Asianet Suvarna News Asianet Suvarna News

ಸಾರಾ ಮಹೇಶ್‌, ಎಚ್‌. ವಿಶ್ವನಾಥ್ ನಡುವೆ ಮಿತಿ ಮೀರಿದ ಜಟಾಪಟಿ

ಜೆಡಿಎಸ್ ಮುಖಂಡ ಸಾ ರಾ ಮಹೇಶ್ ಹಾಗೂ ಎಚ್ ವಿಶ್ವನಾಥ್ ನಡುವಿನ ಜಟಾಪಟಿ ತೀವ್ರಗೊಂಡಿದೆ.ಕೊಚ್ಚೆಗೂ ಹೋಲಿಕೆಮಾಡಿ ಮಾತನಾಡಿದ್ದಾರೆ.

Political War between Sa Ra Mahesh And H Vishwanath
Author
Bengaluru, First Published Aug 18, 2020, 9:16 AM IST
  • Facebook
  • Twitter
  • Whatsapp

ಮೈಸೂರು (ಆ.18): ಶಾಸಕ ಸಾ.ರಾ.ಮಹೇಶ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ನಡುವಿನ ವಾಕ್ಸಮರ ಮತ್ತೆ ಮುಂದುವರೆದಿದೆ. ಕೆಲವು ದಿನಗಳ ಹಿಂದೆ ಕೆ.ಆರ್‌. ನಗರದಲ್ಲಿ ನಡೆದಿದ್ದ ಸಭೆಯೊಂದರಲ್ಲಿ ಸಾ.ರಾ.ಮಹೇಶ್‌ ಅವರನ್ನು ವಿಶ್ವನಾಥ್‌ ಅವರು ಕೊಚ್ಚೆಗುಂಡಿಗೆ ಹೋಲಿಸಿದ್ದರು. 

ವಿಶ್ವನಾಥ್‌ಗೆ ಎದುರಾಯ್ತು ಮತ್ತೊಂದು ಕಂಟಕ: ಪರಿಷತ್‌ ಸ್ಥಾನ ರದ್ದತಿಗೆ ಶಾಸಕರಿಂದ ಪತ್ರ...

ಈ ಬಗ್ಗೆ ಸೋಮವಾರ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸಾ.ರಾ.ಮಹೇಶ್‌ ಇದಕ್ಕೆ ನಾನು ಭಿಕ್ಷುಕನ ವಿಚಾರ ಮಾತನಾಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ. ವಿಶ್ವನಾಥ್‌ ಅವರು ನನ್ನನ್ನು ಕೊಚ್ಚೆ ಎಂದಿದ್ದಾರೆ. ನಾನು ಅವರನ್ನು ಭಿಕ್ಷುಕ ಎನ್ನುತ್ತೇನೆ. ಕೊಚ್ಚೆ ಭಿಕ್ಷುಕನ ಬಗ್ಗೆ ಮಾತನಾಡಲ್ಲ ಎಂದರು. ಹುಣಸೂರು ಶಾಸಕ ಎಚ್‌.ಪಿ. ಮಂಜುನಾಥ್‌ ಅವರಿಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯರಾಗಿ ಎಚ್‌. ವಿಶ್ವನಾಥ್‌ ತಮ್ಮ ಮಗನಿಗೆ ಬುದ್ಧಿ ಹೇಳಬೇಕಿತ್ತು. ಅದನ್ನು ಬಿಟ್ಟು ನನ್ನ ಮಂತ್ರಿ ಸ್ಥಾನ ತಪ್ಪಿಸಲು ಈ ರೀತಿ ಮಾಡುತ್ತಿದ್ದಾರೆ ಎಂದಿರುವುದು ತಪ್ಪು ಎಂದಿದ್ದಾರೆ.

ಇದಕ್ಕೆ ವಿಶ್ವನಾಥ್‌ ಅವರು, ಸಾ.ರಾ.ಮಹೇಶ್‌ ಕೊಚ್ಚೆಗುಂಡಿ, ನಾನು ಶುಭ್ರವಾದ ಬಟ್ಟೆ ಹಾಕಿದ್ದೇನೆ. ಕೊಚ್ಚೆಗುಂಡಿಗೆ ಕಲ್ಲು ಹೊಡೆಯುವುದಿಲ್ಲ ಎಂದು ಹೇಳಿದ್ದಾರೆ.

ಪ್ರಚಾರಕ್ಕಾಗಿ ಯೋಗೇಶ್ವರ್ ಹೀಗೆ ಮಾತನಾಡಿದ್ದರೆ: ಸಾ ರಾ ಮಹೇಶ್..

ಮಂತ್ರಿಯಾಗುವಾಸೆ ಇದೆ :  ಇದೇವೇಳೆ ಸಚಿವ ಸ್ಥಾನ ಪಡೆಯುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಪ್ರತಿಯೊಬ್ಬರಿಗೂ ಅಧಿಕಾರದ ಆಸೆ ಇರುತ್ತದೆ. ನನಗೂ ಮಂತ್ರಿ ಆಗಬೇಕು ಎಂಬ ಆಸೆ ಇದೆ. ಯಾಕೆ ನಾನು ಮಿನಿಸ್ಟರ್‌ ಆಗುವುದಿಲ್ಲ ಅಂತ ನಿಮಗೆ ಡೌಟ್‌ ಇದೆಯಾ? ಈ ಸರ್ಕಾರದಲ್ಲೇ ನಾನು ಸಚಿವನಾಗುತ್ತೇನೆ ಎಂದು ಅವರು ಹೇಳಿದರು.

Follow Us:
Download App:
  • android
  • ios