Asianet Suvarna News Asianet Suvarna News

ಅಗ್ನಿಪಥ್ ಹಿಂಸಾಚಾರ: ವಿಜಯಪುರದಲ್ಲಿ ಖಾಕಿ ಕಟ್ಟೆಚ್ಚರ..!

*  ರೂಟ್ ಮಾರ್ಚ್ ಮೂಲಕ ಮುನ್ನೆಚ್ಚರಿಕೆ ಕೈಗೊಂಡ ಎಸ್ಪಿ ಆನಂದಕುಮಾರ್
*  ಗಲಭೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿದ ಪೊಲೀಸ್ ಇಲಾಖೆ
*  ಎಸ್ಪಿ ನೇತೃತ್ವದಲ್ಲಿ ರೂಟ್ ಮಾರ್ಚ್

Police Tight Security in Vijayapura Due to Agnipath Violence grg
Author
Bengaluru, First Published Jun 20, 2022, 5:25 AM IST

ವಿಜಯಪುರ(ಜೂ.20): ಅಗ್ನಿಪಥ್ ವಿರೋಧಿಸಿ ದೇಶ ಸೇರಿದಂತೆ, ರಾಜ್ಯದ ಕೆಲವೆಡೆ ಗಲಭೆ, ದಾಂಧಲೆಗಳಾಗುತ್ತಿರುವ ಹಿನ್ನಲೆಯಲ್ಲಿ ನಿನ್ನೆ(ಭಾನುವಾರ) ವಿಜಯಪುರ ನಗರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ರೂಟ್ ಮಾರ್ಚ್ ನಡೆಸಿತು. 

ಎಸ್ಪಿ ನೇತೃತ್ವದಲ್ಲಿ ರೂಟ್ ಮಾರ್ಚ್

ಈ ರೂಟ್ ಮಾರ್ಚ್ ನೇತೃತ್ವವನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ.ಆನಂದಕುಮಾರ್ ವಹಿಸಿದ್ದರು.‌ಗಾಂಧೀಚೌಕ್, ಆದರ್ಶನಗರ, ವಿಜಯಪುರ ಗ್ರಾಮೀಣ, ಜಲನಗರ, ಎಪಿಎಂಸಿ ಠಾಣೆಯ ಅಧಕಾರಿಗಳು ಸೇರಿದಂತೆ, ಸಿಬ್ಬಂದಿ ಈ ರೂಟ್ ಮಾರ್ಚ್‌ನಲ್ಲಿ ಪಾಲ್ಗೊಂಡಿದ್ದರು. ನಗರದ ಗಾಂಧಿ ಚೌಕ್, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಹಾಯ್ದು ಪ್ರಮುಖ ರಸ್ತೆಗಳಲ್ಲಿ ಈ ರೂಟ್ ಮಾರ್ಚ್ ಸಂಚರಿಸಿತು. ವಿಜಯಪುರ ನಗರ ಸೇರಿದಂತೆ ಜಿಲ್ಲಾದ್ಯಂತದ ಜನತೆಯಲ್ಲಿ ಭದ್ರತೆ ಹಾಗೂ ಸುರಕ್ಷತಾ ಭವನೆ ಉಂಟು ಮಾಡುವುದಲ್ಲದೇ, ಯಾವುದೇ ರೀತಿಯ ದಾಂಧಲೆ ಉಂಟುಮಾಡುವ ಜನ ಅಥವಾ ಗುಂಪುಗಳನ್ನ ಎದುರಿಸುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಸಕ್ಷಮ ಹಾಗೂ ಸನ್ನದ್ಧವಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಮೋದಿ ಕಾರ್ಯಕ್ರಮದಲ್ಲಿ ಕೊರೋನಾ ಹಬ್ಬಲ್ವಾ?, ಪ್ರಧಾನಿ ಕಂಡು ವೈರಸ್‌ ಓಡಿ ಹೋಗುತ್ತಾ?: ಸಿದ್ದು

ಗಲಭೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿದ ಪೊಲೀಸ್ ಇಲಾಖೆ

ಅಗ್ನಿಪಥ್ ವಿಚಾರವನ್ನೆ ಇಟ್ಟುಕೊಂಡ ಕೆಲ ಸಮಾಜಘಾತಕ ಶಕ್ತಿಗಳು ಗಲಭೆಗಳನ್ನ ಸೃಷ್ಟಿಸುವ ಸಾಧ್ಯತೆಗಳಿರುವ ಕಾರಣ ಜಿಲ್ಲಾ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ. ಇನ್ನು  ಈ ರೂಟ್ ಮಾರ್ಚ್ ಹಿಂದಿನ ಪ್ರಮುಖ ಉದ್ದೇಶವು ಖಡಕ್ ಎಚ್ಚರಿಕೆಯನ್ನ ನೀಡುವುದಾಗಿದೆ ಎಂದು ವಿಜಯಪುರ ಜಿಲ್ಲಾ ಪೊಲೀಸ್  ಇಲಾಖೆ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದೆ.
 

Follow Us:
Download App:
  • android
  • ios