ಗದಗ(ನ.18): ಪೊಲೀಸರನ್ನೇ ಟಾರ್ಗೆಟ್‌ ಮಾಡಿದ ಫೇಸ್‌ಬುಕ್‌ ಕಳ್ಳರು ಪೊಲೀಸರ ಹೆಸರಲ್ಲಿ ನಕಲಿ ಖಾತೆ ಕ್ರಿಯೆಟ್‌ ಮಾಡಿ ಹಣ ವಸೂಲಿ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿದೆ. 

ಗದಗ ಶಹರ ಠಾಣೆ ಸಿಪಿಐ ಪಿ.ವಿ. ಸಾಲಿಮಠ ಹೆಸರಲ್ಲಿ ಫೇಸ್‌ಬುಕ್‌ ನಕಲಿ ಖಾತೆ ಕ್ರಿಯೆಟ್‌ ಮಾಡಿದ ಫೇಸ್‌ಬುಕ್‌ ಕಳ್ಳರು ಅರ್ಟೆಂಟಾಗಿ ಹಣದ ಅವಶ್ಯಕತೆ ಇದೆ ಎಂದು ಫೇಸ್‌ಬುಕ್‌ ಮೂಲಕ ಸ್ನೇಹಿತರಿಗೆ ಮೆಸೇಜ್‌ ಕಳಿಸಿ, ಹಣ ಹೊಡೆಯುತ್ತಿದ್ದಾರೆ. 

ಗದಗ: ಒಂಟಿ ವೃದ್ಧೆಯ ಕೊಲೆ ಮಾಡಿದ ಹಂತಕರ ಬಂಧನ

ಈ ಬಗ್ಗೆ ಖುದ್ದು ಸಿಪಿಐ ಸಾಲಿಮಠ ಅವರೇ ತಮ್ಮ ಸ್ಟೇಟಸ್‌ ಮೂಲಕ ಸ್ನೇಹಿತರಿಗೆ ಸಂದೇಶ ರವಾನಿಸಿ, ಹಣ ನೀಡದಂತೆ ಸೂಚಿಸಿದ್ದಾರೆ. ನನ್ನ ಫೇಸ್‌ಬುಕ್‌ ಖಾತೆ ಹ್ಯಾಕ್‌ ಆಗಿದೆ. ಯಾರೂ ಹಣ ಹಾಕಬೇಡಿ ಎಂದು ಸ್ನೇಹಿತರಿಗೆ ಸಂದೇಶದ ಮೂಲಕ ಹೇಳುತ್ತಿದ್ದಾರೆ.  ಈ ಕುರಿತು ಸೈಬರ್‌ ಕ್ರೈಂ ಸಿಪಿಐ ದೂರು ನೀಡಿದ್ದು, ಸಾಮಾಜಿಕ ಜಾಲತಾಣಗಳ ಕಳ್ಳರ ಹಾವಳಿಗೆ ಪೊಲೀಸರು ಕಂಗಾಲಾಗಿರುವುದು ವಿಪರ್ಯಾಸದ ಸಂಗತಿಯಾಗಿದೆ.