Asianet Suvarna News Asianet Suvarna News

ಕಲಬುರಗಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ: ಚಕ್ರವರ್ತಿ ಸೂಲಿಬಲೆ ತಡೆದು ವಾಪಸ್ ಕಳುಹಿಸಿದ ಪೊಲೀಸರು

ಕಲಬುರಗಿ ಜಿಲ್ಲೆಯ ಕಮಲಾಪೂರ ಬಳಿ ಮಧ್ಯರಾತ್ರಿ ನಾಟಕೀಯ ಪ್ರಹಸನ ನಡೆದಿದೆ. ಬೀದರ್‌ ಜಿಲ್ಲೆಯ ಬಾಲ್ಕಿಯಿಂದ ಕಲಬುರಗಿ ಜಿಲ್ಲೆಯೊಳಗೆ ಆಗಮಿಸಲು ಚಕ್ರವರ್ತಿ ಸೂಲಿಬಲೆ ಅವರಿಗೆ ಪೊಲೀಸರು ಅನುಮತಿ ನೀಡಿಲ್ಲ. 

Police Restriction to Chakravarti Sulibele to Kalaburagi District grg
Author
First Published Feb 29, 2024, 8:57 AM IST

ಬೆಂಗಳೂರು(ಫೆ.29):  ಕಲಬುರಗಿ ಜಿಲ್ಲೆಗೆ ಚಕ್ರವರ್ತಿ ಸೂಲಿಬಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಮಧ್ಯರಾತ್ರಿ 1 ಗಂಟೆಗೆ ಚಕ್ರವರ್ತಿ ಸೂಲಿಬಲೆ ಅವರನ್ನು ಪೊಲೀಸರು ತಡೆದು ವಾಪಾಸ್ ಕಳುಹಿಸಿದ ಘಟನೆ ನಡೆದಿದೆ.  

ಕಲಬುರಗಿ ಜಿಲ್ಲೆಯ ಕಮಲಾಪೂರ ಬಳಿ ಮಧ್ಯರಾತ್ರಿ ನಾಟಕೀಯ ಪ್ರಹಸನ ನಡೆದಿದೆ. ಬೀದರ್‌ ಜಿಲ್ಲೆಯ ಬಾಲ್ಕಿಯಿಂದ ಕಲಬುರಗಿ ಜಿಲ್ಲೆಯೊಳಗೆ ಆಗಮಿಸಲು ಚಕ್ರವರ್ತಿ ಸೂಲಿಬಲೆ ಅವರಿಗೆ ಪೊಲೀಸರು ಅನುಮತಿ ನೀಡಿಲ್ಲ. 
ಸೂಲಿಬಲೆ ಚಕ್ರವರ್ತಿ ಅವರಿಗೆ ಕಲಬುರಗಿ ಜಿಲ್ಲೆಗೆ ಪ್ರವೇಶ ನಿರ್ಬಂಧ ವಿಧಿಸಿ ಉಪ ವಿಭಾಗಾಧಿಕಾರಿ ರೂಪೇಂದ್ರ ಕೌರ್ ಆದೇಶ ಹೊರಡಿಸಿದ್ದಾರೆ. 

ಜಾತಿ-ಜಾತಿಯನ್ನು ಒಡೆದು ಅಧಿಕಾರ ನಡೆಸಬೇಕು ಎಂಬುದೇ ಕಾಂಗ್ರೆಸ್‌ ಉದ್ದೇಶ: ಚಕ್ರವರ್ತಿ ಸೂಲಿಬೆಲೆ

ಚಕ್ರವರ್ತಿ ಸೂಲಿಬಲೆ ಪ್ರಚೋದನಾಕಾರಿ ಭಾಷಣದಿಂದ ಶಾಂತಿಗೆ ಧಕ್ಕೆ ಬರುವ ಸಾಧ್ಯತೆ ಎನ್ನುವ ಕಾರಣಕ್ಕೆ ಪ್ರವೇಶ ನಿರ್ಭಂಧ ವಿಧಿಸಲಾಗಿದೆ. ಈ ಹಿನ್ನಲೆಯಲ್ಲಿ ಮಧ್ಯರಾತ್ರಿ ಒಂದು ಗಂಟೆಗೆ ಸೂಲಿಬಲೆಯವರನ್ನು ಕಮಲಾಪೂರದ ಪೊಲೀಸರು ತಡೆದು ವಾಪಸ್‌ ಕಳುಹಿಸಿದ್ದಾರೆ. 

ಉಪವಿಭಾಗಾಧಿಕಾರಿ ಅವರ ಆದೇಶದ ಹಿನ್ನಲೆ ಸೂಲಿಬಲೆ ಅವರಿಗೆ ಜಿಲ್ಲೆಯೊಳಗೆ ಪ್ರವೇಶಕ್ಕೆ ಅವಕಾಶ ನೀಡದೇ ಮರಳಿ ಬೀದರ್‌ ಕಡೆಗೆ ಕಳುಹಿಸಲಾಗಿದೆ.  ಈ ವೇಳೆ ಪೊಲೀಸರು ಮತ್ತು ಸೂಲಿಬಲೆ ಚಕ್ರವರ್ತಿ ನಡುವೆ ತೀವ್ರ ವಾಗ್ವಾದ ನಡೆದಿದೆ ಎಂದು ತಿಳಿದು ಬಂದಿದೆ. 

Follow Us:
Download App:
  • android
  • ios