ಶಿವಮೊಗ್ಗ: ಎಂಎಲ್‌ಸಿ ಹೆಸರಲ್ಲಿ ವಿಷಲಡ್ಡು ಗಿಫ್ಟ್‌ಬಾಕ್ಸ್‌!

ಡಿಟಿಡಿಸಿ ಕೋರಿಯ‌ರ್ ಮೂಲಕ ಭದ್ರಾವತಿಯಿಂದ ಈ ಪಾರ್ಸೆಲ್ ಕಳುಹಿಸಲಾಗಿದೆ. ಒಬ್ಬರು ಇದನ್ನು ಬಾಯಲ್ಲಿ ಹಾಕಿಕೊಂಡ ತಕ್ಷಣ ಕಹಿ ಅಂಶ ಪತ್ತೆಯಾಗಿದೆ. ಕೂಡಲೇ ಪ್ರಕರಣ ಬೆಳಕಿಗೆ ಬಂದಿದ್ದು, ದೊಡ್ಡ ಗಂಡಾಂತರ ತಪ್ಪಿದಂತಾಗಿದೆ.
 

Poisonous Sweet Gift Box in the name of MLC Dr Dhananjay Sarji in Shivamogga grg

ಶಿವಮೊಗ್ಗ(ಜ.04): ಹೊಸ ವರ್ಷಕ್ಕೆ ಶುಭಾಶಯ ಕೋರುವ ನೆಪದಲ್ಲಿ ಡಿಟಿಡಿಸಿ ಕೋರಿಯರ್ ಮೂಲಕ ಸರ್ಜಿ ಗ್ರೂಪ್ ಆಫ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರೂ ಆದ ವಿಧಾನಪರಿಷತ್‌ ಸದಸ್ಯ ಡಾ.ಧನಂಜಯ ಸರ್ಜಿ ಅವರ ಹೆಸರಿನಲ್ಲಿ ನಗರ ದವೈದ್ಯರೂ ಸೇರಿ ವಿವಿಧ ಗಣ್ಯ ವ್ಯಕ್ತಿಗೆ ವಿಷಮಿಶ್ರಿತ ಲಾಡುಗಳಿರುವ ಪಾರ್ಸಲ್ ಅನ್ನು ಕೋರಿಯರ್ ಮೂಲಕ ಕಳುಹಿಸಿರುವ ಅಘಾತಕಾರಿ ಘಟನೆ ಗುರುವಾರ ನಡೆದಿದೆ. 

ಡಿಟಿಡಿಸಿ ಕೋರಿಯ‌ರ್ ಮೂಲಕ ಭದ್ರಾವತಿಯಿಂದ ಈ ಪಾರ್ಸೆಲ್ ಕಳುಹಿಸಲಾಗಿದೆ. ಒಬ್ಬರು ಇದನ್ನು ಬಾಯಲ್ಲಿ ಹಾಕಿಕೊಂಡ ತಕ್ಷಣ ಕಹಿ ಅಂಶ ಪತ್ತೆಯಾಗಿದೆ. ಕೂಡಲೇ ಪ್ರಕರಣ ಬೆಳಕಿಗೆ ಬಂದಿದ್ದು, ದೊಡ್ಡ ಗಂಡಾಂತರ ತಪ್ಪಿದಂತಾಗಿದೆ.
ಈ ಬೆನ್ನಲ್ಲೇ ಅವರು ಲ್ಯಾಬ್‌ಗೆ ಲಡ್ಡು ಬಾಕ್ಸ್‌ಗಳನ್ನು ರವಾನೆ ಮಾಡಿದ್ದಾರೆ ಹಾಗೂ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ತೇಜೋವಧೆ ಮಾಡುವ ದೃಷ್ಟಿಯಿಂದ ಈ ರೀತಿಯ ಕೃತ್ಯ ಎಸಲಾಗಿದ್ದು, ಈ ಬಗ್ಗೆ ತನಿಖೆ ನಡೆಯಬೇಕು. ಈಗಾಗಲೇ ಎಸ್ಪಿ ಅವರಿಗೆ ದೂರು ನೀಡಿದ್ದೇನೆ ಎಂದು ಡಾ.ಧನಂಜಯ ಸರ್ಜಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. 

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಶೌಚಾಲಯದಲ್ಲಿ ಹೆಣ್ಣು ಭ್ರೂಣ ಪತ್ತೆ!

ಆಗಿದ್ದೇನು?: 

ಸರ್ಜಿ ಹೆಸರಿನಲ್ಲಿ ಒಂದು ಪತ್ರ ಹಾಗೂ ಸ್ವೀಟ್ ಬಾಕ್ಸ್ ಇರುವ ಪಾರ್ಸೆಲ್ ಮೊದಲಿಗೆ ಎನ್‌ಇಎಸ್ ಕಾರ್ಯದರ್ಶಿ ನಾಗರಾಜ್ ಅವರಿಗೆ ತಲುಪಿದೆ. ಬಳಿಕ ಅವರು ಬಾಕ್ಸ್‌ನಲ್ಲಿದ್ದ ಲಾಡನ್ನು ತಿಂದಿದ್ದಾರೆ. ಅದು ಕಹಿಯಾಗಿದ್ದು, ಅನು ಮಾನ ಬಂದ ಬಳಿಕ ಡಾ.ಸರ್ಜಿಯವರಿಗೆ ಕರೆ ಮಾಡಿ ನೀವು ಕಳುಹಿಸಿದ ಸಿಹಿ ವ್ಯತ್ಯಾಸವಾಗಿದೆ. ಬೇರೆಯವರಿಗೆ ಕಳುಹಿಸುವ ಮುನ್ನ ಎಚ್ಚರಿಕೆ ವಹಿಸಿ ಎಂದಿದ್ದಾರೆ. 

ಸಿ.ಟಿ.ರವಿ ಬಂಧನ, ಪೊಲೀಸರ ವರ್ತನೆ ಹಿಂದೆ ಡಿಕೆ ಶಿವಕುಮಾರ ಕೈವಾಡವಿದೆ: ಈಶ್ವರಪ್ಪ ಆರೋಪ

ನಾನು ಪಾರ್ಸಲ್ ಕಳಿಸಿಲ್ಲ- ಸರ್ಜಿ: 

ತಾವು ಯಾವುದೇ ಪಾರ್ಸಲ್ ಕಳುಹಿಸಿಲ್ಲ ಎಂದು ಡಾ.ಸರ್ಜಿ ತಿಳಿಸಿದ್ದಾರೆ.

ವಿಷಲಡ್ಡು ವಿಲಕ್ಷಣ ಘಟನೆ 

• ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಅವರ ಹೆಸರಲ್ಲಿ ಪಾರ್ಸಲ್ 
• ಶಿವಮೊಗ್ಗದ ಗಣ್ಯರು ಹಾಗೂ ಕೆಲವರಿಗೆ ಕೊರಿಯರ್‌ನಲ್ಲಿ ಪಾರ್ಸಲ್ ರವಾನೆ 
• ಪಾರ್ಸಲ್ ಸ್ವೀಕರಿಸಿದ ವ್ಯಕ್ತಿಯೊಬ್ಬರು ಲಡ್ಡು ತಿಂದಾಕ್ಷಣ ಕಹಿ ಅಂಶ ಪತ್ತೆ 
• ಕೂಡಲೇ ಲಡ್ಡು ಲ್ಯಾಬ್‌ಗೆ ರವಾನೆ, ದೂರು | ನಾನು ಕಳಿಸಿಲ್ಲ: ಸರ್ಜಿ

Latest Videos
Follow Us:
Download App:
  • android
  • ios