ಹಿಂದೂ ಹೆಣ್ಮಕ್ಕಳು ಮುಸ್ಲಿಂ ಯುವಕರ ಬೆನ್ನು ಬೀಳಬೇಡಿ: ಪ್ರಮೋದ ಮುತಾಲಿಕ್‌

ಶ್ರದ್ಧಾ ಪ್ರಕರಣ ಇಡೀ ಮನುಕುಲಕ್ಕೆ ಕಳಂಕ. ತಾಲಿಬಾನಿಗಿಂತ ಅತ್ಯಂತ ಕ್ರೌರ್ಯ ಮೆರೆದ ಕ್ರೂರಿ ಅಲ್ತಾಫ್‌ಗೆ ಗಲ್ಲು ಶಿಕ್ಷೆ ನೀಡಬೇಕು. ಈ ಪ್ರಕರಣದಲ್ಲಿ ನ್ಯಾಯಾಲಯ ವಿಳಂಬ ಮಾಡದೆ ಒಂದೇ ತಿಂಗಳಲ್ಲಿ ತೀರ್ಪು ನೀಡಬೇಕು ಎಂದು ಆಗ್ರಹಿಸಿದ ಮುತಾಲಿಕ್‌

Pramod Mutalik Talks Over Hindu Girls grg

ಧಾರವಾಡ(ನ.17): ದೆಹಲಿಯ ಶ್ರದ್ಧಾ ಪ್ರಕರಣದಿಂದಲಾದರೂ ಹಿಂದೂ ಯುವತಿಯರು ಪಾಠ ಕಲಿಯಬೇಕು. ಕಳೆದ 20 ವರ್ಷಗಳಿಂದ ಲವ್‌ ಜಿಹಾದ್‌ ನಡೆಯುತ್ತಿದ್ದು, ಹಿಂದೂ ಯುವತಿಯರು ಮುಸ್ಲಿಂ ಯುವಕರನ್ನು ಬೆನ್ನು ಬೀಳಬೇಡಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್‌ ಸಲಹೆ ನೀಡಿದ್ದಾರೆ. 

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶ್ರದ್ಧಾ ಪ್ರಕರಣ ಇಡೀ ಮನುಕುಲಕ್ಕೆ ಕಳಂಕ. ತಾಲಿಬಾನಿಗಿಂತ ಅತ್ಯಂತ ಕ್ರೌರ್ಯ ಮೆರೆದ ಕ್ರೂರಿ ಅಲ್ತಾಫ್‌ಗೆ ಗಲ್ಲು ಶಿಕ್ಷೆ ನೀಡಬೇಕು. ಈ ಪ್ರಕರಣದಲ್ಲಿ ನ್ಯಾಯಾಲಯ ವಿಳಂಬ ಮಾಡದೆ ಒಂದೇ ತಿಂಗಳಲ್ಲಿ ತೀರ್ಪು ನೀಡಬೇಕು ಎಂದು ಆಗ್ರಹಿಸಿದರು. ದೇಶದಲ್ಲಿ ಪದೇ ಪದೇ ಇಂತಹ ಕೃತ್ಯಗಳು ಜರುಗುತ್ತಿವೆ. ಹಿಂದು ಯುವತಿಯರು ಮಾತ್ರವಲ್ಲ, ಅವರ ಪಾಲಕರೂ ಈ ಬಗ್ಗೆ ಗಮನ ಹರಿಸಬೇಕು ಎಂಬ ಸಲಹೆ ನೀಡಿದರು.

ಸೋಯಾಬೀನ್ ಉತ್ಪನ್ನ ಖರೀದಿ ಕೇಂದ್ರ ಪ್ರಾರಂಭ: ಜಿಲ್ಲಾಧಿಕಾರಿ ಘೋಷಣೆ

ಮೈಸೂರಿನ ಗುಂಬಜ್‌ ಮಾದರಿ ಬಸ್‌ ನಿಲ್ದಾಣ ವಿವಾದ ಕುರಿತು ಪ್ರತಿಕ್ರಿಯಿಸಿ, ಮುಸ್ಲಿಂ ಗುತ್ತಿಗೆದಾರ, ಎಂಜಿನಿಯರ್‌ ಮಾಡಿರುವ ಇಸ್ಲಾಮೀಕರಣವಿದು. ಇದಕ್ಕೆ ಮೈಸೂರು ಅರಮನೆಯನ್ನು ಹೋಲಿಸಿ ಅನವಶ್ಯಕವಾಗಿ ಸಮರ್ಥನೆ ಮಾಡಲಾಗುತ್ತಿದೆ. ಅರಮನೆಯನ್ನು ಗುಂಬಜ್‌ಗೆ ಹೋಲಿಕೆ ಮಾಡಬಾರದು. ಬಸ್‌ ನಿಲ್ದಾಣ, ನಿಲ್ದಾಣವಾಗಿಯೇ ಇರಬೇಕು. ಅಲ್ಲಿ ಗುಂಬಜ್‌ ಇರುವ ಅವಶ್ಯಕತೆ ಇಲ್ಲ ಎಂದರು. ಈ ಸಂಬಂಧ ಸಂಸದ ಪ್ರತಾಪ ಸಿಂಹ ಅವರ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದರು.
 

Latest Videos
Follow Us:
Download App:
  • android
  • ios