ಕಲಬುರಗಿ(ಜ.03): ಭೀಮಾ‌ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೃದ್ದೆಯನ್ನ ಪೊಲೀಸ್ ಪೇದೆ ರಕ್ಷಿಸಿದ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿಯಲ್ಲಿ ನಡೆದಿದೆ. ಪೊಲೀಸ್ ಠಾಣೆ ಪೇದೆ ಅನಿಲ್‌ಕುಮಾರ ವೃದ್ಧೆಯನ್ನು ರಕ್ಷಿಸಿದ ಪೇದೆ.

ಕಟ್ಟಿಸಂಗಾವಿ ಬಳಿಯ ಭೀಮಾ ಬ್ರೀಡ್ಜ್‌‌ನ ಕಬ್ಬಿಣದ ರಾಡಿಗೆ ಜೋತು ಬಿದ್ದಿದ್ದರು ವೃದ್ದೆ. ಆಳಂದ ಮೂಲದ ಗುರುಬಾಯಿ (60) ಎಂಬ ವೃದ್ದೆಯಿಂದ ಭೀಮಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದರು.

ಚುನಾವಣೆಯಲ್ಲಿ ಸಹಕಾರ: PSIಗೆ ಸಿಹಿ ತಿನ್ನಿಸಿದ ಗ್ರಾ.ಪಂ ಸದಸ್ಯ

ಅದೇ ವೇಳೆ ಭೀಮಾ ಬ್ರೀಡ್ಜ್ ಮೇಲೆ ಗಸ್ತಿನಲ್ಲಿದ್ದ ಪೇದೆ ಅನಿಲ್‌ಕುಮಾರ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೃದ್ದೆಯನ್ನ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ತಕ್ಷಣ ಎಚ್ಚೆತ್ತು ಕಾರ್ಯಪ್ರವೃತ್ತರಾಗಿದ್ದಾರೆ.

ಹೊಸ ವರ್ಷದ ದಿನದಂದು ನಡೆದಿದ್ದ ಘಟನೆ, ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಪೇದೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಜೇವರ್ಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.