Asianet Suvarna News Asianet Suvarna News

ಕ್ವಾರೆಂಟೈನ್‌ ಮುಗಿದರೂ ಮನೆಗೆ ಬಿಟ್ಟಿಲ್ಲ: ಡಿಸಿ ವಿರುದ್ಧ ಕ್ರಮಕ್ಕೆ ಸಿಎಂಗೆ ದೂರು

ಕ್ವಾರಂಟೈನ್‌ನಲ್ಲಿರುವ ಗರ್ಭಿಣಿಯೊಬ್ಬರನ್ನು 15 ದಿನ ಕಳೆದರೂ ಮನೆಗೆ ಕಳುಹಿಸುತ್ತಿಲ್ಲ, ಆದ್ದರಿಂದ ಉಡುಪಿ ಜಿಲ್ಲಾಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಮುಖ್ಯಮಂತ್ರಿ ಅವರಿಗೆ ದೂರು ಸಲ್ಲಿಸಿದ್ದಾರೆ.

Pramod Madhwaraj writes to cm yediyurappa request action against udupi dc
Author
Bangalore, First Published May 28, 2020, 8:12 AM IST

ಉಡುಪಿ(ಮೇ 28): ಕ್ವಾರಂಟೈನ್‌ನಲ್ಲಿರುವ ಗರ್ಭಿಣಿಯೊಬ್ಬರನ್ನು 15 ದಿನ ಕಳೆದರೂ ಮನೆಗೆ ಕಳುಹಿಸುತ್ತಿಲ್ಲ, ಆದ್ದರಿಂದ ಉಡುಪಿ ಜಿಲ್ಲಾಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಮುಖ್ಯಮಂತ್ರಿ ಅವರಿಗೆ ದೂರು ಸಲ್ಲಿಸಿದ್ದಾರೆ.

ದುಬೈಯಿಂದ ಬಂದಿರುವ ಈ ಮಹಿಳೆ ಉಡುಪಿಯ ಹೋಟೆಲೊಂದರಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಅವರ 14 ದಿನಗಳ ಕ್ವಾರಂಟೈನ್‌ ಅವಧಿ ಮುಗಿದಿದೆ. ಆದರೂ ಅವರನ್ನು ಮನೆಗೆ ಕಳುಹಿಸಲಾಗಿಲ್ಲ. ಆಕೆಯ ಮನೆಯಿಂದ ಬರುವ ಆಹಾರಕ್ಕೂ ಜಿಲ್ಲಾಡಳಿತ ಅವಕಾಶ ನೀಡಿಲ್ಲ ಎಂದು ಆರೋಪಿಸಿದ್ದಾರೆ.

ಕೊನೆಯ ಅಸ್ತ್ರ: ಹಣಕಾಸು ಕೊರತೆ ನೀಗಿಸಲು ಆರ್‌ಬಿಐನಿಂದ ನೋಟು ಮುದ್ರಣ?

ಇದು ಜಿಲ್ಲಾಧಿಕಾರಿ ಅವರ ಬೇಜವಾಬ್ದಾರಿಯಾಗಿದೆ. ಆದ್ದರಿಂದ ಜಿಲ್ಲಾಡಳಿತ ಮತ್ತು ಜಿಲ್ಲಾಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಪ್ರಮೋದ್‌ ಮಧ್ವರಾಜ್‌ ಅವರು ಟ್ವೀಟ್‌ ಮೂಲಕ ಸಿಎಂ ಯಡಿಯೂರಪ್ಪ ಅವರಿಗೆ ದೂರು ಸಲ್ಲಿಸಿದ್ದಾರೆ.

ಆಕೆಗೆ ಪಾಸಿಟಿವ್‌ ಕಾಂಟಕ್ಟ್ ಇದೆ:

ಪ್ರಮೋದ್‌ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಅವರು, ಬೇಜವಾಬ್ದಾರಿಯ ಪ್ರಶ್ನೆಯೇ ಇಲ್ಲ. ಜಿಲ್ಲೆಗೆ 8000 ಜನ ಹೊರರಾಜ್ಯ ಮತ್ತು ಹೊರ ದೇಶಗಳಿಂದ ಬಂದಿದ್ದು ಅವರನ್ನೆಲ್ಲಾ ಕ್ವಾರಂಟೈನ್‌ನಲ್ಲಿಡಲಾಗಿದೆ. ಅವರೆಲ್ಲರನ್ನೂ ಟೆಸ್ವ್‌ ಮಾಡಿ, ನೆಗೆಟಿವ್‌ ಬಂದರೆ ಕ್ವಾರಂಟೈನ್‌ ಅವಧಿ ಮುಗಿಯುತಿದ್ದಂತೆ ಮನೆಗೆ ಬಿಡಲಾಗುತ್ತಿದೆ.

ಗಣಪತಿ ಕೆರೆ ಸರ್ವೆ ವೀಕ್ಷಣೆಗೆ ಜನವೋ ಜನ

ಆದರೆ ಈ ಮಹಿಳೆ ಕೊರೋನಾ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿರುವುದು ಪತ್ತೆಯಾಗಿದ್ದು, ಆವತ್ತಿನಿಂದ ಇನ್ನೂ 14 ದಿನಗಳವರೆಗೆ ಕ್ವಾರಂಟೈನ್‌ನಲ್ಲಿ ಅವರು ಇರಲೇಬೇಕು, ಆದ್ದರಿಂದ ಅವರನ್ನು ಮನೆಗೆ ಕಳುಹಿಸಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Follow Us:
Download App:
  • android
  • ios