ಸಿಎಂ ಗಾದಿ ಆಕಾಂಕ್ಷಿ ಸಿದ್ದು ಮನೆಗೆ ಧರ್ಮಸ್ಥಳದಿಂದ ಪ್ರಸಾದ ರವಾನೆ

ಮುಖ್ಯಮಂತ್ರಿ ಆಕಾಂಕ್ಷಿ ಸಿದ್ದರಾಮಯ್ಯ ಅವರ ಕೋರಿಕೆಯ ಮೇರೆಗೆ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿಯ ಪ್ರಸಾದವನ್ನು ಕ್ಷೇತ್ರದಿಂದ ಬೆಂಗಳೂರಿಗೆ ವಿಶೇಷ ಪ್ರತಿನಿಧಿ ಮೂಲಕ ಕಳಿಸಿಕೊಡಲಾಗಿದೆ.

Prasada Sent from Dharamsthala to CM Post Aspirant Siddaramaiah House grg

ಬೆಳ್ತಂಗಡಿ(ಮೇ.18):  ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್‌ ಪಕ್ಷ ನಿಚ್ಚಳ ಬಹುಮತ ಪಡೆದು ಸರ್ಕಾರ ರಚನೆಗೆ ಮುಂದಾಗಿದೆ. 

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿ ಸಿದ್ದರಾಮಯ್ಯ ಅವರ ಕೋರಿಕೆಯ ಮೇರೆಗೆ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿಯ ಪ್ರಸಾದವನ್ನು ಕ್ಷೇತ್ರದಿಂದ ಬೆಂಗಳೂರಿಗೆ ವಿಶೇಷ ಪ್ರತಿನಿಧಿ ಮೂಲಕ ಕಳಿಸಿಕೊಡಲಾಗಿದೆ.

Karnataka Election Result 2023: ಬಾದಾಮಿ ಋಣ ತೀರಿಸಿ ಭೀಮಸೇನ ಚಿಮ್ಮನಕಟ್ಟಿ ಗೆಲ್ಲಿಸಿಕೊಟ್ಟ ಸಿದ್ದರಾಮಯ್ಯ

ಶ್ರೀ ಮಂಜುನಾಥಸ್ವಾಮಿಯ ತೀರ್ಥ ಬಾಟಲಿ, ಬೆಲ್ಲಕಾಯಿ ಪ್ರಸಾದ, ಮಹಾಗಣಪತಿ ಪಂಚಕಜ್ಜಾಯ, ಶ್ರೀ ಪ್ರಸಾದ, ಕಲ್ಲುಸಕ್ಕರೆ, ದ್ರಾಕ್ಷಿ, ಕುಂಕುಮ ಪ್ರಸಾದ ಹೊಂದಿರುವ 6 ಸೆಟ್‌ ಪ್ರಸಾದವನ್ನು ಬೆಂಗಳೂರಿಗೆ ಕಳಿಸಿಕೊಡಲಾಗಿದೆ. ಅವರು ತನ್ನ ಆಪ್ತರ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಪ್ರಸಾದ ತರಿಸಲು ಸೂಚಿಸಿದ್ದರು. ಆಪ್ತರು ಅವರ ಬೆಂಗಳೂರಿನ ಮನೆಗೆ ಪ್ರಸಾದವನ್ನು ತಲುಪಿಸಿದ್ದಾರೆ ಎಂದು ತಿಳಿದುಬಂದಿದೆ.
 

Latest Videos
Follow Us:
Download App:
  • android
  • ios