ಧಾರವಾಡ(ಮೇ.27): ತಿರುಪತಿ ದೇವಸ್ಥಾನದ ಆಸ್ತಿ ಮಾರಾಟ ಮಾಡಲು ಮುಂದಾದರೆ ತಂದೆಯ ರೀತಿಯಲ್ಲೇ ಆಂಧ್ರ ಪ್ರದೇಶದ ಸಿಎಂ ಜಗನ್ ಮೋಹನ್‌ ರೆಡ್ಡಿ ಅವರ ಸಾವು ಖಚಿತ ಎಂದು ತಿರುಪತಿ ದೇವಸ್ಥಾನದ ಆಸ್ತಿ ಮಾರಾಟ ವಿರೋಧಿಸಿ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಅವರು ಎಚ್ಚರಿಕೆ ನೀಡಿದ್ದಾರೆ. 

ಇಂದು(ಬುಧವಾರ) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಜಗನ್ ಮೋಹನ್‌ ರೆಡ್ಡಿ ಅವರ  ತಂದೆ ಮಾಜಿ ಸಿಎಂ ವೈ. ಎಸ್. ರಾಜಶೇಖರ ರೆಡ್ಡಿ ಅವರೂ ಕೂಡ ಇದೆ ರೀತಿ ಮಾಡಿದ್ದರು. ಹಾಗೆ ಮಾಡಿ ಶಾಪಕ್ಕೆ ಒಳಗಾಗಿದ್ದರು. ಅವರ ಸಾವಿನ ರಹಸ್ಯ ಇದುವರೆಗೂ ತಿಳಿದಿಲ್ಲ. ಜಗನ್‌ಗೂ ಅದೇ ಗತಿ ಬರುತ್ತೆ ಎಂದು ಹೇಳಿದ್ದಾರೆ.

ಕೊರೋನಾ ಭಯ: ಆಸ್ಪತ್ರೆಯಿಂದ ಹೇಳದೆ ಕೇಳದೆ ವ್ಯಕ್ತಿ ಪರಾರಿ, ಆತಂಕದಲ್ಲಿ ಜನತೆ..!

ಇವರು ಮತಾಂತರ ಹೊಂದಿದ ಕ್ರಿಶ್ಚಿಯನ್ ಆಗಿದ್ದಾರೆ. ಹೀಗಾಗಿ ಇವರು ವಕ್ಫ್ ಬೋರ್ಡ್, ಚರ್ಚ್‌ಗಳನ್ನು ಮುಟ್ಟೋದಿಲ್ಲ. ಇವರ ಕಣ್ಣು ಬರೀ ದೇವಸ್ಥಾನಗಳ ಮೇಲಷ್ಟೇ ಇರುತ್ತದೆ. ತಿರುಪತಿ ದೇವಸ್ಥಾನ ಆಂಧ್ರದ ಆಸ್ತಿ ಅಲ್ಲ ಅದು ದೇಶದ ಜನರ ಆಸ್ತಿ ಆಗಿದೆ. ತಿರುಪತಿ ದೇವಸ್ಥಾನದ ಆಸ್ತಿ ಮಾರಾಟ ಮಾಡುವ ನಿರ್ಧಾರಕ್ಕೆ ತಡೆಯಾಜ್ಞೆ ನೀಡಿ ಭಕ್ತರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾದ ಆಂಧ್ರಪ್ರದೇಶದ ಸರ್ಕಾರಕ್ಕೆ ತಮ್ಮ ನೇತೃತ್ವದಲ್ಲಿ ಸಾಧುಸಂತರ, ಭಕ್ತರ, ವಿದ್ವಾಂಸರ ಸರ್ಕಾರೇತರ ಸಮಿತಿ ರಚಿಸಲು ಆಗ್ರಹಿಸಿ ಶ್ರೀರಾಮ ಸೇನಾ ವತಿಯಿಂದ ತಹಶೀಲ್ದಾರ ಮೂಲಕ ಆಂಧ್ರಪ್ರದೇಶದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಆಂಧ್ರಪ್ರದೇಶದ ಸರ್ಕಾರದ ಅಧೀನದಲ್ಲಿರುವ ಟಿಟಿಡಿ ಮಂಡಳಿಯು ಜಗತ್ಪಸಿದ್ಧ ತಿರುಪತಿ ದೇವಸ್ಥಾನಕ್ಕೆ ಭಕ್ತರು ದಾನ ನೀಡಿದ 50 ಕ್ಕೂ ಹೆಚ್ಚು ಆಸ್ತಿಗಳನ್ನು ಮಾರಾಟ ಮಾಡಲು ಮುಂದಾಗಿರುವುದನ್ನು ಖಂಡಿಸಿದ್ದಾರೆ.