ಧಾರವಾಡ(ಏ.16): ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆಗೆ ಭೇಟಿ ನೀಡಿದ್ದರಿಂದ ವೈನ್‌ ಶಾಪ್‌ವೊಂದು ಸೋಮವಾರ ಕೆಲ ಹೊತ್ತು ಬಾಗಿಲು ತೆರೆದಿತ್ತು. ಜನರು ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಮದ್ಯಕ್ಕಾಗಿ ಕ್ಯೂನಲ್ಲಿ ನಿಂತ ಘಟನೆ ನಗರದಲ್ಲಿ ನಡೆದಿದೆ. 

ಇಲ್ಲಿನ ಟೋಲ್‌ನಾಕಾ ವೃತ್ತದ ಬಳಿಯ ದುರ್ಗಾ ವೈನ್‌ನಲ್ಲಿ ಇತ್ತೀಚೆಗೆ ಕಳ್ಳತನದ ಯತ್ನ ನಡೆದಿತ್ತು. ಈ ಹಿನ್ನೆಲೆ ವೈನ್‌ಶಾಪ್‌ ಮದ್ಯದ ಸಂಗ್ರಹ ಕುರಿತು ಅಬಕಾರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. 

ಕೊರೋನಾ ಭೀತಿ: ಇಡೀ ಬ್ಯಾಂಕ್‌ ಸಿಬ್ಬಂದಿ ಹೋಂ ಕ್ವಾರಂಟೈನ್‌

ಈ ರಸ್ತೆಯಲ್ಲಿ ಸಂಚರಿಸುವ ಕೆಲವರು ವೈನ್‌ಶಾಪ್‌ ಆರಂಭವಾಗಿದೆ ಎಂದು ತಿಳಿದು ಶಾಪ್‌ನಲ್ಲಿ ಮದ್ಯ ಕೇಳಿದ ಘಟನೆಯೂ ನಡೆದಿದೆ. ಆದರೆ, ಸ್ಥಳದಲ್ಲಿದ್ದ ಅಬಕಾರಿ ಪೊಲೀಸರು ಅವರಿಗೆ ತಿಳಿ ಹೇಳಿ ಕಳಿಸುವುದರಲ್ಲಿ ಸಾಕಾಗಿ ಹೋಗಿದೆ.