Asianet Suvarna News Asianet Suvarna News

ಫುಲ್ ಗರಂ ಆದ ಸಂಸದ ಪ್ರಜ್ವಲ್ : ಓಡೋಡಿ ಬಂದ ಅಧಿಕಾರಿಗಳು !

ಸಂಸದ ಪ್ರಜ್ವಲ್ ರೇವಣ್ಣ ಸಭೆಗೆ ಬಂದ್ರೂ ಬಾರದ ಅಧಿಕಾರಿಗಳ ವಿರುದ್ಧ ಫುಲ್ ಗರಂ ಆಗಿದ್ದು,  ಇಂತಹ ಬೇಜವಾಬ್ದಾರಿ ಇರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಡಿಸಿಗೆ ಸೂಚನೆ ನೀಡಿದ್ರು. 

Prajwal Revanna Slams Officers In Hassan ZP Meeting
Author
Bengaluru, First Published Jan 21, 2020, 12:18 PM IST

ಹಾಸನ (ಜ.21):  ನಿಗದಿತ ಸಮಯಕ್ಕೆ ಅಧಿಕಾರಿಗಳು ಸಭೆಗೆ ಆಗಮಿಸದ ಕಾರಣ ಸಂಸದರು ಗರಂ ಆದರಲ್ಲದೇ, ಮೇಲ್ದರ್ಜೆಯ ಅಧಿಕಾರಿಗಳು ಸಭೆಗೆ ಹಾಜರಾಗದೆ ಇರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಸಿಗೆ ಸಂಸದ ಪ್ರಜ್ವಲ್‌ ರೇವಣ್ಣ ಸೂಚಿಸಿದರು.

ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಂಭಾಗಣದಲ್ಲಿ ಸೋಮವಾರ ಸಂಸದ ಪ್ರಜ್ಬಲ್‌ ರೇವಣ್ಣ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಮೂರನೇ ತ್ರೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯು 12.30 ಗಂಟೆಗೆ ನಿಗದಿ ಮಾಡಲಾಗಿತ್ತು. ಆದರೆ, ಸಂಸದರು ಹಾಗೂ ಕೆಲ ಶಾಸಕರು ನಿಗದಿತ ಸಮಯಕ್ಕೆ ಬಂದರೂ ಅಧಿಕಾರಿಗಳು ಬಂದಿರಲಿಲ್ಲ. ಇದನ್ನು ಗಮನಿಸಿದ ಸಂಸದರು ಅಧಿಕಾರಿಗಳ ಬೇಜಾಬ್ದಾರಿಗೆ ಅಸಮಾಧಾನಗೊಂಡರು. ನಂತರ ಕೆಲವೇ ಹೊತ್ತಿಗೆ ಕೆಲ ಅಧಿಕಾರಿಗಳು ಓಡೋಡಿ ಬಂದರು. ಬಳಿಕ ಸಭೆಯನ್ನು ಪ್ರಾರಂಭ ಮಾಡಲಾಯಿತು.

ಈ ವೇಳೆ ಮಾತನಾಡಿದ ಅವರು, ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ಸಭೆ ನಡೆಸಲಾಗುತ್ತಿದ್ದು, ಸಭೆಗೆ ಹಾಜರಾಗದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಧಿಕಾರಿಗಳು ಸಭೆಗೆ ಬರದಿದ್ದಲ್ಲಿ ಸಮಸ್ಯೆಗಳನ್ನು ಬಗೆ ಹರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಸಭೆಗೆ ಉನ್ನತ ದರ್ಜೆಯ ಅಧಿಕಾರಿಗಳೇ ಕಡ್ಡಾಯವಾಗಿ ಸಭೆಗೆ ಹಾಜರಾಗಿ ಪ್ರಗತಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ತಂದೆ ರೇವಣ್ಣ ಕೆಳಗೆ - ಪ್ರಜ್ವಲ್‌ ಮೇಲೆ : ಮಗನನ್ನೇ ಸರ್ ಎನ್ನುತ್ತಿದ್ದ ರೇವಣ್ಣ

ಹಾಸನದ ಹೊಸ ಬಸ್‌ ನಿಲ್ದಾಣದ ಪಕ್ಕದಲ್ಲಿ ಸ್ಥಳೀಯ ರೈಲುಗಳ ನಿಲುಗಡೆಗೆ ವ್ಯವಸ್ಥೆ ಮಾಡುವಂತೆ ರೈಲ್ವೆ ಇಲಾಖೆಗೆ ಮನವಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರೈಲ್ವೇ ಇಲಾಖೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತೆ ವಹಿಸಬೇಕು. ಹಾಸನ- ಚಿಕ್ಕಮಗಳೂರು ರೈಲು ಮಾರ್ಗ ಯಾವ ಊರುಗಳ ಮೂಲಕ ಹಾದು ಹೋಗುತದೆ ಎಂಬ ಮಾಹಿತಿಯನ್ನು ಕೂಡಲೇ ಜಿಲ್ಲಾಧಿಕಾರಿಗೆ ನೀಡಲು ಸೂಚನೆ ನೀಡಿದರು.

ಸಿಎಂ BSY ಚುನಾವಣಾ ನಿವೃತ್ತಿ ವಿಚಾರ ನನಗೆ ಗೊತ್ತಿಲ್ಲ : ಸಚಿವ ಮಾಧುಸ್ವಾಮಿ...

ಜಿಲ್ಲೆಯಲ್ಲಿನ ರೈಲುಗಳ ನಿಲುಗಡೆ ಬಗ್ಗೆ ಹಾಗೂ ಯಾವುದೇ ಸ್ಥಳೀಯ ಸಮಸ್ಯೆ ಬಗ್ಗೆ ಬೆಂಗಳೂರು ವಲಯ ಹಾಗೂ ಹಾಸನ ವಲಯ ರೈಲು ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಲಾಗುವುದು. ಎಲ್ಲಾ ಮೇಲ್ದರ್ಜೆಯ ಅಧಿಕಾರಿಗಳು ಸಭೆಗೆ ಹಾಜರಿರಬೇಕು ಎಂದ ಅವರು, ಸಕಲೇಶಪುರದಿಂದ ಹಾಸನ ರಸ್ತೆ ಮಾರ್ಗ ತುರ್ತಾಗಿ ಗುಂಡಿ ಮುಚ್ಚುವ ಕೆಲಸ ಮಾಡಿ ಅಪಘಾತಗಳನ್ನು ತಡೆಗಟ್ಟಿಎಂದು ಸೂಚನೆ ನೀಡಿದರು.

ರಸ್ತೆ ನಿರ್ಮಾಣದ ವೇಳೆ ಗ್ರಾಮೀಣ ಹಾಗೂ ಸಾರ್ವಜನಿಕ ಸ್ಥಳಗಳ ಬಳಕೆಗಾಗಿ ಪ್ರತಿಯಾಗಿ ಯಾವುದಾದರೂ ಕೊಡುಗೆ ನೀಡಬೇಕು ಅಥವಾ ಆ ಸ್ಥಳಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದರು.

ಶಾಸಕ ಎಚ್‌.ಕೆ. ಕುಮಾರಸ್ವಾಮಿ ಮಾತನಾಡಿ, ಹಾಸನ -ಸಕಲೇಶಪುರ ಮಾರ್ಗದಲ್ಲಿ ಆಲೂರು ಮಾತ್ತು ಇನ್ನಿತರ ಸ್ಥಳಗಳಲ್ಲಿ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಬೇಕು. ರಾಷ್ಟ್ರೀಯ ಹೆದ್ದಾರಿ ಆಗಿರುವ ಕಾರಣ ಬಸ್‌ಗಳ ಸಮಸ್ಯೆಯಿಂದ ಜನರು. ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.

ಹಾಸನ ಸಕಲೇಶಪುರ ಮಾರ್ಗದ ರಸ್ತೆ ಬಗ್ಗೆ ಅನೇಕ ಸಭೆಗಳಾಗಿದ್ದರು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಹಾಗೂ ರಸ್ತೆ ಕಾಮಗಾರಿ ಯಾವ ಹಂತದಲ್ಲಿದೆ ಎಂಬ ಯಾವುದೇ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸದ ಅಧಿಕಾರಿಗಳು ಬೇಜಾವಾಬ್ದಾರಿತನದಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ ಎಂದರು.

ಸಭೆಯಲ್ಲಿ ಶಾಸಕರಾದ ಕೆ.ಎಸ್‌.ಲಿಂಗೇಶ್‌, ಸಿ.ಎನ್‌.ಬಾಲಕೃಷ್ಣ, ಎ.ಟಿ ರಾಮಸ್ವಾಮಿ, ಜಿಲ್ಲಾಧಿಕಾರಿ ಆರ್‌.ಗಿರೀಶ್‌, ಜಿಪಂ ಸಿಇಒ ಬಿ.ಎ ಪರಮೇಶ್‌, ಎಡಿಸಿ ಕವಿತಾ ರಾಜಾರಾಂ, ತಾಪಂ ಅಧ್ಯಕ್ಷ ನಿಂಗೇಗೌಡ, ನಾನಾ ಇಲಾಖೆ ಅಧಿಕಾರಿಗಳು, ಇತರರು ಇದ್ದರು.

Follow Us:
Download App:
  • android
  • ios