ಮಂಗಳೂರು(ಫೆ.01): ಖ್ಯಾತ ಪತ್ರಕರ್ತ ರಿಪಬ್ಲಿಕ್‌ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿಗೆ ಇಂಡಿಗೋ ವಿಮಾನದಲ್ಲಿ ಮುಜುಗರ ಉಂಟುಮಾಡಿದಂತಹುದೇ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ. ಪೋಸ್ಟ್‌ ಕಾರ್ಡ್‌ ವೆಬ್‌ ಸೈಟ್‌ನ ಸಂಪಾದಕ ಮಹೇಶ್‌ ವಿಕ್ರಂ ಹೆಗ್ಡೆ ಈ ಬಾರಿ ಮುಜುಗರಕ್ಕೆ ಒಳಗಾಗಿದ್ದಾರೆ.

ಪೋಸ್ಟ್‌ ಕಾರ್ಡ್‌ ವೆಬ್‌ಸೈಟ್‌ ಮುಖ್ಯಸ್ಥ ಮಹೇಶ್‌ ವಿಕ್ರಂ ಹೆಗ್ಡೆ ಅವರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮೂವರು ಯುವತಿಯರು ‘ವಂದೇ ಮಾತರಂ’ ಹೇಳುವಂತೆ ಒತ್ತಾಯಿಸಿ ರೇಗಿಸಲು ಮುಂದಾದ ವಿದ್ಯಮಾನ ನಡೆದಿದೆ. ಇದನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇದೀಗ ವೈರಲ್‌ ಆಗಿದೆ.

'ಬಿಜೆಪಿ ಹೆಚ್ಚು ಸ್ಥಾನ ಗಳಿಸಲು ನಮ್ಮ ಸಮಾಜ ಕಾರಣ: ಶ್ರೀರಾ​ಮುಲುಗೆ DCM ಪಟ್ಟ ಕೊಡಿ'

ಶ್ರೀ ಕ್ಷೇತ್ರ ಕಟೀಲಿನ ಬ್ರಹ್ಮಕಲಶೋತ್ಸವಕ್ಕೆ ಆಗಮಿಸಿದ್ದ ಮಹೇಶ್‌ ವಿಕ್ರಂ ಹೆಗ್ಡೆ ಅವರು, ಬೆಂಗಳೂರಿಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಿದ್ದರು. ಈ ಸಂದರ್ಭ ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದ ಕವಿತಾ ರೆಡ್ಡಿ, ನಜ್ಮಾ ನಝೀರ್‌ ಹಾಗೂ ಅಮೂಲ್ಯ ಎಂಬವರು ಮಹೇಶ್‌ ಕುಳಿತಲ್ಲಿಗೆ ಬಂದಿದ್ದರು.

ಸ್ಪೀಕ್ ಅಪ್ ಅರ್ನಬ್ ಎಂದು ಹೇಳಿ ನಿಷೇಧಕ್ಕೊಳಗಾದ ಕಾಮಿಡಿಯನ್!

ಗಾಂಧಿಜಿಯನ್ನು ಕೊಂದವರು ನೀವೇ ಅಲ್ವಾ? ಮನುವಾದಿಗಳು, ಬ್ರಾಹ್ಮಣರು, ಪೋಸ್ಟ್‌ ಕಾರ್ಡಲ್ಲಿ ಏನೆಲ್ಲಾ ಬರೀತಿರಾ’ ಎಂದು ಟೀಕೆ ಮಾಡಲಾರಂಭಿಸಿದರು. ಇದಾವುದಕ್ಕೂ ಮಹೇಶ್‌ ವಿಕ್ರಂ ಹೆಗ್ಡೆ ಪ್ರತಿಕ್ರಿಯೆ ನೀಡಿಲ್ಲ. ಬಳಿಕ ಯುವತಿಯರು ‘ವಂದೇ ಮಾತರಂ’ ಹಾಡಿ ಎಂದು ರೇಗಿಸಿದ್ದರು. ಆಗಲೂ ವಿಕ್ರಂ ಹೆಗ್ಡೆ ಮಾತನಾಡಿಲ್ಲ. ನಂತರ ‘ಸಾರೆ ಜಹಾಂಸೆ ಅಚ್ಛೇ’ ಹಾಡಿ ಎಂದಿದ್ದರು. ಅದಕ್ಕೂ ವಿಕ್ರಂ ಹೆಗ್ಡೆ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ.

ಭಾರತದ ಭವಿಷ್ಯ ಬದಲಿಸಿದ 10 ಬಜೆಟ್‌ಗಳು

ನಾನು ಹಾಡುತ್ತಿದ್ದರೆ ಇನ್ನೊಂದು ಯಾವುದಾದರೂ ಹಾಡಲು ಹೇಳುತ್ತಿದ್ದರು. ಕುಳಿತಲ್ಲಿಂದ ಎದ್ದು ಹೋಗುತ್ತಿದ್ದರೆ ಪುಕ್ಕಲ ಎಂದು ಹೇಳುತ್ತಿದ್ದರು. ಅದಕ್ಕಾಗಿ ನಾನು ಅವರನ್ನು ಕ್ಯಾರೇ ಮಾಡಿಲ್ಲ. ಹೀಗೆ ಸುಮಾರು ಅರ್ಧ ತಾಸು ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. ಆಗ ಅಲ್ಲಿ ಜನ ಗುಂಪು ಸೇರತೊಡಗಿದರು. ಭದ್ರತಾ ಅಧಿಕಾರಿಗಳು ಗುಂಪು ಚದುರುವಂತೆ ಧ್ವನಿ ವರ್ಧಕದಲ್ಲಿ ಸೂಚನೆ ನೀಡಿದರು. ಬಳಿಕ ಅವರು ಅಲ್ಲಿಂದ ತೆರಳಿದ್ದಾರೆ ಎಂದು ಮಹೇಶ್‌ ವಿಕ್ರಂ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.