ಚಾಮರಾಜನಗರ (ನ.18): ಪೊಲೀಸ್ ಪೇದೆಯೊಬ್ಬ 10 ವರ್ಷಗಳಿಂದ ಪ್ರೀತಿ ನಾಟಕವಾಡಿ ಬಳಿಕ ಕೈಕೊಟ್ಟಿರುವ  ಆರೋಪ ಚಾಮರಾಜನಗರದಲ್ಲಿ ನಡೆದಿದೆ. 

ಇರಸವಾಡಿ ಸಂತೆಮರಹಳ್ಳಿ ಪೊಲೀಸ್ ಕಾನ್ಸ್‌ಟೇಬಲ್ ಬಂಧಿತ ಆರೋಪಿ.

ಪ್ರಸಾದ್ ಅದೇ ಗ್ರಾಮದ ಯುವತಿಯನ್ನು ಬರೋಬ್ಬರಿ 10 ವರ್ಷಗಳಿಂದ ಪ್ರೀತಿಸುವ ನಾಟಕವಾಡಿ ಕೈಕೊಟ್ಟಿದ್ದಾನೆಂದು ಯುವತಿ ಹಾಗೂ ಸಂಬಂಧಿಕರು ಅಳಲು ತೋಡಿಕೊಂಡಿದ್ದಾರೆ. 

ಪೊಲೀಸರ ಹೆಸರಲ್ಲಿ ಫೇಸ್‌ಬುಕ್‌ ಖಾತೆ, ಹಣದ ಬೇಡಿಕೆ: ಕಂಗಾಲಾದ ಆರಕ್ಷಕರು..! ...

ಮನೆಯವರು ಬೇರೆಯವರೊಂದಿಗೆ ಮದುವೆ ಮಾಡಲು ಮುಂದಾದಾಗ ಹುಡುಗನ ಮನೆಯವರಿಗೆ ಪ್ರೀತಿಸುತ್ತಿರುವುದಾಗಿ  ಹೇಳಿ ಅವರ ವಿರುದ್ಧ ದಬ್ಬಾಳಿಕೆ ಮಾಡಿ ಮದುವೆ ಮುರಿಯುತ್ತಿದ್ದ. 

ಈಗ ಕೈಕೊಟ್ಟು ಬೇರೆಯಾಕೆಯೊಂದಿಗೆ ದೇಗುಲದಲ್ಲಿ ಮದುವೆಯಾಗಿ ವಂಚಿಸಿದ್ದಾನೆಂದು ದೂರಲಾಗಿದೆ. 

ಪೊಲೀಸರ ಕುಮ್ಮಕ್ಕು : ಮೋಸ ಮಾಡಿ ವಂಚನೆ ದೂರನ್ನು ನ.9 ರಂದು ದಾಖಲಿಸಿದ್ದು ಆತ  ನ. 13 ರಂದು ಮದುವೆಯಾಗಿದ್ದಾನೆ. ಯುವತಿಗೆ ಅನ್ಯಾಯವಾಗಲೂ ಚಾಮರಾಜನಗರ ಪೂರ್ವ ಠಾಣೆ  ಪೊಲೀಸರ ಕುಮ್ಮಕ್ಕು  ಕಾರಣ. 

ದುರು ನೀಡಿದ ದಿನದಿಂದಲೂ ಆತನ ಪರವಾಗಿಯೇ  ನಡೆದುಕೊಳ್ಳುತ್ತಿದ್ದಾರೆಂದು ಯುವತಿಯ ಸಂಬಮಧಿಕರು ಕಿಡಿಕಾರಿದ್ದಾರೆ. 

ಸದ್ಯ ಐದು ಮಂದಿಯ ವಿರುದ್ಧ  ಪ್ರಕರಣದಾಖಲಾಗಿದ್ದ ಪ್ರಸಾದ್‌ನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.