ಹೊಸಪೇಟೆ(ಫೆ.01): ವಾಲ್ಮೀಕಿ ಸಮಾಜ ಬೆಂಬಲಿಸಿದ್ದರಿಂದಲೇ ಬಿಜೆಪಿ ರಾಜ್ಯದಲ್ಲಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಕಂಪ್ಲಿಯ ಕಾಂಗ್ರೆಸ್‌ ಶಾಸಕ ಜೆ.ಎನ್‌.ಗಣೇಶ್‌, ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. 

"

ಪಟ್ಟಣದಲ್ಲಿ ಶುಕ್ರವಾರ ಸುದ್ದಿ​ಗಾರರೊಂದಿ​ಗೆ ಮಾತ​ನಾ​ಡಿದ ಅವರು, ಬಿಜೆಪಿ ಸರ್ಕಾ​ರ​ದಲ್ಲಿ ಶ್ರೀರಾ​ಮುಲು ಅವ​ರಿಗೆ ಉಪಮುಖ್ಯ​ಮಂತ್ರಿ ಸ್ಥಾನ ನೀಡು​ತ್ತಾರೆ ಎಂಬ ವಿಶ್ವಾ​ಸ​ದಿಂದ ರಾಜ್ಯದ ಎಲ್ಲ ವಾಲ್ಮೀಕಿ ಸಮಾ​ಜದ ಬಾಂಧ​ವರು, ಪಕ್ಷ​ಭೇದ ಮೆರತು ಬಿಜೆ​ಪಿ​ಯನ್ನು ಬೆಂಬ​ಲಿ​ಸಿ​ದ್ದಾರೆ. ಇದ​ರಿಂದಾಗಿ ರಾಜ್ಯ​ದಲ್ಲಿ ಬಿಜೆಪಿ ಹೆಚ್ಚು ಸ್ಥಾನ​ಗ​ಳನ್ನು ಗಳಿ​ಸಲು ಸಾಧ್ಯ​ವಾ​ಗಿದೆ ಎಂದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈಗಾ​ಗಲೇ ವಾಲ್ಮೀಕಿ ಸಮಾ​ಜದ ರಾಜ​ನಹಳ್ಳಿ ಗುರು​ಪೀ​ಠದ ಪೀಠಾ​ಧಿ​ಪ​ತಿ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನೇತೃ​ತ್ವ​ದಲ್ಲಿ ವಾಲ್ಮೀಕಿ ಸಮಾ​ಜದ ಮುಖಂಡ​ರಾದ ಶ್ರೀರಾ​ಮುಲು ಹಾಗೂ ರಮೇಶ ಜಾರ​ಕಿ​ಹೊಳಿ ಇಬ್ಬ​ರಲ್ಲಿ ಒಬ್ಬ​ರಿಗೆ ಉಪಮುಖ್ಯ​ಮಂತ್ರಿ ಸ್ಥಾನ ನೀಡು​ವು​ದರ ಜೊತೆಗೆ ವಾಲ್ಮೀಕಿ ಸಮಾ​ಜಕ್ಕೆ 7.5 ಮೀಸ​ಲಾ​ತಿ​ಯನ್ನು ಶೀಘ್ರ ನೀಡಲು ಕ್ರಮ ಕೈಗೊ​ಳ್ಳ​ಬೇಕು ಎಂದು ಮುಖ್ಯ​ಮಂತ್ರಿ ಬಿ.ಎ​ಸ್‌. ​ಯ​ಡಿ​ಯೂ​ರ​ಪ್ಪ​ ಅ​ವ​ರನ್ನು ಒತ್ತಾ​ಯಿ​ಸ​ಲಾ​ಗಿದೆ ಎಂದು ತಿಳಿಸಿದರು.