ಕೊರೋನಾ ವೈರಸ್‌ಪೀಡಿತ ಕಲಬುರಗಿಯಿಂದ ಮೂಡಿಗೆರೆ ತಾಲೂಕಿನ ಕಳಸಕ್ಕೆ 15 ಮಂದಿ ಪೊಲೀಸರು ಬಂದಿದ್ದು, ಇದರಿಂದ ಜನರಲ್ಲಿ ಆತಂಕ ಎದುರಾಗಿದೆ.
ಚಿಕ್ಕಮಗಳೂರು(ಏ.18): ಕೊರೋನಾ ವೈರಸ್‌ಪೀಡಿತ ಕಲಬುರಗಿಯಿಂದ ಮೂಡಿಗೆರೆ ತಾಲೂಕಿನ ಕಳಸಕ್ಕೆ 15 ಮಂದಿ ಪೊಲೀಸರು ಬಂದಿದ್ದು, ಇದರಿಂದ ಜನರಲ್ಲಿ ಆತಂಕ ಎದುರಾಗಿತ್ತು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕಳಸದ ಸುತ್ತಮುತ್ತ ನಕ್ಸಲ್‌ಪೀಡಿತ ಪ್ರದೇಶ. ಇಲ್ಲಿ ಹಾಸನದ ಕೆಎಸ್‌ಆರ್‌ಪಿ ತುಕಡಿ ನಿಯೋಜಿಸಲಾಗಿತ್ತು. ಈ ಸಿಬ್ಬಂದಿಯನ್ನು ಬಿಡುಗಡೆಗೊಳಿಸಿ ಕಲಬುರಗಿಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.
15 ದಿನಗಳಲ್ಲಿ 11 ಕಾಡುಪ್ರಾಣಿಗಳ ಸಾವು: ಆತಂಕ
ಕಲಬುರಗಿ ಈಗ ಕೊರೋನಾ ವೈರಸ್ ಪೀಡಿತ ಜಿಲ್ಲೆ. ಇಂತಹ ಸಂದರ್ಭದಲ್ಲಿ ಪೊಲೀಸರನ್ನು ಇಲ್ಲಿಗೆ ನಿಯೋಜನೆ ಮಾಡಿರುವುದು ಸರಿಯಲ್ಲ. ಅವರನ್ನು ಕೂಡಲೇ ವಾಪಸ್ ಕಳುಹಿಸಿ ಹಾಸನದ ಸಿಬ್ಬಂದಿಯನ್ನು ಮುಂದುವರಿಸುವಂತೆ ಸ್ಥಳೀಯರು ಜಿಲ್ಲಾ ರಕ್ಷಣಾಧಿಕಾರಿ ಅವರನ್ನು ಕೋರಿದ್ದರು. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಹರೀಶ್ ಪಾಂಡೆ ಈಗಾಗಲೇ ಸಿಬ್ಬಂದಿಯನ್ನು ವಾಪಸ್ ಕಳಿಸಲಾಗಿದೆ ಎಂದು ತಿಳಿಸಿದ್ದಾರೆ.
