Asianet Suvarna News

ಜಮೀರ್‌ ಅಹ್ಮದ್‌ಗೆ ತಲೆ ಇಲ್ಲ ಹೀಗಾಗಿ ಏನೆನೋ ಮಾತನಾಡ್ತಾರೆ: ಮುತಾಲಿಕ್‌

* ಜನಸಂಖ್ಯಾ ನಿಯಂತ್ರಣ ಕಾಯ್ದೆ ಬರೀ ಮುಸ್ಲಿಂರಿಗೆ ಮಾತ್ರ ಅಲ್ಲ
* ದೇಶದ ಹಿತದೃಷ್ಟಿಯಿಂದ ಕಾನೂನು ಜಾರಿಗೆ ತಂದರೆ ರಾಜಕಾರಣ ಎಂದರೆ ಹೇಗೆ? 
* ಕುಂಬಳಕಾಯಿ ಕಳ್ಳ ಎಂದರೆ ಜಮೀರ್‌ ಅಹ್ಮದ್‌ ಖಾನ್‌ ಹೆಗಲು ಮುಟ್ಟಿಕೊಳ್ಳುತ್ತಿದ್ದಾರೆ 

Pramod Mutalik Talks Over Congress MLA Zameer Ahmed Khan grg
Author
Bengaluru, First Published Jul 17, 2021, 8:43 AM IST
  • Facebook
  • Twitter
  • Whatsapp

ಧಾರವಾಡ(ಜು.17): ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವ ಜನಸಂಖ್ಯಾ ನಿಯಂತ್ರಣ ಕಾಯ್ದೆ ಎಲ್ಲರಿಗೂ ಅನ್ವಯವಾಗುತ್ತದೆ. ಬರೀ ಮುಸ್ಲಿಂರಿಗೆ ಅಲ್ಲ. ಈ ಕುರಿತು ಶಾಸಕ ಜಮೀರ್‌ ಅಹ್ಮದ್‌ ಖಾನ್‌ ವಿರೋಧ ಮಾಡುವುದು ಸರಿಯಲ್ಲ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕುಂಬಳಕಾಯಿ ಕಳ್ಳ ಎಂದರೆ ಜಮೀರ್‌ ಅಹ್ಮದ್‌ ಖಾನ್‌ ಹೆಗಲು ಮುಟ್ಟಿಕೊಳ್ಳುತ್ತಿದ್ದಾರೆ. ದೇಶದ ಹಿತದೃಷ್ಟಿಯಿಂದ ಕಾನೂನು ಜಾರಿಗೆ ತಂದರೆ ರಾಜಕಾರಣ ಎಂದರೆ ಹೇಗೆ? ಶಾಸಕ ಜಮೀರ್‌ ಅಹ್ಮದ್‌ಗೆ ತಲೆ ಇಲ್ಲ. ಹೀಗಾಗಿ ಏನೆನೋ ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ. 

ಮಸೀದಿಗಳಲ್ಲಿ ಮೈಕ್‌ ಬಳಕೆ ನಿರ್ಬಂಧ ಕಾನೂನು ಜಾರಿಯಾಗದಿದ್ದಲ್ಲಿ ಸಾವಿರ ಠಾಣೆಗಳಲ್ಲಿ ದೂರು: ಮುತಾಲಿಕ್‌

ದೇಶದ ಒಳಿತಿಗಾಗಿ ಇರುವ ಪೌರತ್ವ ಕಾಯ್ದೆ ಹಾಗೂ ಜನಸಂಖ್ಯಾ ನಿಯಂತ್ರಣ ಕಾಯ್ದೆ ಸೇರಿದಂತೆ ಎಲ್ಲ ಕಾಯ್ದೆಗಳನ್ನು ವಿರೋಧ ಮಾಡಿ ಮುಸ್ಲಿಂರ ತುಷ್ಟೀಕರಣ ಮಾಡುತ್ತಿದ್ದಾರೆ. ಇವರು ದೇಶಕ್ಕೆ ಅಪಾಯಕಾರಿ ಎಂದು ಪ್ರಮೋದ್‌ ಮುತಾಲಿಕ್‌ ಕಳವಳ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios