'ಬಿಎಸ್‌ಪಿ ಮಹೇಶ್ ಆಡಳಿತ ಪಕ್ಷದವರೆಂದೆ ಪರಿಗಣಿತರು' : ಮುನಿಸಿಕೊಂಡು ನಡೆದ ಶಾಸಕ

ಮುಖಂಡರ ನಡುವೆ ರಾಜಕೀಯ ಕೆಸರೆರಚಾಟ ನಡೆದಿದ್ದು ಈ ವೇಳೆ ಪ್ರತಿಬಟನೆಗೆ ಬಂದಿದ್ದ ಶಾಸಕರೋರ್ವರು ಸ್ಥಳದಿಂದ ಎದ್ದು ನಡೆದ ಘಟನೆ ನಡೆದಿದೆ.

Political war between Leaders in Chamarajanagar Farmers Protest snr

ಕೊಳ್ಳೇಗಾಲ (ಸೆ.29):  ಕೃಷಿ ಮಸೂದೆಗಳ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಹಾಗೂ ಪ್ರಗತಿಪರ ಸಂಘಟನೆಗಳು ಕೊಳ್ಳೇಗಾಲ ಬಂದ್‌ ವೇಳೆ ಕರೆನೀಡಲಾಗಿದ್ದು, ಈ ವೇಳೆ ನಡೆದ ಪ್ರತಿಭಟನಾ ಸಭೆಯ ವೇಳೆ ರಾಜಕೀಯ ಕೆಸರೆರಚಾಟದಿಂದಾಗಿ ಬೇಸತ್ತು ಶಾಸಕ ಮಹೇಶ್‌ ನಿರ್ಗಮಿಸಿದ ಘಟನೆ ಜರುಗಿದೆ.

ಮಾಜಿ ಶಾಸಕ ಎ.ಆರ್‌. ಕೃಷ್ಣಮೂರ್ತಿ ಮಾತನಾಡುವ ವೇಳೆ ಶಾಸಕ ಮಹೇಶ್‌ ಅವರು ಬಿಎಸ್ಪಿಯಲ್ಲಿ ಉಳಿದಿದ್ದರೆ ಸ್ಪೀಕರ್‌ ಆ ಪಕ್ಷದ ಮಾನ್ಯತೆಗನುಗುಣವಾಗಿ ವಿರೋಧ ಪಕ್ಷದ ಶಾಸಕರು ಎಂದು ಪರಿಗಣಿಸಿ ಕೃಷಿ ಕಾಯಿದೆ ತಿದ್ದುಪಡಿ ವಿದೇಯಕ ಕುರಿತು ಮಾತನಾಡಲು ಅವಕಾಶ ನೀಡುತ್ತಿದ್ದರು. ಅವರು ಬಿಎಸ್ಪಿಯಲ್ಲಿ ಗೆದ್ದು ಈಗ ಬಿಜೆಪಿ ಜೊತೆ ಕೈಜೋಡಿಸಿದ್ದರಿಂದ ಸಭಾಧ್ಯಕ್ಷರೆ ಇವರನ್ನು ರೂಲಿಂಗ್‌ ಪಾರ್ಟಿ ಎಂದು ಪರಿಗಣಿಸಿ ಮಾತನಾಡಲು ಅವಕಾಶ ನೀಡಿಲ್ಲ ಎಂದರು.

ಸಂಪುಟ ಸರ್ಕಸ್ ರೇಸ್‌ನಲ್ಲಿದ್ದಾರೆ ಈ ಪ್ರಬಲ ಆಕಾಂಕ್ಷಿಗಳು; ಯಾರು ಇನ್? ಯಾರು ಔಟ್?

ಮಾಜಿ ಶಾಸಕರ ಮಾತಿಗೆ ಪ್ರತಿಭಟನಾ ಸಭೆಯಲ್ಲಿ ಶಾಸಕ ಮಹೇಶ್‌ ಅವರ ಬೆಂಬಲಿಗರು ವಿರೋಧಿಸಿದರು. ಈ ಮಸೂದೆ ಜಾರಿಯಾಗಲು ಕಾಂಗ್ರೆಸ್‌ ಮೂಲ ಕಾರಣ ನೀವು ಈ ರೀತಿ ಮಾತನಾಡಬಾರದು ಎನ್ನುತ್ತಿದ್ದಂತೆ ನಾನು ಸತ್ಯ ಮಾತನಾಡಿದ್ದೇನೆ ಎಂದು ಕೃಷ್ಣಮೂರ್ತಿ ಅವರು ಸಮರ್ಥಿಸಿಕೊಳ್ಳಲು ಮುಂದಾದರು. ಈ ಹಿನ್ನೆಲೆ ಕೆಲಕಾಲ ಸಭೆಯಲ್ಲಿ ಗದ್ದಲ ಹಾಗೂ ಗೊಂದಲ ಮನೆ ಮಾಡಿತು. ಇದರಿಂದ ಬೇಸತ್ತ ಶಾಸಕರು ಸಭೆಯಿಂದ ನಿರ್ಗಮಿಸಿದರು. ಇದಕ್ಕೂ ಮುನ್ನ ಕೆಲ ಪ್ರತಿಭಟನಾಕರರು ನಾವು ಬೀಸಿಲಲ್ಲಿ ನಿಲ್ಲುತ್ತೆವೆ, ನಮಗೆ ಅನುಭವವಿದೆ, ನಿಮಗೆ ಬಿಸಿಲಲ್ಲಿ ನಿಲ್ಲುವ ಅನಭವ ಕಡಿಮೆ ಎಂದು ಕೃಷ್ಣಮೂರ್ತಿ ಅವರಿಗೆ ಟಾಂಗ್‌ ನೀಡಿದ್ದರು

ಪ್ರತಿಭಟನಾ ಸಭೆಯಲ್ಲಿ ಏನಾಯ್ತು?

ಶಾಸಕ ಮಹೇಶ್‌ ಅವರು ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ರೈತರ ಹೋರಾಟಕ್ಕೆ ಬೆಂಬಲವಿದೆ. ಶಾಸಕ ಸಭೆಯಲ್ಲಿ ಕಾಯ್ದೆ ವಿರೋಧಿಸಿ ನಾನು ಮುಂದಿನ ದಿನಗಳಲ್ಲಿ ಮಾತನಾಡುವೆ. ಹೊರಗಡೆ ನಿಂತು ಮಾತನಾಡುವುದಕ್ಕೂ, ಒಳಗಡೆ ನಿಂತು ಮಾತನಾಡುವುದಕ್ಕೂ ವ್ಯತ್ಯಾಸವಿದೆ. ನಾನು ಈ ಮಸೂದೆ ಕುರಿತು ಮಾತನಾಡಲು ಟೈಂ ಕೇಳಿದರೆ 2ನಿಮಿಷದಲ್ಲಿ ಮಾತನಾಡಿ ಅಂತಾರೆ, ಅಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಬಿಎಸ್ಪಿಯಲ್ಲಿದ್ದರೆ ಅವಕಾಶ ಸಿಗ್ತಿತ್ತು: ಶಾಸಕ ಮಹೇಶ್‌ ಮಾತನಾಡುತ್ತಿದ್ದ ವೇಳೆಯಲ್ಲಿಯೆ ಕಾಂಗ್ರೆಸ್‌ ಮುಖಂಡ (ಜಿಲ್ಲಾ ಎಸ್ಸಿ ವಿಭಾಗದ ಅಧ್ಯಕ್ಷ ) ನಾಗರಾಜು ನೀವು ಬಿಎಸ್ಪಿಯಲ್ಲಿದ್ದರೆ ಮಾತನಾಡಲು ಅವಕಾಶ ಸಿಗುತ್ತಿತ್ತು, ಅದಕ್ಕೆ ನಿಮಗೆ 2ನಿಮಿಷ ಟೈಂ ಕೊಡುತ್ತಿದ್ದಾರೆ ಎಂದರೆ. ಇದಕ್ಕೆ ಶಾಸಕರೇ ಉತ್ತರಿಸಿ (ಪ್ರತಿಕ್ರಿಯಿಸಿ) ನಿನಗೆ ಗೊತ್ತಾಗಲ್ಲ, ನಾಗರಾಜು ಯಾವ ಪಕ್ಷದಲ್ಲಿದ್ದರು ಅಷ್ಟೇ, ನೀನೆ ವಿಧಾನಸಭೆಗೆ ಆಯ್ಕೆಯಾಗಿ ಬಾ ಆಗ ಗೊತ್ತಾಗುತ್ತೆ ಎಂದು ಸಲಹೆ ನೀಡಿದರು.

 ರೈತ ಬೆಳೆಗೆ ಬೆಂಬಲ ಕೊಡುವ ಮನಸ್ಸು ಇದುವರೆವಿಗೂ ಆಳಿದ ಸರ್ಕಾರ ಮಾಡಿಲ್ಲ, ನಾವೆಲ್ಲರೂ ಆತ್ಮಾವಲೋಕನ ಮಾಡಬೇಕಿದೆ. ಕೊರೋನಾ ವೇಳೆ ಪ್ರತಿಭಟನೆ ಅಪಾಯ, ಅದು ಸಂಕಷ್ಟದಿಂದಾಗಿ ಅನಿವಾರ್ಯವೂ ಕೂಡ, ನಾವು ಬೇವಿನ ಬೀಜ ಹಾಕಿದ್ದು ಮಾವಿನ ಹಣ್ಣು ಪಡೆಯಲು ಅವಕಾಶವಿಲ್ಲ. ಈ ಘಟನೆಗೆ ಭೂ ಮಾಲೀಕರ ಪರ ಇರುವವರು ತಂದ ಕಾನೂನನ್ನು ನಾವು ಎದರುಸಲೇ ಬೇಕಿದೆ, ನಾನು ರೈತರ ಪರವಿದ್ದು ಹೋರಾಟಕ್ಕೆ ನನ್ನ ಬೆಂಬಲವಿದೆ.

Latest Videos
Follow Us:
Download App:
  • android
  • ios