ಒಂದೂವರೆ ಕೋಟಿ ರು. ಪೋಸ್ಟ್‌ ಮಾಸ್ಟರ್‌ ಪಾಲು

150 ಕ್ಕೂ ಹೆಚ್ಚು ಜನರು ಉಳಿತಾಯ ಮಾಡಿದ್ದ ಒಂದೂವರೆ ಕೋಟಿಗೂ ಹೆಚ್ಚು ಹಣವನ್ನು ಪೋಸ್ಟ್ ಮಾಸ್ಟರ್ ಲಪಟಾಯಿಸಿದ ಘಟನೆ ನಡೆದಿದೆ.  

Postmaster Fraud Nearly RS 2 Crore in Koppal

ಕೊಪ್ಪಳ [ಜ.18]: ಅಂಚೆ ಕಚೇರಿಯಲ್ಲಿ ಉಳಿತಾಯ ಮಾಡಿದ ಸುಮಾರು 150ಕ್ಕೂ ಹೆಚ್ಚು ಜನರ ಸುಮಾರು 1.5 ಕೋಟಿ ರು. ಪೋಸ್ಟ್‌ ಮಾಸ್ಟರ್‌ ಒಬ್ಬರು ಲಪಟಾಯಿಸಿದ ಘಟನೆ ತಾಲೂಕಿನ ಮಾದಿನೂರು ಅಂಚೆ ಕಚೇರಿಯಲ್ಲಿ ನಡೆದಿದ್ದು, ಸ್ವತಃ ಪೋಸ್ಟ್‌ ಮಾಸ್ಟರ್‌ ಮಾಡಿರುವ ಅವ್ಯವಹಾರವನ್ನು ಒಪ್ಪಿಕೊಂಡಿದ್ದಾನೆ.

ತಾಲೂಕಿನ ಕಿನ್ನಾಳ ಗ್ರಾಮದ ಪ್ರಸನ್ನ ಪುರೋಹಿತ ಹಣವನ್ನು ಗುಳುಂ ಮಾಡಿರುವ ವ್ಯಕ್ತಿ. ಮಾದಿನೂರು ಅಂಚೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ಕೃತ್ಯ ನಡೆಸಿದ್ದು, ವರ್ಷದ ಹಿಂದೆಯೇ ಘಟನೆ ನಡೆದಿದ್ದರೂ ಇದೀಗ ಬೆಳಕಿಗೆ ಬಂದಿದ್ದು, ನಾಲ್ಕಾರು ಜನರು ದೂರು ದಾಖಲಿಸಿದ ಬಳಿಕ ಬಹಿರಂಗಗೊಂಡಿದೆ.

ಗವಿಮಠದ ಜಾತ್ರೆ: ಪೊರಕೆ ಹಿಡಿದು ಕಸಗೂಡಿಸಿದ ಕೊಪ್ಪಳ ಎಸ್‌ಪಿ..

ಅಂಚೆ ಇಲಾಖೆಯ ತಮ್ಮ ಉಳಿತಾಯ ಖಾತೆಗಳಿಗೆ ಹಣ ಸಂದಾಯ ಮಾಡಲು ಬರುವ ಗ್ರಾಹಕರ ಹಣವನ್ನು ಅವರ ಖಾತೆಗೆ ಸಂದಾಯ ಮಾಡದೇ, ಒಂದು ಚಿಕ್ಕ ಪುಸ್ತಕದಲ್ಲಿ ಬರೆದು ಅದರ ಮೇಲೆ ಅಂಚೆ ಕಚೇರಿಯ ಸೀಲ್‌ ಹಾಕಿ ಪ್ರಸನ್ನ ಪುರೋಹಿತ ನೀಡುತ್ತಿದ್ದನು ಎನ್ನಲಾಗಿದೆ. ಇದರಿಂದ ಅನುಮಾನಗೊಂಡ ಕೆಲವರು ಪಟ್ಟು ಹಿಡಿದು ಹಣ ನೀಡುವಂತೆ ಕೇಳಿದ್ದಾರೆ. 

ಗವಿಮಠ ಜಾತ್ರೆಗೆ 1 ಲಕ್ಷ ಶೇಂಗಾ ಹೋಳಿಗೆ: ಮುಸ್ಲಿಂ ಭಕ್ತರಿಂದಲೂ ಸೇವೆ..

ಇದಕ್ಕೆ ಆತ ತನ್ನ ಹೊಲ ಮಾರಿಯಾದರೂ ನೀಡುತ್ತೇನೆಂದು ಭರವಸೆ ನೀಡಿ ತಲೆ ಮರೆಸಿಕೊಂಡಿದ್ದು, ಇದರ ಬಗ್ಗೆ ವಂಚನೆಗೊಳಗಾದವರು ಪೊಲೀಸರಿಗೆ ದೂರು ದಾಖಲಿಸಿದಾಗ ವಂಚನೆ ಪ್ರಕರಣ ಬಯಲಾಗಿದೆ. ಅಲ್ಲದೇ ಅಂಚೆ ಕಚೇರಿಯ 8-10 ಲಕ್ಷ ರು. ಇಲಾಖೆಯ ಹಣವನ್ನು ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

Latest Videos
Follow Us:
Download App:
  • android
  • ios