ಬೆಂಗಳೂರು(ಮಾ.20): ಮಾದಕ ವಸ್ತು ದಂಧೆ ವಿರುದ್ಧ ರಾಜಧಾನಿ ಪೊಲೀಸರ ಕಾರ್ಯಾಚರಣೆ ಮುಂದುವರೆದಿದ್ದು, ದಕ್ಷಿಣ ಭಾಗದಲ್ಲಿ 26 ಮಂದಿ ಪೆಡ್ಲರ್‌ಗಳನ್ನು ಸೆರೆ ಹಿಡಿದಿದ್ದಾರೆ.

ಈ ಕೆಲ್ಸ ಮಾಡ್ತಿದ್ದ ಐವರು ಪುರುಷರ ಜೊತೆಗೆ ಓರ್ವ ಮಹಿಳೆ ಅರೆಸ್ಟ್

ದಕ್ಷಿಣ ವಿಭಾಗದ 17 ಠಾಣೆಗಳ ಸರಹದ್ದಿನಲ್ಲಿ ಮಾ.9ರಿಂದ 17ರವರೆಗೆ ಡ್ರಗ್‌ ಜಾಲದ ವಿರುದ್ಧ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ 26 ಮಂದಿ ವೃತ್ತಿಪರ ದಂಧೆಕೋರರನ್ನು ಬಂಧಿಸಿ, ಅವರಿಂದ 1.3 ಕೆಜಿ ಗಾಂಜಾ ಹಾಗೂ ಹಣ ಜಪ್ತಿ ಮಾಡಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಕಟೋಚ್‌ ಸಪೆಟ್‌ ತಿಳಿಸಿದ್ದಾರೆ.

25 ಲಕ್ಷ ಮೌಲ್ಯದ ಗಾಂಜಾ ಜಪ್ತಿ: ಇಬ್ಬರ ಬಂಧನ, ಓರ್ವ ಪರಾರಿ

ತಲಘಟ್ಟಪುರ, ಚನ್ನಮ್ಮನಕೆರೆ ಅಚ್ಚುಕಟ್ಟು, ಜೆ.ಪಿ.ನಗರ , ಜಯನಗರಗಳಲ್ಲಿ ತಲಾ ಮೂರು, ಸಿದ್ದಾಪುರ 6, ಕೋಣನಕುಂಟೆ, ವಿವಿ ಪುರಂ, ಬನಶಂಕರಿ ಹಾಗೂ ಹನುಮಂತನಗರ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ. ನಗರದಲ್ಲಿ ಹೆಚ್ಚಾಗಿರುವ ಮಾದಕ ವಸ್ತುಗಳ ಮಾರಾಟ ಜಾಲದ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಗಾಂಜಾ ಮಾರಾಟಗಾರರು ಹಾಗೂ ಸಾಗಣೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಯುಕ್ತರು ಆದೇಶದ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆದಿದೆ.