ಮಂಡ್ಯ(ಡಿ.05): ಮತ ಚಲಾಯಿಸುವುದು ಎಷ್ಟು ಮುಖ್ಯವೋ ಅದನ್ನು ಗೌಪ್ಯವಾಗಿಡುವುದೂ ಅಷ್ಟೇ ಮುಖ್ಯ. ಆದರೆ ಕೆ. ಆರ್. ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಯುವಕನೊಬ್ಬ ಮತ ಚಲಾಯಿಸಿ ಅದನ್ನು ಬಹಿರಂಗಪಡಿಸಿದ್ದಾನೆ.

ಕೆ. ಆರ್. ಪೇಟೆ ಉಪಚುನಾವಣೆಯಲ್ಲಿ ಗೌಪ್ಯ ಮತದಾನ ಬಹಿರಂಗ ಪಡಿಸಿದ ಜೆಡಿಎಸ್ ಕಾರ್ಯಕರ್ತ ತಾನು ಜೆಡಿಎಸ್‌‌ಗೆ ಮತಹಾಕಿದ್ದನ್ನು ವಿಡಿಯೋ ಮಾಡಿ ಬಹಿರಂಗಪಡಿಸಿದ್ದಾನೆ. ಜೆಡಿಎಸ್‌ ಕಾರ್ಯಕರ್ತ ಪದ್ಮನಾಭ ವಿಡಿಯೋ ಹರಿಬಿಟ್ಟಿರುವ ಜೆಡಿಎಸ್ ಕಾರ್ಯಕರ್ತ.

ರಾಣಿಬೆನ್ನೂರು: ಓಟ್ ಹಾಕಿದ ಫೋಟೋ ಬಹಿರಂಗ ಪಡಿಸಿದ ಮತದಾರ

ಜೆಡಿಎಸ್ ಅಭ್ಯರ್ಥಿ ಬಿ. ಎಲ್‌. ದೇವರಾಜು ಅವರಿಗೆ ಮತಹಾಕಿರುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ವಾಟ್ಸಪ್ ಸ್ಟೇಟಸ್‌ಗೆ ಅಪ್ಲೋಡ್ ಮಾಡಿದ್ದಾನೆ. ಜೆಡಿಎಸ್‌ಗೆ ಮತ ಹಾಕಿದ್ದೇನೆ ಎಂದು ಹೇಳಿಕೊಳ್ಳಲು ಕಾರ್ಯಕರ್ತ ವಿಡಿಯೋ ಅಪ್ಲೋಡ್ ಮಾಡಿದ್ದಾನೆ.

ರಾಜ್ಯದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, 9ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಮತಗಟ್ಟೆಯ ಮುಂದೆಯೇ ಹಣ ಹಂಚಿಕೆ..! ಕಣ್ಮುಚ್ಚಿ ಕುಳಿತ ಪೊಲೀಸರು