Asianet Suvarna News Asianet Suvarna News

ಸೆಪ್ಟೆಂಬರ್‌ನಿಂದ ಹೆಲ್ಮೆಟ್ ನಿಯಮದಲ್ಲಿ ಬದಲಾವಣೆ!

ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿ ಸವಾರರಿಗೆ ಭಾರತದಲ್ಲಿ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಇದಾದ ಬಳಿಕ ಹೆಲ್ಮೆಟ್ ಮಾರಾಟದಲ್ಲಿ ಹಲವು ಬದಲಾವಣೆಗಳಾಗಿದೆ. ಇದೀಗ ಸೆಪ್ಟೆಂಬರ್‌ನಿಂದ ಮತ್ತೆ ನಿಯಮದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ನೂತನ ನಿಯಮದ ಕುರಿತ ವಿವರ ಇಲ್ಲಿದೆ.

New two wheeler Helmet norms come into effect on September 4 in India
Author
Bengaluru, First Published Jul 28, 2020, 7:04 PM IST

ನವದೆಹಲಿ(ಜು.28):  ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಹಾಗೂ ಅತೀ ಮುಖ್ಯ. ಸವಾರರಿಗೆ ಹಲವು ಬಗೆಯ ಹೆಲ್ಮೆಟ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದೀಗ ಸೆಪ್ಟೆಂಬರ್ 4 ರಿಂದ ವಿದೇಶದಿಂದ ಆಮದು ಮಾಡಿಕೊಳ್ಳುವ ಹೆಲ್ಮೆಟ್ ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದೆ. ಆದರೆ ಆಮದು ಮಾಡಿಕೊಳ್ಳುವ ಹೆಲ್ಮೆಟ್ ಮಾರಾಟ ಮಾಡಲು ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್‌ನಿಂದ ISI ಪ್ರಮಾಣ ಪಡೆದುಕೊಳ್ಳಲೇಬೇಕಿದೆ.

11 ಕಿ.ಮೀ ರೈಡ್ ಬಳಿಕ ಹೆಲ್ಮೆಟ್ ತೆಗೆದಾಗ ಬೆಚ್ಚಿ ಬಿದ್ದ ಶಿಕ್ಷಕ; ಆಸ್ಪತ್ರೆಗೆ ದಾಖಲು!

ಭಾರತದಲ್ಲಿ ಮಾರಾಟ ಮಾಡುವ ಹೆಲ್ಮೆಟ್ ISI ಚಿಹ್ನೆ ಹೊಂದಿರಬೇಕು. ISI ನಿಯಮಗಳ ಪ್ರಕಾರ ಇದರ ಗುಣಮಟ್ಟತೆಯನ್ನು ಪ್ರಮಾಣೀಕರಿಸಲಾಗುತ್ತದೆ. ISI ಗುಣಮಟ್ಟವಿರುವ ಆಮದು ಹೆಲ್ಮೆಟ್‌ಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಹೆಲ್ಮೆಟ್ ತೂಕ 1.2 ಕೆಜಿ ತೂಕ ಮೀರಬಾರದು. 

ಹೆಲ್ಮೆಟ್ ಹಾಕದ ಬೈಕ್ ಸವಾರನಿಗೆ ಫೈನ್; ನಡುರಸ್ತೆಯಲ್ಲಿ ಬೈಕ್ ಪುಡಿ ಪುಡಿ!

ಈ ಹಿಂದೆ ವಿದೇಶಿ ಹೆಲ್ಮೆಟ್‌ಗಳ ತೂಕವನ್ನು ಗರಿಷ್ಠ 1.5 ಕೆಜಿ ಮಾಡಲಾಗಿತ್ತು. ISI ಪ್ರಮಾಣೀಕೃತ ಹೆಲ್ಮೆಟ್ ಮಾತ್ರ ಮಾರಾಟ ಮಾಡಲು ಅವಕಾಶವಿದೆ. ಗುಣಮಟ್ಟವಿಲ್ಲದ ಹಾಗೂ ISI ರಹಿತ ಹೆಲ್ಮೆಟ್ ಮಾರಾಟ ಮಾಡುವುದು ಅಪರಾಧವಾಗಿದೆ. 

2019ರ ಅಂಕಿ ಅಂಶಗಳ ಪ್ರಕಾರ 1.51 ಲಕ್ಷ ರಸ್ತೆ ಅಪಘಾತಗಳಲ್ಲಿ ಶೇಕಡಾ 36 ರಷ್ಟು ಪ್ರಕರಣ ದ್ವಿಚಕ್ರ ವಾಹನಗಳಾಗಿವೆ. ಇದರಲ್ಲೆ ಶೇಕಡಾ 29 ರಷ್ಟು ಮಂದಿ ಹೆಲ್ಮೆಟ್ ರಹಿತ ಪ್ರಯಾಣದಿಂದ ಸಾವೀಗೀಡಾಗಿದ್ದಾರೆ. ಹೀಗಾಗಿ ಭಾರತದಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 

Follow Us:
Download App:
  • android
  • ios