ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಗೆ ಇನ್ನೆರಡು ದಿನವಷ್ಟೇ ಬಾಕಿ ಉಳಿದಿದೆ. ಇದೇ ವೇಳೆ ಯಲ್ಲಾ ಪುರ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಲೆಕ್ಕಾಚಾರ ತಲೆಕೆಳಗಾಗಲಿದೆ ಎನ್ನಲಾಗಿದೆ.
ಮುಂಡಗೋಡ [ಡಿ.01]: ರಾಜೀನಾಮೆ ನೀಡಿದ ತಕ್ಷಣ ಅಂಗೀಕಾರವಾಗುತ್ತದೆ, ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡು ಆ ನಂತರ ಚುನಾವಣೆ ಎದುರಿಸುವ ಅನರ್ಹ ಶಾಸಕ ಶಿವರಾಮ ಹೆಬ್ಬಾರ ಅವರ ಸ್ವಾರ್ಥದ ಲೆಕ್ಕಾಚಾರ ಸಂಪೂರ್ಣ ತಲೆ ಕೆಳಗಾಗಿದೆ ಎಂದು ಮಾಜಿ ಸಚಿವ ಪ್ರಮೋದ ಮಧ್ವರಾಜ್ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜೀನಾಮೆ ನೀಡಿ 2 ತಿಂಗಳು ಕಳೆದರೂ ರಾಜೀನಾಮೆ ಅಂಗಿಕಾರವಾಗದೆ, ಮುಂಬೈ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದು, ಪ್ರವಾಹ ಬಂದಾಗ ಜನರ ಸಹಾಯಕ್ಕೆ ಬರದೇ ಇರುವುದು, ಎಲ್ಲವನ್ನು ಜನ ಹತ್ತಿರದಿಂದ ಗಮನಿಸಿದ್ದಾರೆ. ಪಕ್ಷಾಂತರಿಗಳನ್ನು ಸೋಲಿಸಲೇಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಈಗ ಅವರು ಯಾವುದೇ ಮಸಲತ್ತು ಮಾಡಿದರೂ ನಡೆಯುವುದಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಸರಳ, ಸಜ್ಜನ ಹಾಗೂ ನಿಷ್ಠಾವಂತ ವ್ಯಕ್ತಿ ಎಂಬ ಭಾವನೆ ಜನರಲ್ಲಿ ಬಂದಿದೆ. ಹಾಗಾಗಿ ಭೀಮಣ್ಣ ನಾಯ್ಕ ಗೆಲವು ಖಚಿತ ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತಮ್ಮ ಜತೆ ಕಾಂಗ್ರೆಸ್‌ನವರೆಲ್ಲ ಬರುತ್ತಾರೆ ಎಂಬ ನಿರೀಕ್ಷೆ ಶಿವರಾಮ ಹೆಬ್ಬಾರ ಅವರದ್ದಾಗಿತ್ತು. ಆದರೆ, ಹೋದವರು ಕೆಲವೇ ಕೆಲವರು. ಪಕ್ಷದ ಬೆನ್ನೆಲುಬಾದ ಕಾರ್ಯಕರ್ತರು ಮಾತ್ರ ಪಕ್ಷದಲ್ಲಿಗಟ್ಟಿಯಾಗಿದ್ದುಕೊಂಡು ಹೆಬ್ಬಾರ ಪಕ್ಷಕ್ಕೆ ಮಾಡಿದ ದ್ರೋಹಕ್ಕೆ ಸೇಡು ತೀರಿಸಿಕೊಳ್ಳುವ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದಾರೆ. ಹೆಬ್ಬಾರ ಅವರ ಫಲಿತಾಂಶದ ಅಂತಿಮ ಲೆಕ್ಕಾಚಾರ ಕೂಡ ಬುಡಮೇಲಾಗಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಸದಾನಂದ ಡಂಗನವರ, ಮಾಜಿ ಜಿಪಂ ಅಧ್ಯಕ್ಷ ರಾಮಕೃಷ್ಣ ಮೂಲಿಮನಿ, ಧರ್ಮರಾಜ ನಡಗೇರಿ, ವಾದಿರಾಜ, ಮಂಜುನಾಥ ಉಪಸ್ಥಿತರಿದ್ದರು.
