ಗಂಗಾವತಿ(ಏ.02): ಇತ್ತೀಚಿಗೆ ನಗರದ ಸತ್ಯನಾರಾಯಣಪೇಟೆ, ಜಯನಗರ ಮತ್ತು ವೆಂಕಟೇಶ್ವರ ಕಾಲನಿ ವಡ್ಡರಹಟ್ಟಿಮತ್ತು ಗಂಗಾವತಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಅಂತಾರಾಜ್ಯ ಕಳ್ಳರನ್ನು ಬಂಧಿಸಿದ್ದಾರೆ. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ಸಂಗೀತ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಡಾ. ಬಿ.ಪಿ. ಚಂದ್ರಶೇಖರ, ವಿಶೇಷ ತಂಡ ರಚಿಸಿದ್ದು, ಪಿ.ಐ. ವೆಂಕಟಸ್ವಾಮಿ, ಸಿಪಿಐ ಸುರೇಶ ಕುಮಾರ ತಳವಾರ, ಪಿಎಸ್‌ಐ ಅಮರೇಶ ಹುಬ್ಬಳ್ಳಿ, ಶಹನಾಜ ಬೇಗಂ, ಸಿಬ್ಬಂದಿ ಚಿರಂಜೀವಿ, ಅನೀಲಕುಮಾರ, ವಿರೇಶ, ಮೈಲಾರಪ್ಪ, ರಾಘವೇಂದ್ರ, ನರಸಪ್ಪ, ಯಮನಪ್ಪ, ಮರಿಯಪ್ಪ, ಶ್ರೀಕಾಂತ ಸೇರಿಂದತೆ ಪೊಲೀಸ್‌ ತಂಡ ತನಿಖೆ ನಡೆಸಿ ಮಹಾರಾಷ್ಟ್ರದ ಅಭಿಜಿತ್‌ ಜಾಧವ್‌, ಸೊಲ್ಲಾಪುರ, ಸಚಿನ್‌ ಗಾಯಕವಾಡ ಸೊಲ್ಲಾಪುರ, ಹುಸೇನ್‌ ಗಾಯಕವಾಡ ಸೊಲ್ಲಾಪುರ ಇವರನ್ನು ಬಂಧಿಸಿ 225 ಗ್ರಾಂ ಚಿನ್ನದ ಆಭರಣಗಳು ಮತ್ತು 2670 ಗ್ರಾಂ ತೂಕದ ಬೆಳ್ಳಿಯ ಒಟ್ಟು 12 ಲಕ್ಷ ಮೊತ್ತದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕೊರೋನಾ ರಜೆಯಲ್ಲಿದ್ದ ಶಾಲೆಯ ಬೀಗ ಒಡೆದು ಕಳ್ಳತನ

5 ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆಂದು ಡಿವೈಎಸ್ಪಿ ಡಾ. ಬಿ.ಪಿ. ಚಂದ್ರಶೇಖರ ತಿಳಿಸಿದರು. ಪತ್ತೆಹಚ್ಚಿದ ಪೊಲೀಸ್‌ ತಂಡಕ್ಕೆ ಎಸ್‌ಪಿಯರು ವಿಶೇಷ ಬಹುಮಾನ ನೀಡಲಿದ್ದಾರೆಂದು ತಿಳಿಸಿದರು.