Asianet Suvarna News Asianet Suvarna News

Ramanagara: ಸರ್ಕಾರದ ನಿರ್ಲಕ್ಷದಿಂದ ಕುಂಬಾರಿಕೆ ಸಂಕೀರ್ಣ ಬಂದ್!

ಜಗತ್ತು ಬದಲಾದಂತೆ ಮನುಷ್ಯನ ಬೇಡಿಕೆಗಳು ಅಗತ್ಯತೆಗಳು ಬದಲಾಗುತ್ತವೆ. ಇವತ್ತು ಇರುವ ವಸ್ತು ನಾಳೆಗೆ ಹಳೇಯದಾಗುವುದು ಪ್ರಕೃತಿ ನಿಯಮ. ಒಂದು ಕಾಲದಲ್ಲಿ ಬದುಕಿನ ಭಾಗವಾಗಿದ್ದ ಕುಂಬಾರಿಕೆ ಇಂದು ವಿನಾಶದ ಅಂಚಿಗೆ ತಲುಪಿದೆ.

pottery complex closed with government neglect in ramanagara gvd
Author
Bangalore, First Published May 30, 2022, 10:40 PM IST

ವರದಿ: ಜಗದೀಶ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ (ಮೇ.30): ಜಗತ್ತು ಬದಲಾದಂತೆ ಮನುಷ್ಯನ ಬೇಡಿಕೆಗಳು ಅಗತ್ಯತೆಗಳು ಬದಲಾಗುತ್ತವೆ. ಇವತ್ತು ಇರುವ ವಸ್ತು ನಾಳೆಗೆ ಹಳೇಯದಾಗುವುದು ಪ್ರಕೃತಿ ನಿಯಮ. ಒಂದು ಕಾಲದಲ್ಲಿ ಬದುಕಿನ ಭಾಗವಾಗಿದ್ದ ಕುಂಬಾರಿಕೆ ಇಂದು ವಿನಾಶದ ಅಂಚಿಗೆ ತಲುಪಿದೆ. ಮಣ್ಣಿನ ಮಡಿಕೆಯ ನೆನಪು ಇಂದಿನ ಯುವ ಪೀಳಿಗಿಗೆ ಇಲ್ಲದ ಸ್ಥಿತಿ ಉದ್ಭವಿಸಿದೆ. ಮಡಿಕೆ ಇರುವ ಜಾಗದಲ್ಲಿ ಸ್ಟೀಲ್, ಹಿತ್ತಾಳೆ, ಕಂಚು, ಅಲ್ಯೂಮಿನಿಯಂ ಪಾತ್ರೆಗಳು ಬೆಸೆದುಕೊಂಡಿದ್ದು, ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕಲೆ ಮರೆಯಾಗುತ್ತಿದೆ. ಕುಂಬಾರಿಕೆ ಮಾಡಲು ಬಳಸುತ್ತಿದ್ದ ಯಂತ್ರುಗಳು ತುಕ್ಕು ಹಿಡಿಯುತ್ತಿವೆ.

ರಾಮನಗರದ ಬೆಂಗಳೂರು-ಮೈಸೂರು ಹೆದ್ದಾರಿಯ ಕುಂಬಾಪುರ ಗ್ರಾಮದ ಬಳಿ ಸರ್ಕಾರವೇ ಕಾವೇರಿ ಕುಂಬಾರಿಕೆ ಕಲಾ ಸಂಕೀರ್ಣವನ್ನ ತೆರೆದಿತ್ತು. ಕುಂಬಾರಿಕೆ ವೃತ್ತಿ ಮಾಡುತ್ತಿದ್ದ ಮಂದಿಗೆ ಆಸರೆಯಾಗಿತ್ತು. 1990ರಲ್ಲಿ ರಾಜ್ಯ ಸರ್ಕಾರ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವತಿಯಿಂದ ಕುಂಬಾರಿಕೆ ಸಂಕೀರ್ಣವನ್ನ ಸ್ಥಾಪಿಸಲಾಗಿತ್ತು. ಇಲ್ಲಿ ಸ್ಥಳೀಯ ಕುಂಬಾರಿಕೆ ಕುಟುಂಬಗಳಲ್ಲದೆ ಉತ್ತರ ಕರ್ನಾಟಕದ 15 ಕುಟುಂಬಗಳು ಇಲ್ಲಿ ಕುಂಬಾರಿಕೆ ನಡೆಸುತ್ತಿದ್ದವು. ಆದ್ರೆ ಕಾಲ ಬದಲಾದಂತೆ ಮಣ್ಣಿನ ಜಾಗದಲ್ಲಿ ಸ್ಟೀಲ್, ಹಿತ್ತಾಳೆ, ಕಂಚು, ಅಲ್ಯೂಮಿನಿಯಂ ಪಾತ್ರೆಗಳು ಮಾರುಕಟ್ಟೆಗೆ ಬಂದು ಮಣ್ಣಿನ ಕಲಾಕೃತಿಗಳಿಗೆ ಬೇಡಿಕೆ ಇಲ್ಲಾದಂತಾಗಿ ಹೋಗಿದೆ. 

Ramanagaraದಲ್ಲಿ ಬಾಣಂತಿ-ಋತುಮತಿಯರಿಗೆ 30ದಿನ ಊರ ಹೊರಗೆ ವಾಸ್ತವ್ಯ!

ಸರ್ಕಾರವೂ ಇತ್ತ ಗಮನ ಅರಿಸುವುದನ್ನ ಬಿಟ್ಟಿದೆ. ಇದರಿಂದ ಕುಂಬಾರಿಕೆ ಸಂಕೀರ್ಣವು ಕೂಡ ನಿಂತ್ತು ಹೊಗಿದ್ದು ಇದನ್ನೇ ನಂಬಿ ಜೀವನ ನಡೆಸುತ್ತಿದ್ದ ಕುಟುಂಬಗಳು ಕೂಡ ಇಲ್ಲಿಂದ ಕಾಲ್ಕಿತ್ತಿವೆ. ಅಂದಹಾಗೆ, ಸರ್ಕಾರವೇ ಪ್ರಾರಂಭಿಸಿದ್ದ ಕುಂಬಾರಿಕೆ ಕಲಾ ಸಂಕೀರ್ಣದಲ್ಲಿ ಹಲವು ಗೃಹ ಉಪಯೋಗಿ ವಸ್ತುಗಳನ್ನ ತಯಾರು ಮಾಡಲಾಗುತಿತ್ತು. ಕರಕುಶಲ ಬೊಂಬೆಗಳು, ಪಾಟ್‌ಗಳು, ತುಳಸಿ ಪಾಟ್, ವಾಸ್ತು ಭರಣಿ, ದೀಪಗಳು, ಗಣೇಶ ಮೂರ್ತಿಗಳು, ಮಡಿಕೆಗಳು ಹೀಗೆ ಹತ್ತು ಹಲವು ಗೃಹ ಅಲಂಕಾರಿಕ ವಸ್ತುಗಳನ್ನ ತಯಾರು ಮಾಡಲಾಗುತಿತ್ತು. ಗ್ರಾಹಕರ ಅಗತ್ಯಕ್ಕೆ ತಕ್ಕಂತಹ ವಸ್ತುಗಳು ಸಿದ್ದವಾಗುತಿದ್ದವು. 

Ramanagara: ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ ಈ ಅಂಗನವಾಡಿ: ಇಲ್ಲಿ ಎಲ್ಲವೂ ಸ್ಮಾರ್ಟ್!

ಆದರೆ, ಈಗ ಈ ಕಲಾ ಸಂಕೀರ್ಣಕ್ಕೆ ಸರ್ಕಾರದ ಪ್ರೋತ್ಸಾಹ ಸಿಗದ ಕಾರಣ ಕುಂಬಾರಿಕ ಕುಟುಂಬಗಳು ಇಲ್ಲಾದಂತಾಗಿ ಗ್ರಾಹಕರು ಕೂಡ ಇತ್ತ ಬಾರದಂತಾಗಿದ್ದಾರೆ. ಇಲ್ಲಿ ತಯಾರು ಮಾಡುತ್ತಿದ್ದ ಮಣ್ಣಿನ ಕಲಾಕೃತಿಗಳು ದೇಶ ವಿದೇಶಗಳಿಗೆ ರಪ್ತು ಆಗುತ್ತಿದ್ದವು. ವರ್ಷಗಳು ಉರುಳಿದಂತೆ ಸರ್ಕಾರದ ನಿರ್ಲಕ್ಷ್ಯದಿಂದ ಈ ಕಲಾ ಸಂಕೀರ್ಣ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಯಂತ್ರೋಪಕರಣಗಳು ತುಕ್ಕು ಹಿಡಿಯುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಹಲವು ಕರಕುಶಲ ಕಾರ್ಖಾನೆಗಳು ಅವನತಿಯ ಹಂಚಿಗೆ ಸೇರಿವೆ. ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಕರಕುಶಲ ಕಾರ್ಖಾನೆಯನ್ನ ಪುನಶ್ಚೇತನ ಮಾಡಬೇಕಿದೆ.

Follow Us:
Download App:
  • android
  • ios