ಬೆಳಗಾವಿ ಹಿಂಡಲಗಾ ಜೈಲಿನ ಮೇಲೆ ಪೊಲೀಸರ ದಿಢೀರ್ ದಾಳಿ

ನಮ್ಮ ಎಸಿಪಿಗಳು ಐದು ಜನ ಇನ್ಸ್ಪೆಕ್ಟರ್ 146 ಸಿಬ್ಬಂದಿ ತಪಾಸಣೆ ಮಾಡಿದ್ದೇವೆ. ಶ್ವಾನದಳದೊಂದಿಗೆ ಬಂದು ಇಡೀ ಜೈಲು ತಪಾಸಣೆ ಮಾಡಿದ್ದೇವೆ ಜೈಲಿನೊಳಗೆ ವಾಸ್ತವತೆ ಏನಿದೆ ಎಂದು ತಿಳಿಯಲು ತಪಾಸಣೆ ಮಾಡಿದ್ದೇವೆ: ಡಿಸಿಪಿ ರೋಹನ್ ಜಗದೀಶ್ 

Police Raid on Hindalaga Jail in Belagavi grg

ಬೆಳಗಾವಿ(ಮಾ.31):  ನಗರದ ಹಿಂಡಲಗಾ ಜೈಲಿನ ಮೇಲೆ ಪೊಲೀಸರು ಇಂದು(ಭಾನುವಾರ) ದಿಢೀರ್ ದಾಳಿ ನಡೆಸಿದ್ದಾರೆ. 150 ಸಿಬ್ಬಂದಿಯಿಂದ ದಿಢೀರ್ ದಾಳಿ ನಡೆಸಿದ ಪೊಲೀಸರು ಜೈಲು ಜಾಲಾಡಿದ್ದಾರೆ. ಬೆಳಗಾವಿ ಡಿಸಿಪಿ ರೋಹನ್ ಜಗದೀಶ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. 

ದಾಳಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಪಿ ರೋಹನ್ ಜಗದೀಶ್ ಅವರು, ನಮ್ಮ ಎಸಿಪಿಗಳು ಐದು ಜನ ಇನ್ಸ್ಪೆಕ್ಟರ್ 146 ಸಿಬ್ಬಂದಿ ತಪಾಸಣೆ ಮಾಡಿದ್ದೇವೆ. ಶ್ವಾನದಳದೊಂದಿಗೆ ಬಂದು ಇಡೀ ಜೈಲು ತಪಾಸಣೆ ಮಾಡಿದ್ದೇವೆ ಜೈಲಿನೊಳಗೆ ವಾಸ್ತವತೆ ಏನಿದೆ ಎಂದು ತಿಳಿಯಲು ತಪಾಸಣೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. 

ಕ್ರಿಸ್ಟಲ್‌ ಉಪ್ಪು ಪತ್ತೆ ಪ್ರಕರಣ; ಹಿಂಡಲಗಾ ಕಾರಾಗೃಹದ ಮೂವರು ಕೈದಿಗಳ ವಿರುದ್ಧ ಕೇಸು

ತಂಬಾಕು, ಬೀಡಿ ಸಿಗರೇಟು ಸಣ್ಣ ಪುಟ್ಟ ಚಾಕುಗಳು ಒಳಗಡೆ ಸಿಕ್ಕಿವೆ. ಭದ್ರತೆ ಇದ್ದರೂ ಸಹ ಒಳಗೆ ಇಂತವೆಲ್ಲ ಏಕೆ ಹೋಗ್ತಿದೆ ತನಿಖೆ ಮಾಡಬೇಕಾಗಿದೆ. ಸದ್ಯಕ್ಕೆ ಯಾವುದೇ ಮೊಬೈಲ್‌ಗಳು ಸಿಕ್ಕಿಲ್ಲ ಮೊಬೈಲ್‌ ಚಾರ್ಜರ್‌ ಹಾಗೂ ಬ್ಲೂಟೂತ್ ಡಿವೈಸಗಳು ಸಿಕ್ಕಿವೆ. ಅದನ್ನ ನಮ್ಮ ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಬೆಳಗಾವಿ ಡಿಸಿಪಿ ರೋಹನ್ ಜಗದೀಶ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios