ಕಲಬುರಗಿ(ಡಿ.22): ಪೊಲೀಸ್ ಜೀಪ್‌ವೊಂದು ಅಜ್ಜಿಯ ಪಾದದ ಮೇಲೆ ಹಾಯ್ದುಹೋದ ಘಟನೆ ನಗರದ ಹಳೆ ಜೇವರ್ಗಿ ರಸ್ತೆಯ ಎನ್ ಜಿ ಓ ಕಾಲೋನಿ ಬಳಿ ಘಟನೆ ಶನಿವಾರ ಸಂಜೆ ನಡೆದಿದೆ. ಅದೃಷ್ಟವಷಾತ್ ಅಜ್ಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 

"

ಹಳೆ ಜೇವರ್ಗಿ ರಸ್ತೆಯ ಎನ್ ಜಿ ಓ ಕಾಲೋನಿಯ ಮೆಡಿಕಲ್ ಶಾಪ್ ಮುಂಭಾಗದಲ್ಲಿ ಅಜ್ಜಿ ಹಸಿ ಕಡಲೆಕಾಯಿ ಮಾರುತಿದ್ದರು. ಈ ವೇಳೆ ಬಂದ ಪೊಲೀಸ್‌ ಜೀಪಿನ ಎಕ್ಸಲ್ ಕಟ್ಟಾದ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಪಾದಚಾರಿ ಮಾರ್ಗದಲ್ಲಿ ಕಡಲೆಕಾಯಿ ಮಾರುತ್ತಿದ್ದ ಅಜ್ಜಿಯತ್ತ ಧಾವಿಸಿದೆ. ಈ ವೇಳೆ ವೇಗವಾಗಿ ಬರುತ್ತಿದ್ದ ಜೀಪ್‌ ನೋಡಿದ ಅಜ್ಜಿ ಪಕ್ಕಕ್ಕೆ ಸರಿಯುವ ಯತ್ನ ಮಾಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆದರೆ, ಜೀಪಿನ ಎಕ್ಸಲ್ ಕಟ್ಟಾದ ಪರಿಣಾಮ ಚಾಲಕನಿಗೆ ನಿಯಂತ್ರಣಕ್ಕೆ ಸಿಗದಿದ್ದರಿಂದ ಅಜ್ಜಿಯ ಕಾಲಿನ ಮೇಲೆ ಹರಿದಿದೆ. ಇದರಿಂದ ಅಜ್ಜಿ ಅಸ್ವಸ್ಥಗೊಂಡಿದ್ದರು. ಅಸ್ವಸ್ಥಗೊಂಡ ಅಜ್ಜಿಯನ್ನ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಅಜ್ಜಿ ಕಾಲಿನ ಮೇಲೆ ಜೀಪ್ ಹರಿದಿದ್ದರಿದಂದ ಸಾರ್ವಜನಿಕರು ಪೊಲೀಸ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಶೋಕ್ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.