Asianet Suvarna News Asianet Suvarna News

PFI Ban: ಕೇಂದ್ರದ ನಿರ್ಧಾರ ಸ್ವಾಗತಿಸಿದ ಕೋಟೆನಾಡಿನ ನಾಯಕರು

ದೇಶದ್ರೋಹಿ ಚಟುವಟಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಿಎಫ್‌ಐ ಸಂಘಟನೆಯನ್ನು ಬ್ಯಾನ್ ಮಾಡಿದ್ದು, ಈ ಬಗ್ಗೆ ಚಿತ್ರದುರ್ಗದ ರಾಜಕೀಯ ನಾಯಕರು ಏನ್ ಹೇಳಿದ್ದಾರೆ ಇಲ್ಲಿದೆ ನೋಡಿ.

Political party leaders in chitradurga welcomes central govt's PFI ban decision akb
Author
First Published Sep 28, 2022, 4:49 PM IST

ವರದಿ: ಕಿರಣ್ ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್.

ಚಿತ್ರದುರ್ಗ: ಕಳೆದ ಒಂದು  ವಾರದಿಂದ ರಾಜ್ಯವಲ್ಲದೇ ಇಡೀ ದೇಶದಲ್ಲಿ PFI ಕಾರ್ಯಕರ್ತರು ಹಾಗೂ ಅವರ ಚಟುವಟಿಕೆಗಳನ್ನು NIA ಬಯಲಿಳೆದಿತ್ತು. ಅದಕ್ಕೆ ಪೂರಕವಾಗಿ ಇಂದು ಕೇಂದ್ರ ಸರ್ಕಾರ PFI ಸಂಘಟನೆಯನ್ನು ಬ್ಯಾನ್ ಮಾಡುವ ಮೂಲಕ ಮಹತ್ವದ ಆದೇಶ ರವಾನಿಸಿದೆ. ಇದ್ರಿಂದಾಗಿ ಕಾನೂನಿನ ಚೌಕಟ್ಟಿನಲ್ಲಿ ಯಾವ ಸಂಘಟನೆ ಕೆಲಸ ಮಾಡುವುದಿಲ್ಲವೋ ಅದರ ಹೆಡೆಮುರಿ ಕಟ್ಟುವುದೇ ನಮ್ಮ ಮೂಲ ಉದ್ದೇಶ ಎಂಬ ಸಂದೇಶವನ್ನು ಸಾರಿದೆ. ಕೇಂದ್ರ ಸರ್ಕಾರ ಗೃಹ ಇಲಾಖೆಯಿಂದ ಬಂದ ಆದೇಶದಂತೆ ಇಂದು PFI ಸೇರಿ ಇನ್ನಿತರ 8 ಸಂಘಟನೆಗಳನ್ನು ಸರ್ಕಾರ ಬ್ಯಾನ್ ಮಾಡಿದೆ. 

ಈ ವಿಚಾರಕ್ಕೆ ಸಂಬಂಧಿಸಿದಂತೆ ಕೋಟೆನಾಡಿನ ನಾಯಕರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. PFI ಹೆಸರಿನಲ್ಲಿ ದೇಶದಲ್ಲಿ ವಿದ್ರೋಹಕ ಕೆಲಸ ನಡೆಯುತ್ತಿತ್ತು. PFI ಬ್ಯಾನ್ ಬಗ್ಗೆ ಅನೇಕ ವರ್ಷಗಳಿಂದ ಹೋರಾಟ ಮಾಡಿದ್ದೆವು. ಕೇಂದ್ರ ಸರ್ಕಾರ PFI ಬ್ಯಾನ್ ಮಾಡಿದ್ದು ಸ್ವಾಗತಾರ್ಹ ಎಂದು MLC ಕೆ.ಎಸ್ ನವೀನ್ ಅಭಿಪ್ರಾಯಪಟ್ಟರು. PFI ವಿದೇಶದಿಂದ ಹಣ ಸಂಗ್ರಹಿಸಿ ದೇಶದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿತ್ತು. PFI ಮೂಲಕ ಭಯ ನಿರ್ಮಿಸಿ, ಉಗ್ರವಾದಿ ಸಂಘಟನೆಗೆ ಬೆಂಬಲ ನೀಡುತ್ತಿತ್ತು. ಆದರೆ NIA ತನಿಖೆ ಮೂಲಕ PFI ಚಟುವಟಿಕೆಗಳು ಬಯಲಾಗಿದೆ ಎಂದರು.

ಭಾರತವನ್ನು ಇಸ್ಲಾಮೀಕರಣ ಮಾಡಲು ಹೊರಟ PFI ವಿರುದ್ಧ NIA ದಾಳಿ, 45 ಶಂಕಿತರು ಅರೆಸ್ಟ್!

PFI ಜತೆ ದೇಶದಲ್ಲಿ ವಿದ್ರೋಹದ ಕೆಲಸದಲ್ಲಿ ತೊಡಗಿದ್ದವರ ಪತ್ತೆ ಹಚ್ಚಿ ಬಂಧಿಸಬೇಕು. ದೇಶದ್ರೋಹಿ‌ ಕೃತ್ಯ ಎಸಗುವವರು ಯಾವುದೇ ಧರ್ಮದವರಾಗಿದ್ದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್, ಜೆಡಿಎಸ್ ನಾಯಕರು ದೇಶದ ಪರವಾಗಿದ್ದಾರೆಯೇ? ಅಥವಾ ದೇಶದ ವಿರೋಧಿಗಳ ಪರವಾಗಿದ್ದಾರೆಯೇ ಹೇಳಲಿ ಎಂದು ಅವರು ಪ್ರಶ್ನಿಸಿದರು. 

ಇದು  ರಾಜಕೀಯ ಮಾಡುವಂಥ ವಿಚಾರವಲ್ಲ. ಎನ್ ಐ ಎ ತನಿಖೆ ವೇಳೆ ಅನೇಕ ವಿಷಯ ಬಯಲಾಗಿವೆ. ಸಾಕ್ಷ್ಯ (Evidence) ಮುಂದಿಟ್ಟುಕೊಂಡು ಬ್ಯಾನ್ ಮಾಡುವ ಕೆಲಸ ಆಗಿದೆ. ಕಾಂಗ್ರೆಸ್, ಜೆಡಿಎಸ್ ನಾಯಕರು ದೇಶಭಕ್ತರಾಗಿದ್ದರೆ PFI ಬ್ಯಾನ್ ಕ್ರಮ ಸ್ವಾಗತಿಸಲಿ. ವಿರೋಧಿಸಿ ಮಾತಾಡುವಂಥದ್ದು ಅವರಿಗೆ ದೇಶದ ಬಗ್ಗೆ ಎಷ್ಟರಮಟ್ಟಿಗೆ ಗೌರವವಿದೆ ಎಂಬುದನ್ನು ತೋರಿಸುತ್ತದೆ ಎಂದು ನವೀನ್ ಹೇಳಿದರು.

ಇನ್ನು ಇದೇ ವೇಳೆ‌ ಮಾತನಾಡಿದ ಚಿತ್ರದುರ್ಗ (Chitradurga) ಬಿಜೆಪಿ ಹಿರಿಯ ಶಾಸಕ (BJP MLA) ತಿಪ್ಪಾರೆಡ್ಡಿ (Tippareddy),  ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಅಶಾಂತಿ ಮೂಡಿಸುವ ಕೆಲಸವನ್ನು PFI ಮಾಡಿದೆ. ಬಿಹಾರಕ್ಕೆ ಮೋದಿ ಹೋದಾಗ ಅವರ ಮೇಲೆ ಅಟ್ಯಾಕ್ ಮಾಡುವ ಪ್ಲಾನ್ ನಡೆದಿತ್ತು.‌ ಮಾಹಿತಿ ಸಿಕ್ಕ ಕೂಡಲೇ NIA ದೇಶದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿತು. BJP ಮಾತ್ರವಲ್ಲ, ಕೇರಳದ CPM, ಕಾಂಗ್ರೆಸ್ ಕೂಡ  ಸಾಕಷ್ಟು ಬಾರಿ PFI ಬ್ಯಾನ್ ಗೆ ಒತ್ತಾಯಿಸಿತ್ತು ಎಂದರು. 

ED NIA raid PFI; ಶಿರಸಿಯಲ್ಲಿ ದೇಶವಿರೋಧಿ ಚಟುವಟಿಕೆಯಲ್ಲಿದ್ದ ಎಸ್‌ಡಿಪಿಐ ಮುಖಂಡನ ಬಂಧನ

ದೇಶಕ್ಕೆ PFI ಸೂಕ್ತ ವ್ಯವಸ್ಥೆ ಅಲ್ಲ ಎಂದು ಸಾರ್ವಜನಿಕರ ಒತ್ತಾಯ ಆಗಿತ್ತು. ಕೇಂದ್ರ ಸರ್ಕಾರ (Union Govt) ಏಕಾಏಕಿ ಬ್ಯಾನ್ ಮಾಡಿಲ್ಲ. ಸರಿಯಾದ ಮಾಹಿತಿ ಕಲೆಹಾಕಿ, ಸೂಕ್ತ ಕ್ರಮ ಕೈಗೊಂಡಿದೆ.  ಇಡೀ ದೇಶದ ಜನ  ಕೇಂದ್ರ ಸರ್ಕಾರದ ಈ ಕಾರ್ಯವನ್ನು ಸ್ವಾಗತಿಸಿದ್ದಾರೆ. ಕಾನೂನಿನ ಅಡಿಯಲ್ಲಿ ಅವರು ನಡೆದರೆ ನಾವೆಲ್ಲರೂ ಅಣ್ಣ ತಮ್ಮಂದಿರು. ಇಲ್ಲಿ ಸಾವಿರಾರು ಜಾತಿ, ಸಾವಿರಾರು ಭಾಷೆಯಿದೆ. ಕಾನೂನಿನ ಅಡಿಯಲ್ಲಿ ಕೆಲಸ ಮಾಡಿದ್ರೆ ಈ ರೀತಿಯ ವ್ಯವಸ್ಥೆಗೆ ಅವಕಾಶ ಇರುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.  PFI ನವರು ತಿದ್ದಿಕೊಂಡು ನಡೆಯಲು 5 ವರ್ಷ ಅವಕಾಶ ಸಿಕ್ಕಿದೆ. ರಾಷ್ಟ್ರೀಯ ಚಿಂತನೆ ಒಪ್ಪಿಕೊಂಡು ದೇಶ ಕಟ್ಟಲು ಅವರೂ ಕೈ ಜೋಡಿಸಲಿ. ಸಾಮರಸ್ಯದ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರದ ಕ್ರಮ ಶ್ಲಾಘನೀಯ ಎಂದರು.

ಈ ಸಮಯದಲ್ಲಿ ಆಗಮಿಸಿದ್ದ ದಾವಣಗೆರೆ ಸಂಸದ (Davangere MP) ಜಿ.ಎಂ ಸಿದ್ದೇಶ್ವರ್ (G.M. Siddeshwar) ಮಾತನಾಡಿ, ಕೇಂದ್ರ ಸರ್ಕಾರ ಪಿಎಫ್‌ ಐ ಬ್ಯಾನ್ ಮಾಡಿದ್ದನ್ನು ಸ್ವಾಗತಿಸುತ್ತೇನೆ. ಪಿಎಫ್ಐ ವಿದೇಶಗಳ ಜತೆ ಸಂಪರ್ಕ ಹೊಂದಿತ್ತು. ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದು ಗಮನಿಸಿ ಬ್ಯಾನ್ ಮಾಡಲಾಗಿದೆ ಎಂದರು. ನಿಜಕ್ಕೂ ಪಿಎಫ್ ಐ ಬ್ಯಾನ್ ಮಾಡಿದ್ದು ಸಂತೋಷದ ವಿಷಯ. ಕಾಂಗ್ರೆಸ್ ಮುಖಂಡರ ಆರ್ ಎಸ್ ಎಸ್ ಬ್ಯಾನ್ ಬಗ್ಗೆ ಹೇಳಿಕೆಗೆ ಸಿದ್ದೇಶ್ವರ್ ಕಿಡಿಕಾರಿದರು. RSS ನಿಂದ ಈವರೆಗೆ ದೇಶದ್ರೋಹಿ ಕೆಲಸ ನಡೆದಿಲ್ಲ. RSS ಕಾರ್ಯಕರ್ತರ ಬಳಿ ಬಂದೂಕು, ಬಾಂಬ್, ಚೂರಿ‌‌ ಇರಲ್ಲ. ಶಿಸ್ತು ಬದ್ಧವಾಗಿ ಒಂದು ಲಾಠಿ‌ ಮಾತ್ರ ಇರುತ್ತದೆ. ಈ ವರೆಗೆ RSS ನಿಂದ ಅಹಿತಕರ ಘಟನೆ ಎಲ್ಲೂ ನಡೆದಿಲ್ಲ. ಕಾಂಗ್ರೆಸ್ ಜಾತಿ ಜಾತಿಗಳ ನಡುವೆ ವಿಷ ಬೀಜ‌ ಬಿತ್ತುತ್ತದೆ ಎಂದು ವಾಗ್ದಾಳಿ ನಡೆಸಿದರು.
 

Follow Us:
Download App:
  • android
  • ios