Asianet Suvarna News Asianet Suvarna News

ದೇಶ, ದೇಶಕ್ಕಾಗಿ ಬಲಿದಾನ ಮಾಡಿದ ಸೈನಿಕರ ನಿಂದಿಸಿದ ಗದಗದ ಕ್ರಿಮಿ

ಭಾರತ-ಚೀನಾ ಗಡಿಯಲ್ಲಿ  ಭಾರತದ 20 ಸೈನಿಕರು ಹುತಾತ್ಮ/  ಭಾರತೀಯ ಸೈನಿಕರ ಬಗ್ಗೆ ಅಶ್ಲೀಲವಾಗಿ ನಿಂದಸಿ ಪೋಸ್ಟ್/   ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರೋ ಪೋಸ್ಟ್ / ಗದಗ ಜಿಲ್ಲೆ ರೋಣ ಪಟ್ಟಣದ ಬಸವರಾಜ್ ಯಶ್ ಗೆ ಹುಡುಕಾಟ

Indo china clash Gadag man Sedition post in Social Media
Author
Bengaluru, First Published Jun 18, 2020, 7:46 PM IST

ಗದಗ (ಜೂ. 18)  ದೇಶದ ಗಡಿಯಲ್ಲಿ ಸೈನಿಕರು ಪ್ರಾಣ ಅರ್ಪಣೆ ಮಾಡುತ್ತಿದ್ದರೆ ಇಲ್ಲೊಬ್ಬ ಸೋಶಿಯಲ್ ಮೀಡಿಯಾದಲ್ಲಿ ದೇಶದ್ರೋಹಿ ಪೋಸ್ಟ್ ಹಾಕುತ್ತಾನೆ. ಗದಗ ಜಿಲ್ಲೆಯ ವಿಕೃತ ವ್ಯಕ್ತಿ ಎನ್ನಲು ನೋವಾಗುತ್ತಿದೆ.

ಭಾರತೀಯ ಸೈನಿಕರನ್ನು ನಿಂದಿಸಿ ಪೋಸ್ಟ್ ಬರೆದಿದ್ದ ಗದಗ ಜಿಲ್ಲೆ ರೋಣ ಪಟ್ಟಣದ ಬಸವರಾಜ ಯಶ್ ಎಂಬಾತನಿಗೆ ಹುಡುಕಾಟ ನಡೆದಿದೆ.  ರೋಣದ ಮುಲ್ಲಾನಭಾವಿ ಓಣಿಯಲ್ಲಿ‌ ಮೊಬೈಲ್ ಶಾಪ್ ಇಟ್ಟು ಕೊಂಡಿರುವ ಯುವಕ ಬಸವರಾಜ ಮೇಲೆ  ಕಲಂ -153, 505(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಟಿಕ್ ಟಾಕ್ ಸೇರಿ  52  ಅಪ್ಲಿಕೇಶನ್ ಬ್ಯಾನ್

ನಾಪತ್ತೆಯಾದ ದೇಶ ದ್ರೋಹಿ ಬಸವರಾಜ್ ಹುಡುಕಾಟವನ್ನು ರೋಣ ಪೊಲೀಸರು ನಡೆಸಿದ್ದಾರೆ. ಇಂಥವರಿಗೆ ಯಾವ ಶಿಕ್ಷೆ ನೀಡಬೇಕು ಎಂಬುದನ್ನು ಜನರೇ ತೀರ್ಮಾನ ಮಾಡಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. 

ಕುತಂತ್ರಿ ಚೀನಾದೊಂದಿಗಿನ ಸಂಘರ್ಷದಲ್ಲಿ ಭಾರತದ 20  ಯೋಧರು ಬಲಿದಾನ ಮಾಡಿದ್ದರು. ಲಡಾಕ್ ಗಡಿಯಲ್ಲಿ ಆತಂಕದ ವಾತಾವರಣವಿದ್ದು ದೇಶದ ಒಳಗಿನಿಂದಿಲೇ ಇಂಥ ದೇಶದ್ರೋಹಿ ಪೋಸ್ಟ್ ಗಳು ಹರಿದುಬರುತ್ತಿರುವುದು ಮಾತ್ರ ದುರ್ದೈವ.

Indo china clash Gadag man Sedition post in Social Media


 

Follow Us:
Download App:
  • android
  • ios