Asianet Suvarna News Asianet Suvarna News

ಕೊರೋನಾ ರಜೆಯಲ್ಲಿದ್ದ ಶಾಲೆಯ ಬೀಗ ಒಡೆದು ಕಳ್ಳತನ

ಶಾಲೆಯ ಬೀಗ ಮುರಿದು ಖದೀಮರಿಂದ ಕಳ್ಳತನ| ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಸಮೀಪ ಲೊಯೊಲ ಹೈಸ್ಕೂಲ್‌ನಲ್ಲಿ ನಡೆದ ಕಳ್ಳತನ| 

Theft in  School in Bengaluru
Author
Bengaluru, First Published Mar 20, 2020, 8:32 AM IST

ಬೆಂಗಳೂರು(ಮಾ.20): ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ರಜೆಯಲ್ಲಿರುವ ಖಾಸಗಿ ಶಾಲೆಯೊಂದರ ಬೀಗ ಮುರಿದು ಕಿಡಿಗೇಡಿಗಳು ಕಳ್ಳತನ ಎಸಗಿರುವ ಘಟನೆ ಬನ್ನೇರುಘಟ್ಟ ರಸ್ತೆ ಸಮೀಪ ನಡೆದಿದೆ.

ಬೆಳಗಾವಿ: ಬಾಡೂಟಕ್ಕೆ ಕರೆಯದಕ್ಕೆ ಹೀಗ್ ಮಾಡೋದಾ?

ಬನ್ನೇರುಘಟ್ಟ ರಸ್ತೆಯ ಲೊಯೊಲ ಹೈಸ್ಕೂಲ್‌ನಲ್ಲಿ ಕಳ್ಳತನ ನಡೆದಿದ್ದು, ಕೋಣನಕುಂಟೆ ಠಾಣೆಯಲ್ಲಿ ಆ ಶಾಲೆಯ ಪ್ರಾಂಶುಪಾಲರು ದೂರು ದಾಖಲಿಸಿದ್ದಾರೆ. ಕೊರೋನಾ ಸೋಂಕು ಆತಂಕದ ನಿಮಿತ್ತ ಶಾಲೆಗಳಿಗೆ ಸರ್ಕಾರ ರಜೆ ಘೋಷಿಸಿದೆ. ಅಂತೆಯೇ ಲೊಯೊಲ ಶಾಲೆಗೆ ಸಹ ರಜೆ ನೀಡಲಾಗಿದೆ.

ಇದು ದೈವ ಶಕ್ತಿಯಾ..? ಕದಿಯೋಕೆ ಬಂದವನಿಗೆ ಅಚಾನಕ್ ಗಾಢ ನಿದ್ದೆ..!

ಆ ಶಾಲೆಗೆ ಮಾ.14ರ ಸಂಜೆ 5ಕ್ಕೆ ಭದ್ರತಾ ಸಿಬ್ಬಂದಿ ತೆರಳಿದ್ದರು. ಆಗ ಪ್ರಾಂಶುಪಾಲರ ಮತ್ತು ಶಿಕ್ಷಕರ ಕೊಠಡಿ ಬೀಗ ಹೊಡೆದು 78 ಸಾವಿರ, ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ಗಳನ್ನು ಕಳವು ಮಾಡಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಮರುದಿನ ಪ್ರಾಂಶುಪಾಲರು ಶಾಲೆಗೆ ಬಂದಾಗ ಘಟನೆ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
 

Follow Us:
Download App:
  • android
  • ios