ವಿಜಯಪುರ(ಜ.03): ಪೊಲೀಸರ ಋಣ ತೀರಿಸಿದ ಗ್ರಾಮ ಪಂಚಾಯತ್ ನೂತನ ಸದಸ್ಯನ ಬಗ್ಗೆ ಸದ್ಯ ಎಲ್ಲೆಡೆ ಚರ್ಚೆಯಾಗುತ್ತಿದೆ. ಚುನಾವಣೆಯಲ್ಲಿ ಸಹಕರಿಸಿದ್ದಕ್ಕೆ ಪಿಎಸ್ಐ ಗೆ ಧನ್ಯವಾದ ತಿಳಿಸಿ ಸಿಹಿ ತಿನ್ನಿಸಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದು ಈಗ ವೈರಲ್ ಅಗಿದೆ.

ಗೆಲುವಿಗೆ PSI ಸಹಕರಿಸಿದ್ದು ಹೇಗೆ? ಯಾವ ರೀತಿ ಅನ್ನೋದೆ ಈಗ ಆ ಗ್ರಾಮದಲ್ಲಿ ಚರ್ಚಾ ವಿಷಯವಾಗಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಪಿಎಸ್ಐ, ಓರ್ವ ಪೇದೆಗೆ ನೂತನ ಗ್ರಾ.ಪಂ ಸದಸ್ಯ ಸನ್ಮಾನ ಮಾಡಿದ್ದಾರೆ.

ಅದೊಂದು ಫಿಂಗರ್ ಪ್ರಿಂಟ್... ಕೋಟಿ ಕೋಟಿಗಳ ಪ್ರಕರಣ ಬಯಲು ಮಾಡಿತ್ತು!

ಸನ್ಮಾನಕ್ಕೆ ಪ್ರತಿಯಾಗಿ ಗೆದ್ದ ಅಭ್ಯರ್ಥಿಗೆ ಮಹಿಳಾ ಪಿಎಸ್‌ಐ ಸಿಹಿ ತಿನ್ನಿಸಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ತಾಳಿಕೋಟೆ ತಾಲೂಕಿನ ಬಳವಾಟ ಗ್ರಾ. ಪಂ. ಚುನಾವಣೆಯಲ್ಲಿ  ಬಸನಗೌಡ ಸಾಸನೂರ ಗೆಲುವು ಸಾಧಿಸಿದ್ದಾರೆ.

ಈ ಹಿನ್ನೆಲೆ ಪಿ ಎಸ್‌ಐ ಗಂಗೂಬಾಯಿ ಜಿ. ಬಿರಾದಾರಗೆ ಠಾಣೆಯಲ್ಲಿ ಸನ್ಮಾನ ಮಾಡಲಾಗಿದೆ. ನಂತರ ಠಾಣೆಯ ಎದುರು ಪೊಲೀಸ್ ಪೇದೆ ಶಿವನಗೌಡ ಬಿರಾದಾರ ಗೆ ಸನ್ಮಾನ ಮಾಡಲಾಗಿದೆ.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು

ಬಳಿಕ ಫೋಟೋ ತೆಗೆದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಚುನಾವಣೆಯಲ್ಲಿ ಸಹಕರಿಸಿದ್ದಕ್ಕೆ ಪಿ ಎಸ್ ಐ ಜಿ. ಜಿ. ಬಿರಾದಾರ ಮೇಡಂ, ನಮ್ಮೂರ ಹಿತೈಷಿ ಪೊಲೀಸ್ ಆರಕ್ಷಕ ಶಿವನಗೌಡ ಬಿರಾದಾರರನ್ನು ಭೇಟಿಯಾಗಿ ಗೆಲುವಿಗೆ ಸಹಕರಿಸಿದ್ದಕ್ಕೆ ಗೌರವ ಸನ್ಮಾನ‌ ಎಂದು ಫೇಸ್ ಬುಕ್ ನಲ್ಲಿ ಬರೆಯಲಾಗಿದೆ.

ಬಸವರಾಜ ಭಜಂತ್ರಿ‌ ಎಂಬವರು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿ ಸಂತಸ ವ್ಯಕ್ತಪಡಿಸಿದ್ದು, ತಪ್ಪಿನ ಅರಿವಾಗುತ್ತಿದ್ದಂತೆ‌ ಫೇಸ್ ಬುಕ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಅಷ್ಟರಲ್ಲಿ ಫೇಸ್ ಬುಕ್ ಪೋಸ್ಟ್ ಸ್ಕ್ರೀನ್ ಶಾಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.