*   ಶುಕ್ರವಾರದ್ದು ಯೋಜನಾಬದ್ಧ ಗಲಭೆ, ಷಡ್ಯಂತ್ರ*   ಹಿಂದೂ ಸಮಾಜವು ಬೀದಿಗಿಳಿದರೆ ಸಂಘರ್ಷ*  ನೂಪುರ ಶರ್ಮಾ ಹೇಳಿಕೆಯಿಂದ ಗಲಭೆ ನಡೆಯುತ್ತಿರುವುದು ಖಂಡನೀಯ 

ಧಾರವಾಡ(ಜೂ.12): ಪ್ರವಾದಿ ಮೊಹ್ಮದ್‌ ಅವರ ಬಗ್ಗೆ ನೂಪೂರ್‌ ಶರ್ಮಾ ನೀಡಿರುವ ಹೇಳಿಕೆ ಖಂಡಿಸಿ ಮುಸ್ಲಿಂರು ಹೆಚ್ಚಿರುವ ಪ್ರದೇಶಗಳಲ್ಲಿ ಮಾತ್ರ ಗಲಾಟೆ ಆಗುತ್ತಿದೆ. ಆ ಪ್ರದೇಶಗಳು ಇದೀಗ ಸೂಕ್ಷ್ಮವಾಗಿದ್ದೂ ಹಿಂದೂಗಳು ಶಾಂತವಾಗಿದ್ದಾರೆ. ಮುಸ್ಲಿಂ ಸಮಾಜವು ಶಾಂತಿಯಿಂದ ಪ್ರತಿಭಟನೆ ನಡೆಸಬೇಕು. ಇಲ್ಲವಾದಲ್ಲಿ ಹಿಂದೂ ಸಮಾಜವು ಬೀದಿಗಿಳಿಯಲಿದೆ. ಆಗ ಸಂಘರ್ಷವಾಗುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಎಚ್ಚರಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂಪುರ ಶರ್ಮಾ ಹೇಳಿಕೆಯಿಂದ ಗಲಭೆ ನಡೆಯುತ್ತಿರುವುದು ಖಂಡನೀಯ. ನೂಪುರ ವಿರುದ್ಧ ಬಿಜೆಪಿ ಕ್ರಮಕೈಗೊಂಡಿದೆ. ಇದೊಂದು ಯೋಜನಾ ಬದ್ಧ ಗಲಭೆ. ವ್ಯವಸ್ಥಿತ ಸಂಚು, ಷಡ್ಯಂತ್ರವಾಗಿದೆ ಎಂದ ಅವರು, ಮುಸ್ಲಿಂ ರಾಷ್ಟ್ರಗಳು ನಮ್ಮ ದೇಶದ ವಿಚಾರದಲ್ಲಿ ಮೂಗು ತೂರಿಸಬೇಕಿಲ್ಲ. ನಮ್ಮ ದೇಶದ ಮುಸ್ಲಿಂರು ನ್ಯಾಯಾಲಯ ಗೌರವಿಸಿ ಸಂವಿಧಾನದ ಚೌಕಟ್ಟಿನಲ್ಲೇ ನಡೆದುಕೊಳ್ಳಬೇಕು. ನ್ಯಾಯಬದ್ಧ ಹೋರಾಟ ಮಾಡಬೇಕೆ ವಿನಃ, ಕಲ್ಲು, ತಲ್ವಾರ್‌ ಹಿಡಿದು ಹೋರಾಟ ಮಾಡುವಂತಿಲ್ಲ ಎಂದರು.

ನೂಪುರ್ ಶರ್ಮಾ ಹೇಳಿಕೆ ಬೆನ್ನಲ್ಲೇ ಪ್ರತಿಭಟನೆ: ಶೂಟ್ ಆ್ಯಟ್ ಸೈಟ್ ಆರ್ಡರ್ ಬಗ್ಗೆ ಸಿಎಂ ಹೇಳಿದ್ದಿಷ್ಟು

ಘಟನೆ ಖಂಡಿಸಿ ಎಸ್‌ಡಿಪಿಐ, ಪಿಎಫ್‌ಐ, ಎಎಂಐಎಂನವರು ಮಾತ್ರ ಪ್ರತಿಭಟಿಸುತ್ತಿದ್ದಾರೆ. ಇವರು ದೇಶದ್ರೋಹಿಗಳು, ದೇಶಕ್ಕೆ ಕಂಟಕರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಸಂಘಟನೆಗಳನ್ನು ಏತಕ್ಕಾಗಿ ನಿಷೇಧಿಸಿಲ್ಲ? ಈ ಸಂಘಟನೆಯವರು ದೇಶದ್ರೋಹಿಗಳು. ಕೊಲೆ ಗಡುಕರು ಎಂಬುದಕ್ಕೆ ಎಲ್ಲ ದಾಖಲೆಗಳಿವೆ ಎಂದು ಆಗ್ರಹಿಸಿದರು.