Asianet Suvarna News Asianet Suvarna News

'ಉಪಮುಖ್ಯಮಂತ್ರಿ ಹುದ್ದೆ ನೀಡದ ಸಿಎಂ ಯಡಿಯೂರಪ್ಪಗೆ ಉಗಿದಿದ್ದೇನೆ'

ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ| 'ವಾಲ್ಮೀಕಿ ಅನ್ನ ಕುಟೀರ' ಹೆಸರಿಗೆ ಸ್ವಾಗತವಿದೆ ಎಂದ ವಾಲ್ಮೀಕಿ ಗುರುಪೀಠದ ಪ್ರಸನ್ನನಾಂದ ಸ್ವಾಮೀಜಿ| ಎಲ್ಲ ರಾಜಕಾರಣಿಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ| ಸರ್ಕಾರ ಇರೋ ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಮಾಡಲ್ಲ ಅಂತ ಅಂದುಕೊಂಡಿದ್ದೇನೆ| ಬೇರೆ ಹೊಸ ಕ್ಯಾಂಟೀನ್‌ಗೆ ಮಹರ್ಷಿ ವಾಲ್ಮೀಕಿ ಅನ್ನ ಕುಟೀರ ಎಂದು ನಾಮಕರಣ ಮಾಡಿದ್ರೆ ನಮ್ಮ ಸಂಪೂರ್ಣ ಸ್ವಾಗತ|

Prasannanand Swamiji Talks Over CM B S Yediyurappa
Author
Bengaluru, First Published Dec 18, 2019, 12:29 PM IST

ಕೊಪ್ಪಳ(ಡಿ.18): ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಮಾಡಿ 'ವಾಲ್ಮೀಕಿ ಅನ್ನ ಕುಟೀರ' ಎಂಬ ಹೆಸರಿಗೆ ಸ್ವಾಗತವಿದೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನನಾಂದ ಸ್ವಾಮೀಜಿ ಅವರು ಹೇಳಿದ್ದಾರೆ. 

ಬುಧವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ಎಲ್ಲ ರಾಜಕಾರಣಿಗಳು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಸರ್ಕಾರ ಇರೋ ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಮಾಡಲ್ಲ ಅಂತ ಅಂದುಕೊಂಡಿದ್ದೇನೆ. ಬೇರೆ ಹೊಸ ಕ್ಯಾಂಟೀನ್‌ಗೆ ಮಹರ್ಷಿ ವಾಲ್ಮೀಕಿ ಅನ್ನ ಕುಟೀರ ಎಂದು ನಾಮಕರಣ ಮಾಡಿದ್ರೆ ನಮ್ಮ ಸಂಪೂರ್ಣ ಸ್ವಾಗತ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶ್ರೀರಾಮಲು ಅವರನ್ನು ಉಪಮುಖ್ಯಮಂತ್ರಿ ಮಾಡುವ ವಿಚಾರದ  ಬಗ್ಗೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ಚುನಾವಣೆಗೂ ಮುನ್ನ ಬಿಜೆಪಿ ನಮ್ಮ ಸಮುದಾಯವನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದೆ. ಇದೀಗ ನಮ್ಮ ಸಮುದಾಯದ ಇಬ್ಬರು ನಾಯಕರು ಡಿಸಿಎಂ ಆಕಾಂಕ್ಷಿಗಳಾಗಿದ್ದಾರೆ. ನಮ್ಮ ಸಮಯಯಾದಲ್ಲಿ ಇಬ್ಬರಿಗೆ ಒಬ್ಬರಿಗೆ ಉಪಮುಖ್ಯಮಂತ್ರಿ ಸಿಗಲಿ. ಡಿಸಿಎಂ ಮಾಡ್ತೀನಿ ಎಂದು ವೋಟ್ ಬ್ಯಾಂಕ್ ಮಾಡಿಕೊಂಡಿದ್ದೀರಿ. ಇವಾಗ ಉಪಮುಖ್ಯಮಂತ್ರಿ ಹುದ್ದೆ ಕೊಡಿ ಎಂದ ಸ್ವಾಮೀಜಿ ಅವರು ಯಡಿಯೂರಪ್ಪ ಅವರಿಗೆ ಆಗ್ರಹಿಸಿದ್ದಾರೆ. 

ಸಿದ್ದರಾಮಯ್ಯ ಮಾಸ್ ಲೀಡರ್ ಅವರ ವಿರುದ್ಧ ಶ್ರೀರಾಮಲು ಸ್ಪರ್ಧೆ ಮಾಡದಂತೆ ನಾನು ಹೇಳಿದ್ದೆ, ಆದ್ರೆ ರಾಮಲು ಹೈಕಮಾಂಡ್ ನಿರ್ಣಯ ಎಂದು ಸ್ಪರ್ಧೆ ಮಾಡಿದ್ದರು. ಇದೀಗ ಕುರಬ ಸಮುದಾಯ,ನಾಯಕ ಸಮುದಾಯದ ನಡುವೆ ಮುಖಗಳು ಕೆಟ್ಟಿವೆ. ಇದಕ್ಕೆಲ್ಲ ರಾಜಕೀಯ ನಾಯಕರೇ ನೇರ ಹೊಣೆ ಎಂದು ಹೇಳಿದ್ದಾರೆ. 

ಉಪಮುಖ್ಯಮಂತ್ರಿ ಹುದ್ದೆ ನೀಡದ ವಿಚಾರಕ್ಕೆ ನಾನು ಯಡಿಯೂರಪ್ಪನಿಗೆ ಉಗಿದಿದ್ದೇನೆ, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಇದ್ರೆ ನನಗೇನ್ರೀ ಎಂದಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಹಾಗೆ, ಆಯೋಧ್ಯೆಯಲ್ಲಿ ವಾಲ್ಮೀಕಿ ಮಂದಿರ ಕೂಡ ನಿರ್ಮಾಣವಾಗಬೇಕು. ವಾಲ್ಮೀಕಿ ಜನಾಂಗದ ಶಾಸಕರು ವೈಯಕ್ತಿಕವಾಗಿ ಗೆದ್ದಿಲ್ಲ, ಜಾತಿ ಹೆಸರಿನ ಮೇಲೆ ಗೆದ್ದು ಬಂದಿದ್ದಾರೆ. ಶಾಸಕರು, ಸಚಿವರು ನನ್ನ ಜಾತಿ ಹೆಸರಲ್ಲಿ ಗೆದ್ದಿದ್ದಾರೆ. ಸಮುದಾಯದ ಹಿತಾಸಕ್ತಿಗೆ ಧಕ್ಕೆ ಬಂದಾಗ ರಾಜೀನಾಮೆ ಕೊಡಬೇಕು ಅನ್ನೋದು ಸಮಯದಾಯ ಒತ್ತಡವಾಗಿದೆ ಎಂದು ತಿಳಿಸಿದ್ದಾರೆ. 

ವಾಲ್ಮೀಕಿ ಜಾತ್ರೆಯ ಸಮಯದೊಳಗೆ ಮೀಸಲಾತಿ ಘೋಷಣೆಯಾಗಬೇಕು. ವಾಲ್ಮೀಕಿ ಜಾತ್ರೆ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಮೀಸಲಾತಿ ಘೋಷಣೆ ಮಾಡದೆ ಹೋದ್ರೆ ನಾನು ಶಾಸಕರ ಅಭಿಪ್ರಾಯ ಕೇಳುತ್ತೇನೆ. ಈ ಹಿಂದೆ ಸಮಾವೇಶದಲ್ಲಿ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಜಾತ್ರೆ ವೇಳೆಗೆ ಘೋಷಣೆ ಮಾಡದೆ ಹೋದ್ರೆ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. 
 

Follow Us:
Download App:
  • android
  • ios