ಕ್ಯಾಬ್‌ಗೆ ಗುದ್ದಿ ಮಗುಚಿ ಬಿದ್ದ ಪೊಲೀಸ್ ಜೀಪ್!
ಪೊಲೀಸ್ ಜೀಪ್‌ವೊಂದು ಕ್ಯಾಬ್‌ಗೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಉರುಳಿ ಬಿದ್ದ ಘಟನೆ ಎಂ.ಜಿ.ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಘಟನೆ ನಡೆದಿದೆ. ಘಟನೆಯಲ್ಲಿ ಜೀಪ್ ಚಾಲಕ ಶ್ರೀಧರ್‌ಗೆ ಸಣ್ಣ-ಪುಟ್ಟಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಶ್ರೀಧರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಲಸೂರು ಸಂಚಾರ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು(ಮಾ.03): ಪೊಲೀಸ್ ಜೀಪ್‌ವೊಂದು ಕ್ಯಾಬ್‌ಗೆ ಡಿಕ್ಕಿ ಹೊಡೆದು ರಸ್ತೆಯಲ್ಲಿ ಉರುಳಿ ಬಿದ್ದ ಘಟನೆ ಎಂ.ಜಿ.ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಘಟನೆ ನಡೆದಿದೆ. ಘಟನೆಯಲ್ಲಿ ಜೀಪ್ ಚಾಲಕ ಶ್ರೀಧರ್‌ಗೆ ಸಣ್ಣ-ಪುಟ್ಟಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಶ್ರೀಧರ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಲಸೂರು ಸಂಚಾರ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಕೆಎಸ್‌ಆರ್‌ಪಿ ಜೀಪನ್ನು ಐಪಿಎಸ್ ಅಧಿಕಾರಿ ಸಿಸಿಬಿ ಡಿಸಿಪಿ ಕುಲದೀಪ್ ಜೈನ್ ಅವರಿಗೆ ನೀಡಲಾಗಿತ್ತು. ರಾಜ್ಯ ಪೊಲೀಸ್ ಮೀಸಲು ಪಡೆಯ (ಕೆಎಸ್‌ಆರ್‌ಪಿ) ಶ್ರೀಧರ್ ಅವರನ್ನು ಚಾಲಕರಾಗಿ ನಿಯೋಜಿಸಲಾಗಿತ್ತು. ಜೀಪ್ ಸೋಮವಾರ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಹೊರಟಿತ್ತು.
ಕಿಡ್ನಾಪ್ ಆಗಿದ್ದ 3 ವರ್ಷದ ಮಗುವನ್ನು 48 ಗಂಟೆಯಲ್ಲಿ ತಾಯಿ ಮಡಿಲಿಗೆ ಸೇರಿಸಿದ ಬೆಂಗ್ಳೂರು ಪೊಲೀಸ್ರು
ಜೀಪ್‌ನಲ್ಲಿ ಚಾಲಕ ಶ್ರೀಧರ್ ಮಾತ್ರ ಇದ್ದರು. ಸೋಮವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಟ್ರಿನಿಟಿ ರಸ್ತೆಯಲ್ಲಿ ಬರುವಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿದೆ. ಬಳಿಕ ಕ್ಯಾಬ್‌ಗೆ ಡಿಕ್ಕಿಯಾಗಿ ಜೀಪ್ ಉರುಳಿ ಬಿದ್ದಿದೆ. ಜೀಪ್ ಗುದ್ದಿದ ರಭಸಕ್ಕೆ ಕ್ಯಾಬ್ ಪಾದಚಾರಿ ರಸ್ತೆಯಲ್ಲಿದ್ದ ಕಂಬದ ಬಳಿ ಬಿದ್ದಿತ್ತು. ಶ್ರೀಧರ್ ವೇಗವಾಗಿ ಜೀಪ್ ಚಲಾಯಿಸಿದ್ದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಘಟನೆಯಲ್ಲಿ ಕ್ಯಾಬ್ ಮತ್ತು ಜೀಪ್ ಜಖಂಗೊಂಡಿದೆ.
ಅಪಘಾತದಿಂದ ಟ್ರಿನಿಟಿ ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಬಂದ ಪೊಲೀಸರು ಕೂಡಲೇ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.
ನೇಣಿಗೆ ಶರಣಾದ ನಟಿ, ಎರಡು ದಿನ ಬಳಿಕ ಘಟನೆ ಬೆಳಕಿಗೆ
ಚಾಲಕ ಬ್ರೇಕ್ ವೈಫಲ್ಯದಿಂದ ಘಟನೆ ಸಂಭವಿಸಿದೆ ಎಂದು ಹೇಳಿಕೆ ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಲಸೂರು ಸಂಚಾರ ಠಾಣೆ ಪೊಲೀಸರು ತಿಳಿಸಿದರು.
ಐಪಿಎಸ್ ಅಧಿಕಾರಿ ವಿರುದ್ಧ ಆಕ್ರೋಶ!
ಸಿಸಿಬಿ ಡಿಸಿಪಿ ಕುಲದೀಪ್ ಜೈನ್ ಅವರು ಕೆಲ ತಿಂಗಳ ಹಿಂದೆ ತಮ್ಮ ನಿವಾಸ ಖಾಲಿ ಮಾಡಲು ಕೆಎಸ್‌ಆರ್‌ಪಿಯ ಸಿಬ್ಬಂದಿ ಮತ್ತು ವಾಹನವನ್ನು ಬಳಕೆ ಮಾಡಿಕೊಂಡು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದರು. ಅಧಿಕಾರಿ ಕುಲದೀಪ್ ಜೈನ್ ಅವರಿಗೆ ಈಗಾಗಲೇ ಎಲ್ಲಾ ಐಪಿಎಸ್ ಅಧಿಕಾರಿಗಳಿಗೆ ನೀಡಿರುವಂತೆ ಇನ್ನೋವಾ ವಾಹನವನ್ನು ಕಚೇರಿ ಬಳಕೆಗೆ ನೀಡಲಾಗಿದೆ. ಆದರೂ ಹೊಸ ಬೊಲೆರೋ ಜೀಪನ್ನು ಅವರಿಗೆ ನಿಯೋಜಿಸಲಾಗಿದೆ. ಕೆಲವು ಠಾಣೆಗಳಲ್ಲಿ ಗಸ್ತು ತಿರುಗಲು ಇನ್ನು ಕೂಡ ಹೆಚ್ಚುವರಿ ಜೀಪ್‌ಗಳ ಅಗತ್ಯವಿದೆ. ಇಂತಹ ಸ್ಥಿತಿಯಲ್ಲಿ ಅಧಿಕಾರಿಗೆ ಹೊಸ ವಾಹನ ನೀಡಿರುವುದಕ್ಕೆ ಇದೀಗ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.