"

ಕಾರವಾರ(ಮಾ.  02) ಅದು ಕೂಲಿ-ನಾಲಿ ಮಾಡುತ್ತಾ ಬದುಕು ಸಾಗಿಸೋ ಬಡ ಕುಟುಂಬ ನೆಲೆಸುತ್ತಿರುವ ಮನೆ. 2019ರ ಭಾರೀ ಮಳೆಗೆ ಮನೆಯಂತೂ ಅರ್ಧಭಾಗ ಧರಾಶಾಹಿಯಾಗಿತ್ತು. ಆದರೆ,‌ ಬಡತನದ ಕಾರಣದಿಂದ ಉತ್ತಮ ಮನೆ ಕಟ್ಟಲು ಸಾಧ್ಯವಾಗದೇ ಈ ಕುಟುಂಬ ಈಗಲೂ ಮೊಣಕಾಲೆತ್ತರದ ಮಣ್ಣಿನ ಗೋಡೆ ಮೇಲೆ ಪ್ಲಾಸ್ಟಿಕ್ ಹಾಗೂ ಸಿಮೆಂಟ್ ಶೀಟ್ ಹೊದಿಕೆ ಹಾಕಿ ದಿನದೂಡುತ್ತಿದೆ.

ಬಿಗ್ 3  ವರದಿ ನಂತರ ಅಜ್ಜಿಯರಿಗೆ ಸೂರು

ಯಾವಾಗ ಈ ಮನೆ ಉರುಳಿ ಬೀಳುತ್ತೋ ಅನ್ನೋ ಭೀತಿಯಿಂದಾಗಿ ತಮ್ಮ ಮಕ್ಕಳನ್ನು ಸಂಬಂಧಿಕರ ಮನೆಯಲ್ಲಿರಿಸಿದ್ದಾರೆ. ಅಧಿಕಾರಿಗಳ ಮುಂದೆ ಸಹಾಯ ಯಾಚನೆ ಮಾಡಿ ಸೋತಿರುವ ಈ ಕುಟುಂಬಕ್ಕೆ ಇದೀಗ ದಿಕ್ಕು ತೋಚದಂತಾಗಿದೆ.