ. ಸೈನಿಕನ ಜೊತೆ ಸೇರಿ ಸಂಚು ರೂಪಿಸಿರುವ ಆ ಆಸಾಮಿ ಯಾರು..?

 

ಡಯಟ್‌ನಲ್ಲಿ ಶುಗರ್ ಡಿಟಾಕ್ಸ್ ಮಾಡಿದರೆ ಏನೆಲ್ಲ ಲಾಭಗಳಿರಬಹುದು?...ಸಿಹಿ ಎಂದರೆ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರಿಗೂ ಅಚ್ಚುಮೆಚ್ಚು. ಊಟವಾಗುತ್ತಿದ್ದಂತೆಯೇ, ಬಾಕ್ಸ್‌ನಲ್ಲಿರುವ ಬರ್ಫಿ ಕೈಬೀಸಿ ಕರೆದು ಬಾಯಲ್ಲಿ ನೀರು ತರಿಸುತ್ತದೆ. ಸಂಜೆ ಹೊತ್ತಿಗಾಗಲೇ ಒಂದು ಚಾಕೋಲೇಟ್ ತಿನ್ನುವ ಬಯಕೆ ಧುತ್ತೆಂದು ಎದ್ದು ಕೂರುತ್ತದೆ. ಯಾರದಾದರೂ ಬರ್ತ್‌ಡೇ ಎಂದು ತಿಳಿದರೂ ಸಾಕು, ಅವರು ಕೊಡುವ ಕೇಕ್ ಅಥವಾ ಸ್ವೀಟ್‌ಗಾಗಿ ಕಾಯುತ್ತಾ ಕುಳಿತಿರುತ್ತೀರಿ ಅಲ್ಲವೇ? ಹಾಗಿದ್ದರೆ ನೀವು ಸ್ವಲ್ಪ ಮಟ್ಟಿಗೆ ಶುಗರ್ ಅಡಿಕ್ಟ್ಸ್ ಇರಬೇಕು. 

 

ರೈತರಿಗೂ ತಟ್ಟಿದ ಕೊರೋನಾ ಬಿಸಿ; ತರಕಾರಿಗೆ ಬೆಲೆ ಸಿಗದೇ ಕಂಗಾಲು!

ಕೊರೋನಾ ವೈರಸ್ ಬಿಸಿ ರೈತರಿಗೂ ತಟ್ಟಿದೆ. ಚಿಕ್ಕಬಳ್ಳಾಪುರದಲ್ಲಿ ತರಕಾರಿಗಳೇ ರಫ್ತಾಗುತ್ತಿಲ್ಲ. ಕಳೆದ ಮೂರು ದಿನಗಳಿಂದ ತರಕಾರಿಗಳೇ ರಫ್ತಾಗುತ್ತಿಲ್ಲ.

ಕೃಷ್ಣಾ ಮೇಲ್ಡಂಡೆಗೆ ಎಷ್ಟು ಹಣ ಬಂತು? 
 

ರಾಜ್ಯದಲ್ಲಿ ಕಳೆದ ಆರೂವರೆ ವರ್ಷಗಳ ಕಾಲ ಅಧಿಕಾರದಲ್ಲಿದ್ದ ಸರ್ಕಾರಗಳು ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗೆ ಅನುದಾನ ಮೀಸಲಿಡದೇ ಈಗ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಯೋಜನೆಗೆ ಹಣ ನೀಡುವಂತೆ ಸಲಹೆಗಳನ್ನು ನೀಡುತ್ತಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

 

ಷೇರುಪೇಟೆಯಲ್ಲೂ ಮಹಾ ತಲ್ಲಣ, 2 ದಿನದಲ್ಲಿ 10 ಲಕ್ಷ ರೂ ಕೋಟಿ ಮಾಯ!


ಮಾರಕ ಕೊರೋನಾ ವೈರಸ್‌ ವಿಶ್ವಾದ್ಯಂತ ವ್ಯಾಪಿಸುವ ಮೂಲಕ ಜಾಗತಿಕ ಆರ್ಥಿಕತೆಗೆ ಪೆಟ್ಟು ನೀಡುತ್ತಿರುವುದು ಹಾಗೂ ತೈಲ ಬೆಲೆ ಸೋಮವಾರ ಒಂದೇ ದಿನ ಶೇ.30ರಷ್ಟುಹಠಾತ್‌ ಕುಸಿತ ಅನುಭವಿಸಿದ ಹಿನ್ನೆಲೆಯಲ್ಲಿ ಜಾಗತಿಕ ಷೇರುಪೇಟೆಗಳಲ್ಲಿ ಅಲ್ಲೋಲ- ಕಲ್ಲೋಲ ಸೃಷ್ಟಿಯಾಗಿದೆ.

ಎಲ್ಲ ಸಮಸ್ಯೆಗಳ ನಡುವೆ ’ಚಿನ್ನ’ದಂಥ ನ್ಯೂಸ್, ಬಂಗಾರದ ದರ ಇಳಿಕೆ!

ಬಂಗಾರದ ಬೆಲೆ ಆಕಾಶವನ್ನೇ ನೋಡುತ್ತಿದೆ. ಸದ್ಯಕ್ಕೆ ಬೆಲೆ ಇಳಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಇನ್ನು ಬೆಳ್ಳಿ ದರದಲ್ಲೂ ಭಾರೀ ಬದಲಾವಣೆ ಏನಾಗಿಲ್ಲ.  ಮಾರ್ಚ್ 10 ರ ಬಂಗಾರ, ಬೆಳ್ಳಿ ಬೆಲೆ ಹೀಗಿದೆ ನೋಡಿ! 

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನ

 

ಐಪಿಎಲ್ ನಲ್ಲಿ ಮಿಂಚಿದರಷ್ಟೆ ಧೋನಿ ಆಯ್ಕೆ


ಧೋನಿ ಮುಂದಿನ ಕ್ರಿಕೆಟ್ ಭವಿಷ್ಯ ಏನು ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಮುಂಬರುವ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರಷ್ಟೇ 2020ರ ಟಿ20 ವಿಶ್ವಕಪ್‌ಗೆ ಧೋನಿಯನ್ನು ಪರಿಗಣಿಸಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.