Asianet Suvarna News Asianet Suvarna News

ಬೆಂಗಳೂರು: ಇಂದು ಪುನೀತ ಪರ್ವ ಕಾರ್ಯಕ್ರಮ, ಅರಮನೆ ಮೈದಾನದ ಸುತ್ತ ಪೊಲೀಸ್ ಬಂದೋಬಸ್ತ್

ಗಂಧದ ಗುಡಿ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಪುನೀತ ಪರ್ವ ಕಾರ್ಯಕ್ರಮ ಇಂದು ಸಂಜೆ 6 ಗಂಟೆಗೆ ಅರಮನೆ ಮೈದಾನ ಕೃಷ್ಣ ವಿಹಾರದಲ್ಲಿ ಜರುಗಲಿದೆ. 

Police Security Around the Palace Ground in Bengaluru due to Puneeth Parva Programme grg
Author
First Published Oct 21, 2022, 2:00 AM IST | Last Updated Oct 21, 2022, 9:09 AM IST

ಬೆಂಗಳೂರು(ಅ.21):  ಅರಮನೆ ಮೈದಾನದಲ್ಲಿ ಇಂದು(ಶುಕ್ರವಾರ) ನಡೆಯುವ ಪುನೀತ ಪರ್ವ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮನದ ಹಿನ್ನೆಲೆಯಲ್ಲಿ ನಗರ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದಾರೆ.

ಇದೇ ತಿಂಗಳು 28ರಂದು ದಿ.ಪುನೀತ್ ರಾಜಕುಮಾರ್ ಅಭಿನಯದ ಕೊನೆ ಚಿತ್ರ ಗಂಧದ ಗುಡಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಪುನೀತ ಪರ್ವ ಕಾರ್ಯಕ್ರಮ ಇಂದು ಸಂಜೆ 6 ಗಂಟೆಗೆ ಅರಮನೆ ಮೈದಾನ ಕೃಷ್ಣ ವಿಹಾರದಲ್ಲಿ ಜರುಗಲಿದೆ. ಕಾರ್ಯಕ್ರಮಕ್ಕೆ ಕನ್ನಡ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಗಣ್ಯಾತಿಗಣ್ಯರು ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪುನೀತ್ ಅಭಿಮಾನಿಗಳು ಜಮಾವಣೆಯಾಗಲಿದ್ದು ಈ ವೇಳೆ ಅಹಿತಕರ ಘಟನೆಗಳಿಗೆ ನಡೆಯದಿರಲು ನಗರ ಕೇಂದ್ರ ವಿಭಾಗದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಅಪ್ಪು ಸರ್ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ: ಭಾವುಕರಾದ ಶೈನ್ ಶೆಟ್ಟಿ

ಈ ಬಗ್ಗೆ ಮಾಹಿತಿ ನೀಡಿದ ಡಿಸಿಪ ಶ್ರೀನಿವಾಸಗೌಡ, 3 ಮಂದಿ ಡಿಸಿಪಿ, 14 ಎಸಿಪಿ , 60 ಇನ್ ಸ್ಪೆಕ್ಟರ್, 180 ಪಿಎಸ್ಐ ಹಾಗೂ 1400 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.ಇದರ ಜೊತೆಗೆ 20 ಕೆಎಸ್ಆರ್ ಪಿ ತುಕಡಿ ಇರಲಿದೆ. ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರಿಗೂ ಪಾಸ್ ನೀಡುವಂತೆ ಆಯೋಜಕರಿಗೆ ಹೇಳಿದ್ದು, ಪಾಸ್ ವಿತರಿಸುವುದಾಗಿ ಹೇಳಿದ್ದಾರೆ. 

ಇಂದಿನ ಕಾರ್ಯಕ್ರಮಕ್ಕೆ 40 ಸಾವಿರಕ್ಕಿಂತ ಹೆಚ್ಚಿನ ಜನರು ಬರುವ ಸಾಧ್ಯತೆಯಿದೆ. ಅದರಂತೆ ಪೊಲೀಸ್ ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಸಮಾರಂಭಕ್ಕೆ ಸುಮಾರು 500 ವಿವಿಐಪಿಗಳು ಬರಲಿದ್ದಾರೆ. ಅವರಿಗೆ ಪ್ರತ್ಯೇಕ ಪಾರ್ಕಿಂಗ್ ನೀಡಲಾಗಿದೆ. ಸಾರ್ವಜನಿಕರು ಸೇರಿ ಯಾರೇ ಆಗಿರಲಿ ಪಾಸ್  ಇದ್ದವರಿಗೆ ಮಾತ್ರ ಒಳ ಬಿಡಲಾಗುವುದು ಎಂದರು.

Latest Videos
Follow Us:
Download App:
  • android
  • ios