ಹುಬ್ಬಳ್ಳಿ(ಸೆ.23): ಕಳೆದ ಮೂರು ವರ್ಷದಿಂದ ಕಳವು ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಕಳ್ಳನೊಬ್ಬ ಹಳೇಹುಬ್ಬಳ್ಳಿ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, 8.84 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಹುಬ್ಬಳ್ಳಿಯ ನಂದೀಶ ಉಮೇಶ ಸಕ್ರೆಪ್ಪನವರ ಬಂಧಿತ ಆರೋಪಿ. ಈತನ ಬಂಧನದಿಂದ 6 ಮನೆಗಳ್ಳತನ ಪ್ರಕರಣಗಳು ಬಯಲಾಗಿವೆ. ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಬರುವ ಭಾರತನಗರ, ಇಂದ್ರಪ್ರಸ್ಥನಗರ ಹಾಗೂ ಸೈಯ್ಯದ್‌ ಫತೇಶಾವಲಿ ನಗರದಲ್ಲಿಯ ಒಟ್ಟು 6 ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ಮೊದಲು ಹುಬ್ಬಳ್ಳಿಯ ಕೇಶ್ವಾಪೂರ, ವಿದ್ಯಾನಗರ ಮತ್ತು ಅಶೋಕನಗರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ.

ಹುಬ್ಬಳ್ಳಿ: 7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ವೈದ್ಯರಿಂದ ಮೌನ ಪ್ರತಿಭಟನೆ

ಈಚೆಗೆ ತಾನು ಸುಧಾರಿಸಿಕೊಂಡಿದ್ದಾಗಿ ಹೇಳಿಕೊಂಡಿದ್ದ ಈತ ಮತ್ತೆ ಹಳೆ ಚಾಳಿ ಮುಂದುವರಿಸಿದ್ದಾನೆ. ಈತನನ್ನು ಬಂಧಿಸಿದ ವೇಳೆ, 175 ಗ್ರಾಂ (8,84000 ಮೌಲ್ಯ) ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಯನ್ನು ಬಂಧಿಸುವಲ್ಲಿ ಇನ್‌ಸ್ಪೆಪೆಕ್ಟರ್‌ ಸತೀಶ ಮಾಳಗೊಂಡ, ಎಎಸ್‌ಐ ದೊಡ್ಡಮನಿ, ಸಿಬ್ಬಂದಿಗಳಾದ ಟಿ.ಜಿ. ಪುರಾಣೀಕಮಠ, ಎನ್‌.ಎಂ. ಪಾಟೀಲ, ಗುಡಗೇರಿ, ಕೃಷ್ಣಾ ಮೊಟೆಬೆನ್ನೂರ, ಅಂಬಿಗೇರ, ಎಂ.ಬಿ. ಪಾಟೀಲ, ಮಾರುತಿ ಭಜಂತ್ರಿ, ಬಾಬಾಜಾನ, ಷಣ್ಮುಖ ಯಶಸ್ವಿಯಾಗಿದ್ದಾರೆ.