ರೋಣ(ಜೂ.20): ಹೆಚ್ಚೆಚ್ಚು ಭಾರತಿಯ ಸೈನಿಕರನ್ನು ಚೀನಾದವರು ಕೊಲ್ಲಲಿ. ಚೀನಾ ಭಾರತವನ್ನು ನಾಶ ಮಾಡಲಿ ಎಂದು ಚೀನಾ ಪರ ವಿಕೃತ ಹೇಳಿಕೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ ದೇಶದ್ರೋಹಿಯನ್ನು ರೋಣ ಪೊಲೀಸರು ಗುರುವಾರ ರಾತ್ರಿ ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ. 

ಭಾರತ- ಚೀನಾ ಗಡಿ ವಿವಾದದಲ್ಲಿ ಭಾರತೀಯ 20 ಸೈನಿಕರು ಹುತಾತ್ಮರಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ರೋಣ ಪಟ್ಟಣದ ಮುಲ್ಲನಬಾವಿ ವೃತ್ತದಲ್ಲಿ ಮೊಬೈಲ್‌ ಶಾಪ್‌ ಇಟ್ಟುಕೊಂಡಿದ್ದ ಬಸವರಾಜ ಗೋಮಾಡಿ (ಸಂಗಳದ) ಚೀನಾ ಪರ ಸಲ್ಲದ ಹೇಳಿಕೆ ನೀಡಿದ್ದು, ಈ ಕುರಿತು ನಾಡಿನಾದ್ಯಂತ ಸೈನಿಕರು ಮತ್ತು ದೇಶಾಭಿಮಾನಿಗಳಿಂದ ಆಕ್ರೋಶಕ್ಕೆ ಕಾರಣವಾಗಿದ್ದಾನೆ. 

ದೇಶ, ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರ ನಿಂದಿಸಿದ ಗದಗದ ಕ್ರಿಮಿ

ಈ ಹಿನ್ನೆಲೆಯಲ್ಲಿ ರೋಣ ಪೊಲೀಸರು ದೇಶದ್ರೋಹಿ ವಿರುದ್ಧ ಗುರುವಾರ ಸ್ವಯಂ ದೂರು ದಾಖಲಿಸಿಕೊಳ್ಳುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದ. ಆರೋಪಿ ಪತ್ತೆಗೆ ತೀವ್ರ ಜಾಲ ಬೀಸಿದ ಪೊಲೀಸರು ಗುರುವಾರ ರಾತ್ರಿ 10 ಗಂಟೆ ಸುಮಾರು ಆರೋಪಿ ಬಂಧಿಸಿದ್ದಾರೆ. ಆರೋಪಿ ಬಸವರಾಜ ಗೋಮಾಡಿಯನ್ನು ಗದಗ ಉಪ ಕಾರಾಗೃಹಕ್ಕೆ ಕಳುಹಿಸಲಾಗಿದೆ.