ರೈತರಿಗೆ ಬಂಪರ್ ಲಾಟರಿ ಹೊಡೆದಂತಾಗಿದೆ. ಭರ್ಜರಿ ಲಾಭ ರೈತರ ಕೈ ಸೇರುತ್ತಿದೆ. ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಕೋಲಾರ (ಡಿ.01): ಆಲೂಗಡ್ಡೆ ಬೆಲೆ ಏರಿಕೆಯಾಗಿದ್ದು ರೈತರಲ್ಲಿ ಸಂತಸವನ್ನುಂಟು ಮಾಡಿದೆ. 50 ಕೆಜಿ ತೂಕದ ಒಂದು ಮೂಟೆ ಆಲೂಗಡ್ಡೆ ಬೆಲೆ 1500 ರು.ಗಳಾಗಿದ್ದು ಆಲುಗಡೆ ಬೆಳೆದವರಿಗೆ ಸುಗ್ಗಿಯೋ ಸುಗ್ಗಿ.
ಜಿಲ್ಲೆಯಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಯಲಾಗುತ್ತಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಹೆಯಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿದವರಿಗೆ ಈಗ ಬೆಳೆಗೆ ಒಳ್ಳೆಯ ಬೆಲೆ ಸಿಕ್ಕಿದೆ.
ಜಿಲ್ಲೆಯ ರೈತರಿಗೆ ಬಂಪರ್ ಲಾಟರಿ
ಹಾಸನ ಮತ್ತು ಮಂಡ್ಯ ಹಾಗು ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಮಳೆ ಹೆಚ್ಚಾಗಿ ಬಿದ್ದುದರಿಂದ ಆ ಭಾಗದಲ್ಲಿ ಆಲೂಗಡೆಡ ಬೆಳೆ ಸಂಪೂರ್ಣ ನೆಲ ಕಚ್ಚಿವೆ. ಇದರಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಗು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಆಲೂಗಡ್ಡೆ ಬೆಳೆದ ರೈತರಿಗೆ ಲಾಟರಿ ಹೊಡೆದಂತಾಗಿದೆ.
'ಭತ್ತ, ರಾಗಿಗೆ ಬೆಂಬಲ ಬೆಲೆ ಅಡಿ ಖರೀದಿ ಕೇಂದ್ರ ಸ್ಥಾಪನೆ' ..
ಆಂಧ್ರ ಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಜಿಲ್ಲೆಯಲ್ಲೂ ಇತ್ತೀಚೆಗೆ ಮಳೆ ಹೆಚ್ಚಿಗೆ ಬಿದ್ದಿರುವುದರಿಂದ ಸಾಕಷ್ಟುಆಲುಗಡ್ಡೆ ತೋಟಗಳು ಹಾಳಾಗಿವೆ, ಇದರ ಜತೆಗೆ ಅಂಗಮಾರಿ ರೋಗವೂ ತಗುಲಿ ಬೆಳೆಗಳು ಹಾಳಾಗಿರುವುದರಿಂದ ಈಬಾರಿ ಆಲುಗಡ್ಡೆಗೆ ಹೆಚ್ಚಿನ ಬೆಲೆ ಸಿಕ್ಕಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಬಿತ್ತನೆ ಬೀಜಕ್ಕೂ ಹೆಚ್ಚು ಬೆಲೆ
ಆಲೂಗಡ್ಡೆ ಬಿತ್ತನೆ ಬೀಜದ ಬೆಲೆಯೂ ಈ ಬಾರಿ ಹೆಚ್ಚಿದೆ, 50 ಕೆಜಿ ಮೂಟೆಯೊಂದಕ್ಕೆ 5 ರಿಂದ 6 ಸಾವಿರ ಬೆಲೆ ಇದೆ, ಬಿತ್ತನೆ ಬೀಜ ದುಬಾರಿಯಾಗಿದ್ದು ಬಿತ್ತನೆ ಮಾಡಲು ರೈತರು ಹಿಂದೆ ಮುಂದೆ ನೋಡುತ್ತಿದ್ದಾರೆ.
ಆಲೂಗಡ್ಡೆಗೆ ಬೆಲೆ ಇದ್ದರೂ ಆದರ ಲಾಭ ಸಿಗುವುದು ಕಡಿಮೆ ಸಂಖ್ಯೆಯ ರೈತರಿಗೆ, ಜಿಲ್ಲೆಯಲ್ಲಿ ಒಂದು ಕಾಲದಲ್ಲಿ ಆಲೂಗಡ್ಡೆಯನ್ನು ಹೆಚ್ಚಾಗಿ ಬೆಳೆಯುತ್ತಿದ್ದರು, ಆದರೆ ಆಲೂಗಡ್ಡೆಗೆ ಹೆಚ್ಚಿನ ಖರ್ಚು ತಗಲುವುದರಿಂದ ಮತ್ತು ಅದರಿಂದ ಲಾಭ ಸಿಗುವುದು ಕಡಿಮೆಯಾಗಿದ್ದರಿಂದ ಬಹಳಷ್ಟುಮಂದಿ ರೈತರು ಅಲೂಗಡ್ಡೆ ಬೆಳೆಯುವುದರಿಂದ ಲಾಭ ಗಳಿಸಲು ಸಾಧ್ಯವಿಲ್ಲವೆಂದೆಣಿಸಿ ಅನ್ಯ ಬೆಳೆಗಳಿಗೆ ಮಾರುಹೋದರು. ಇದರ ಜತೆಗೆ ಜಿಲ್ಲೆಯಲ್ಲಿ ಅಂತರ್ಜಲ ಕಡಿಮೆಯಾಗಿ ಕೊಳವೆ ಬಾವಿಗಳು ಬತ್ತಿ ಹೋಗಿದ್ದರಿಂದ ತೋಟಗಾರಿಕೆ ಬೆಳೆಗಳನ್ನು ಮಾಡುವುದನ್ನೇ ಬಿಟ್ಟರು.
ಜಿಲ್ಲೆಯಲ್ಲಿ ಆಲೂ ಉತ್ಪಾದನೆ ಕಡಿಮೆ
ಹೀಗಾಗಿ ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆ ಬೆಳೆಯುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಆದರೆ ಈ ಬಾರಿ ಆಲೂಗಡ್ಡೆಗೆ ಹೆಚ್ಚಿನ ಬೆಲೆ ಸಿಗುವುದರಿಂದ ಇದರ ಲಾಭ ಪಡೆಯುವ ರೈತರು ಬಹಳ ಕಡಿಮೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 1, 2020, 12:36 PM IST