ಬಾಗಲಕೋಟೆ: ಸಿಎಫ್‌ಐ ಸದಸ್ಯತ್ವಕ್ಕೆ ಮುಂದಾಗಿದ್ದ ಹಲವರು ವಶಕ್ಕೆ

*  ದುರ್ವರ್ತನೆ ತೋರಿದ ಪೊಲೀಸರು: ವಿದ್ಯಾರ್ಥಿಗಳು
*  ಕೋವಿಡ್‌ ನಿಯಮಾವಳಿ ಉಲ್ಲಂಘಣೆ
*  ಸದಸ್ಯತ್ವ ಅಭಿಯಾನದ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದ ಪೊಲೀಸರು  

Police Arrested Many People for Before CFI Membership in Bagalkot grg

ಬಾಗಲಕೋಟೆ(ಆ.18): ಅನುಮತಿ ಇಲ್ಲದೆ ಸಿಎಫ್‌ಐ (ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ) ಕಾರ್ಯಕರ್ತರಿಂದ ಸದಸ್ಯತ್ವಕ್ಕೆ ಮುಂದಾಗಿದ್ದ ಹಲವರನ್ನು ಕೋವಿಡ್‌ ನಿಯಮಾವಳಿ ಉಲ್ಲಂಘಿಸಿದ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದ ಘಟನೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಮಂಗಳವಾರ ನಡೆದಿದೆ.

ಸದಸ್ಯತ್ವ ಅಭಿಯಾನದ ಉದ್ಘಾಟನಾ ಸಂದರ್ಭದಲ್ಲಿ ಸಿಎಫ್‌ಐ ರಾಜ್ಯ ನಾಯಕರನ್ನು ಬಂ​ಧಿಸಿರುವ ಜಮಖಂಡಿ ಪೊಲೀಸರ ಕ್ರಮವನ್ನು ವಿದ್ಯಾರ್ಥಿಗಳು ಖಂಡಿಸಿದ್ದು ವಿನಾಕಾರಣ ಪೊಲೀಸರು ಬಂಧಿ​ಸಿದ್ದಾರೆ ಎಂದು ಕೋವಿಡ್‌ ನಿಯಮಗಳನ್ನು ಪಾಲಿಸಿ ಕಾರ್ಯಕ್ರಮ ಮಾಡುತ್ತಿದ್ದರು ಸಹ ಪೊಲೀಸರು ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.

ಇದೆ ಅವಧಿಗೆ ಸಿಎಂ ಆಗುತ್ತೇನೆ ಎಂದ ಉಮೇಶ್ ಕತ್ತಿ : ಅಚ್ಚರಿ ಮೂಡಿಸಿದ ಹೇಳಿಕೆ

ಎಸ್‌ಪಿ ಸ್ಪಷ್ಟನೆ:

ಸದಸ್ಯತ್ವ ಅಭಿಯಾನದ ಕಾರ್ಯಕ್ರಮಕ್ಕೆ ಜಮಖಂಡಿ ಪೊಲೀಸರು ಅನುಮತಿಯನ್ನು ನಿರಾಕರಿಸಿದ್ದರೂ ಪೊಲೀಸರ ಎದುರು ಕಾರ್ಯಕ್ರಮವನ್ನು ಮಾಡುವುದಿಲ್ಲವೆಂದು ಹೇಳಿ ನಂತರ ನೂರಾರು ವಿದ್ಯಾರ್ಥಿಗಳನ್ನು ಸೇರಿಸಿ ಕಾರ್ಯಕ್ರಮ ನಡೆಸಿದ ಆರೋಪ ಕುರಿತು ಪೊಲೀಸರು ಪ್ರಶ್ನಿಸಿದಾಗ ದುರ್ವರ್ತನೆ ತೋರಿದ ಸಂಘಟನೆಯ ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಲೋಕೇಶ ಜಗಲಾಸರ ಅವರು ಸ್ಪಷ್ಟನೆ ನೀಡಿದ್ದಾರೆ.
 

Latest Videos
Follow Us:
Download App:
  • android
  • ios