ಬೆಂಗಳೂರು [ಮಾ.16]: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮಹಿಳೆ ಸೇರಿ ಐವರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ದಾದಾಪೀರ್‌, ಜಾಫರ್‌ ಸಾದಿಕ್‌, ಮುನಾವರ್‌ ಪಾಷಾ, ಖಾಲಾ ಷರೀಪ್‌ ಹಾಗೂ ಪರ್ವಿನ್‌ ತಾಜ್‌ ಬಂಧಿತರು. 

ಆರೋಪಿಗಳಿಂದ ಎರಡೂವರೆ ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿಗಳು ಸದಾಶಿವನಗರ, ಹೈಗ್ರೌಂಡ್ಸ್‌ ಮತ್ತು ವಿಲ್ಸನ್‌ ಗಾರ್ಡನ್‌ ಠಾಣೆ ವ್ಯಾಪ್ತಿಯಲ್ಲಿ ಹಾಸ್ಟೆಲ್‌, ಪಿ.ಜಿ, ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದರು. 

ದಾವಣಗೆರೆಯಲ್ಲಿ ಕರೋನಾಕ್ಕೆ ಲಸಿಕೆ, ಹಾಕಿಸಿಕೊಂಡವರೇ ಪುಣ್ಯವಂತರು!...

ಈ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ಬಂಧಿಸಲಾಗಿದೆ. ಆಂಧ್ರಪ್ರದೇಶ, ಒಡಿಶಾ ಮಾರ್ಗವಾಗಿ ಗಾಂಜಾ ತರುತ್ತಿದ್ದರು. ತಮ್ಮದೇ ಆದ ಜಾಲ ಸೃಷ್ಟಿಸಿಕೊಂಡಿದ್ದ ಗ್ಯಾಂಗ್‌ ಗ್ರಾಂ ಲೆಕ್ಕದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.