Asianet Suvarna News Asianet Suvarna News

ಎಂಪಿ ನಿಧಿ ಬಳಕೆ: ಪ್ರತಾಪ್‌ ನಂ.1, ಸುಮಲತಾ ನಂ.2

ಶಿವಕುಮಾರ್‌ ಉದಾಸಿ, ಡಿ.ಕೆ.ಸುರೇಶ್‌, ಪ್ರಜ್ವಲ್‌ ರೇವಣ್ಣ ಟಾಪ್‌ 5 ಸಂಸದರು| ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಸರ್ಕಾರದಿಂದ 5 ಕೋಟಿ ಪ್ರದೇಶಾಭಿವೃದ್ಧಿ ನಿಧಿ| ಪ್ರತಾಪ್‌ ಸಿಂಹ 4.90 ಕೋಟಿ, ಸುಮಲತಾ ಅಂಬರೀಶ್‌ 4.95 ಕೋಟಿ ಕಾಮಗಾರಿಗೆ ಶಿಫಾರಸು| ಪ್ರತಾಪ್‌ ಸಿಂಹ ನಿಧಿಯಿಂದ 4.36 ಕೋಟಿ ಬಳಕೆ| ಸುಮಲತಾ ನಿಧಿಯಿಂದ 3.78 ಕೋಟಿ ವಿನಿ​ಯೋ​ಗ​| 

Pratap Simha No 1,  Sumalatha No 2 in MP Fund Utilization grg
Author
Bengaluru, First Published Mar 5, 2021, 10:09 AM IST

ಮೈಸೂರು(ಮಾ.05): ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಅವರು ರಾಜ್ಯ​ದಲ್ಲೇ ಪ್ರಥಮ ಸ್ಥಾನ ಪಡೆ​ದಿ​ದ್ದರೆ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ದ್ವಿತೀಯ ಸ್ಥಾನದಲ್ಲಿದ್ದಾರೆ.

ಸಾಮಾ​ನ್ಯ​ವಾಗಿ ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಸರ್ಕಾರದಿಂದ 5 ಕೋಟಿ ಪ್ರದೇಶಾಭಿವೃದ್ಧಿ ನಿಧಿ ನೀಡಲಾಗುತ್ತದೆ. ರಾಜ್ಯದ 28 ಸಂಸದರ ಪೈಕಿ ಕೇಂದ್ರ ಸರ್ಕಾರ ಪೂರ್ಣ 5 ಕೋಟಿ ಬಿಡುಗಡೆ ಮಾಡಿರುವುದು ಪ್ರತಾಪ್‌ ಸಿಂಹ ಹಾಗೂ ಸುಮಲತಾ ಅಂಬರೀಶ್‌ ಅವರಿಗೆ ಮಾತ್ರ. ಉಳಿದ 26 ಸಂಸದರಿಗೆ ತಲಾ 2.5 ಕೋಟಿಯಷ್ಟೇ ಬಿಡುಗಡೆಯಾಗಿದೆ.

ಪರಸತಿ, ಪರಧನ- ರಾಸಲೀಲೆ ಕಾಮಕಾಂಡವಾಗಿದೆ : ಸಿಎಂ ವಿರುದ್ಧ ತನ್ವೀರ್‌ ಸೇಠ್

ತಮಗೆ ಬಿಡು​ಗ​ಡೆ​ಯಾ​ಗಿ​ರುವ ತಲಾ 5 ಕೋಟಿ ಪೈಕಿ ಪ್ರತಾಪ್‌ ಸಿಂಹ ಅವರು 4.90 ಕೋಟಿ, ಸುಮಲತಾ ಅಂಬರೀಶ್‌ 4.95 ಕೋಟಿ ಕಾಮಗಾರಿಗೆ ಶಿಫಾರಸು ಮಾಡಿದ್ದಾರೆ. ಈ ಪೈಕಿ ಪ್ರತಾಪ್‌ ಸಿಂಹ ಅವರ ನಿಧಿಯಿಂದ 4.36 ಕೋಟಿ ಬಳಕೆಯಾಗಿದ್ದರೆ, ಸುಮಲತಾ ಅಂಬರೀಶ್‌ ಅವರ ನಿಧಿಯಿಂದ 3.78 ಕೋಟಿ ವಿನಿ​ಯೋ​ಗ​ವಾ​ಗಿ​ದೆ.

ಪ್ರತಾಪ್‌ ಅವರ ನಿಧಿ ಬಳಕೆಯ ಪ್ರಮಾಣ ಶೇ.85.17 ಇದ್ದರೆ ಸುಮಲತಾ ಅವರ ಬಳಕೆಯ ಪ್ರಮಾಣ ಶೇ.73.66 ರಷ್ಟಿದೆ. ಪ್ರತಾಪ್‌ ಅವರ ನಿಧಿಯಲ್ಲಿ ಬಳಕೆಯಾಗದೆ ಉಳಿದಿರುವ ಹಣ 0.73 ಕೋಟಿ, ಸುಮಲತಾ ಅವರ ಖಾತೆಯಲ್ಲಿ 1.28 ಕೋಟಿ ಬಳ​ಕೆ​ಯಾ​ಗ​ದೆ ಹಾಗೆಯೇ ಉಳಿದಿದೆ ಎಂದು ಸಂಸ​ದರ ಪ್ರದೇ​ಶಾ​ಭಿ​ವೃದ್ಧಿ ನಿಧಿ ಬಳಕೆ ಕುರಿತ ಕೇಂದ್ರ ಸರ್ಕಾ​ರದ ವೆಬ್‌​ಸೈ​ಟ್‌​ನ​ಲ್ಲಿ ನೀಡಿ​ರುವ ಮಾಹಿ​ತಿ​ಯ​ಲ್ಲಿ ತಿಳಿ​ಸ​ಲಾ​ಗಿ​ದೆ.
 

Follow Us:
Download App:
  • android
  • ios