ಕಾರವಾರ: ಮಾನಸಿಕ ಅಸ್ವಸ್ಥನಿಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಪೊಲೀಸರು

*   ಮಾನಸಿಕ ಅಸ್ವಸ್ಥನನ್ನ ಆಸ್ಪತ್ರೆಗೆ ದಾಖಲಿಸಿದ ಕದ್ರಾ ಠಾಣೆಯ ಪೊಲೀಸರು
*  ಈತನ ವರ್ತನೆಯಿಂದ ಭಯಭೀತರಾಗಿದ್ದ ಸ್ಥಳೀಯರು
*  ಆ್ಯಂಬುಲೆನ್ಸ್‌ ಮೂಲಕ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ ಪೊಲೀಸರು 

Police Admitted to Hospital who  Mentally Ill Person in Karwar grg

ಕಾರವಾರ(ಜೂ.29): ಕಾಲಿಗೆ ಗಾಯವಾಗಿ ಹುಳುವಾಗಿದ್ದರೂ ತಾಲೂಕಿನ ಕದ್ರಾ ಭಾಗದಲ್ಲಿ ಮಾನಸಿಕ ಅಸ್ವಸ್ಥನಂತೆ ಕೆಲ ದಿನಗಳಿಂದ ತಿರುಗಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಕದ್ರಾ ಠಾಣೆಯ ಪೊಲೀಸರು ಮಾನವೀಯತೆ ಮೆರೆದಿದ್ದಾರೆ.

ಈತನ ವರ್ತನೆಯಿಂದ ಸ್ಥಳೀಯರು ಕೂಡ ಭಯಭೀತರಾಗಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ ಜನಶಕ್ತಿ ವೇದಿಕೆಯ ಮಾಧವ ನಾಯಕ ಕದ್ರಾ ಸಿಪಿಐ ಗೋವಿಂದ ದಾಸರಿಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಕೂಡಲೇ ಸ್ಪಂದಿಸಿದ ದಾಸರಿ, ಪಿಎಸ್‌ಐ ಪ್ರತಾಪ್‌ ಪಚ್ಚಪ್ಪಗೋಳ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಪ್ರತಾಪ್‌ ಅವರು ಎಎಸ್‌ಐ ಮಾಧವ್‌ ಫಳ, ಕಾನ್‌ಸ್ಟೇಬಲ್‌ಗಳಾದ ಗೋಪಾಲ ಚೌಹಾಣ್‌, ನಾಗರಾಜ ತಿಮ್ಮಾಪುರ ಅವರೊಂದಿಗೆ ಸ್ಥಳಕ್ಕೆ ತೆರಳಿ,ಗ್ರಾಮಸ್ಥರ ಸಮ್ಮುಖದಲ್ಲಿ ಆರೋಗ್ಯ ಕವಚ ಆ್ಯಂಬುಲೆನ್ಸ್‌ ಮೂಲಕ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಭಟ್ಕಳ ಪುರಸಭೆ ನಾಮಫಲಕದಲ್ಲಿ ಉರ್ದು ಅಕ್ಷರ: ಕನ್ನಡಿಗರ ಆಕ್ರೋಶ

ಕಾಲಿಗೆ ಹುಳುವಾಗಿದ್ದವನನ್ನು ಆಸ್ಪತ್ರೆಗೆ ಸೇರಿಸಲು ವ್ಯವಸ್ಥೆ ಮಾಡಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹಾಗೂ ಸಿಪಿಐ ಗೋವಿಂದ ದಾಸರಿ ಮತ್ತವರ ತಂಡಕ್ಕೆ ಸ್ಥಳೀಯರು ಧನ್ಯವಾದ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios