ತುರ್ತು ವೈದ್ಯಕೀಯ ಪಾಸ್‌ ದುರ್ಬಳಕೆ|ಕಾರು ಜಪ್ತಿ ಮಾಡಿದ ಪೊಲೀಸರು| ಕಾರಿನಲ್ಲಿದ್ದವರ ವೈದ್ಯಕೀಯ ತಪಾಸಣೆ ನಡೆಸಿ, ಹೋಂ ಕ್ವಾರಂಟೈನ್‌|

ಧಾರವಾಡ(ಏ.16): ತುರ್ತು ವೈದ್ಯಕೀಯ ಸೇವೆಗೆಂದು ನೀಡುವ ಪಾಸ್‌ ದುರ್ಬಳಕೆ ಮಾಡಿಕೊಂಡು, ಮದುವೆ ಕಾರ್ಯಕ್ಕೆ ಬಳಸಿಕೊಂಡ ಕಾರನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ ಘಟನೆ ಬುಧವಾರ ನಗರದಲ್ಲಿ ನಡೆದಿದೆ. ಜತೆಗೆ ಕಾರಿನಲ್ಲಿದ್ದವರ ವೈದ್ಯಕೀಯ ತಪಾಸಣೆ ನಡೆಸಿ, ಹೋಂ ಕ್ವಾರಂಟೈನ್‌ ಕಡ್ಡಾಯಗೊಳಿಸಲಾಗಿದೆ. 

ಇಲ್ಲಿಗೆ ಸಮೀಪದ ನರೇಂದ್ರ ಗ್ರಾಮದಲ್ಲಿ ಡಿವೈಎಸ್ಪಿ ರವಿ ನಾಯಕ ಗಸ್ತು ತಿರುವಾಗ ಅನುಮಾನದ ಮೇರೆಗೆ ತಪಾಸಣೆ ನಡೆಸಿದಾಗ ಕಾರು ಸಿಕ್ಕಿ ಬಿದ್ದಿದ್ದು, ಅದರಲ್ಲಿ ಇದ್ದವರು ಉಪ್ಪಿನ ಬೆಟಗೇರಿ ಗ್ರಾಮದವರಾಗಿದ್ದಾರೆ. 

ವಧುವಿನ ಕಡೆಯವರಾದಪರಿಶೀಲನೆ ವೇಳೆ ಓಪನ್‌ ಆದ ಮದ್ಯದಂಗಡಿ: ಎಣ್ಣೆಗಾಗಿ ಕ್ಯೂ ನಿಂತ ಕುಡುಕರು..!

ಇವರೆಲ್ಲಾ ಮಂಗಳವಾರ ಹುಬ್ಬಳ್ಳಿಯಲ್ಲಿ ನಡೆದ ಮದುವೆ ಕಾರ್ಯ ಮುಗಿಸಿಕೊಂಡು ವಾಪಸ್‌ ಹಿಂದಿರುಗುತ್ತಿದ್ದರು ಎಂದು ತಿಳಿದು ಬಂದಿದೆ.