ಪಿಎಂ ವಿಶ್ವಕರ್ಮ ಯೋಜನೆ ನಿರ್ಲಕ್ಷ್ಯ ಸಲ್ಲದು: ಸಂಸದ ಕ್ಯಾ.ಬ್ರಿಜೇಶ್ ಚೌಟ
ಸಂಪೂರ್ಣ ಮಾಹಿತಿ ಇಲ್ಲದೆ ಸಭೆಗೆ ಹಾಜರಾಗಿದ್ದು ಯಾಕೆ ಎಂದು ಸಂಸದರು ತರಾಟೆಗೆ ತೆಗೆದುಕೊಂಡಾಗ ಅಧಿಕಾರಿ, ಜಿಲ್ಲೆಯಲ್ಲಿ 8,900 ಅರ್ಜಿಗಳು ಸಲ್ಲಿಕೆಯಾಗಿದ್ದು, 3,950 ಮಂದಿಗೆ ತರಬೇತಿ ಉತ್ತರಿಸಿದರು. ಪೂರ್ಣಗೊಂಡಿದೆ ಎಂದಷ್ಟೇ ಅಧಿಕಾರಿಯ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು.
ಮಂಗಳೂರು(ಡಿ.28): ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಸಂಬಂಧಿಸಿದಂತೆ ಇಲಾಖೆ ಮತ್ತು ಬ್ಯಾಂಕ್‌ಗಳು ಸಮನ್ವಯದಿಂದ ಕೆಲಸ ಮಾಡಿ ಯೋಜನೆ ಯಶಸ್ವಿಗೊಳಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಿಸುವುದನ್ನು ಸಹಿಸುವುದಿಲ್ಲ ಎಂದು ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ದ.ಕ.ಜಿಲ್ಲಾ ಬ್ಯಾಂಕ್‌ಗಳ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅವರು ಈ ಯೋಜನಾ ಅನುಷ್ಠಾನ ಇಲಾಖೆಯ ಅಧಿಕಾರಿಯಲ್ಲಿ ಯೋಜನೆಯ ಪ್ರಗತಿ ಕುರಿತಂತೆ ಪ್ರಶ್ನಿಸಿದಾಗ, ಅಧಿಕಾರಿ ಅಂಕಿ ಅಂಶ ಸಹಿತ ಉತ್ತರಕ್ಕೆ ತಡಕಾಡಿದರು.
ಮಂಗಳೂರು ಬೀಚ್‌ಗಳಲ್ಲಿ ನೈಟ್ ಲೈಫ್ ಶೀಘ್ರ ಜಾರಿ
ಸಂಪೂರ್ಣ ಮಾಹಿತಿ ಇಲ್ಲದೆ ಸಭೆಗೆ ಹಾಜರಾಗಿದ್ದು ಯಾಕೆ ಎಂದು ಸಂಸದರು ತರಾಟೆಗೆ ತೆಗೆದುಕೊಂಡಾಗ ಅಧಿಕಾರಿ, ಜಿಲ್ಲೆಯಲ್ಲಿ 8,900 ಅರ್ಜಿಗಳು ಸಲ್ಲಿಕೆಯಾಗಿದ್ದು, 3,950 ಮಂದಿಗೆ ತರಬೇತಿ ಉತ್ತರಿಸಿದರು. ಪೂರ್ಣಗೊಂಡಿದೆ ಎಂದಷ್ಟೇ ಅಧಿಕಾರಿಯ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಪಿ.ಎಂ. ವಿಶ್ವಕರ್ಮ ಯೋಜನೆಯ ಪ್ರಗತಿ ಪರಿಶೀಲನೆಗೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸುವಂತೆ ಜಿಲ್ಲಾ ಪಂಚಾಯತ್ ಸಿಇಒಗೆ ಸೂಚಿಸಿದರು. ಜಿಲ್ಲಾಧಿಕಾರಿಗೂ ಈ ಬಗ್ಗೆ ತಿಳಿಸುವಂತೆ ಹೇಳಿದರು.
ಪ್ರಧಾನಮಂತ್ರಿ ಜನ್-ಧನ್ ಯೋಜನೆ ಯೋಜನೆಯಲ್ಲಿ ನಿಗದಿತ ಗುರಿ ಸಾಧನೆ ಇನ್ನೂ ಆಗದಿರುವ ಬಗ್ಗೆ ಸಿಇಒ ಡಾ.ಆನಂದ್ ಅವರು ಅಸಮಾಧಾನ ವ್ಯಕ್ತಪಡಿಸಿದರು. ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಮಾಹಿತಿಗಳನ್ನು ಪರಿಶೀಲಿಸಿ ಯಾರೆಲ್ಲ ಖಾತೆ ಮಾಡಿಸಿಲ್ಲ ಎಂದು ತಿಳಿದುಕೊಳ್ಳಬೇಕು. ಈ ಬಗ್ಗೆ ಶಿಬಿರಗಳನ್ನು ಆಯೋಜಿಸುವ ಮೂಲಕವೂ ಖಾತೆಗಳನ್ನು ಮಾಡಿಸಬೇಕು. ಈ ಯೋಜನೆಯಡಿ ಜಿಲ್ಲೆಯಲ್ಲಿ ಸೆ.30ರ ವರೆಗೆ 24,582 ಉಳಿತಾಯ ಖಾತೆಗಳನ್ನು ತೆರೆಯಬೇಕು ತೆರೆಯಲಾಗಿದೆ ಎಂದರು.
ಶೇ.75ರಷ್ಟು ಗುರಿ ಸಾಧಿಸಿ:
ಆರ್‌ಬಿಐ ಬೆಂಗಳೂರು ಎಜಿಎಂ ಅರುಣ್ ಕುಮಾರ್ ಮಾತನಾಡಿ, ಪಿಎಂ ಎಸ್‌ಬಿವೈನಲ್ಲಿ ಜಿಲ್ಲೆ ರಾಜ್ಯದಲ್ಲಿ 13ನೇ ಸ್ಥಾನದಲ್ಲಿದ್ದು, ಪಿಎಂಜೆಜೆಬಿವೈನಲ್ಲಿ 28ನೇ ಸ್ಥಾನದಲ್ಲಿದೆ. ಎಲ್ಲ ಬ್ಯಾಂಕ್‌ಗಳು ಮಾರ್ಚ್ ಒಳಗೆ ಶೇ.75ರಷ್ಟು ಗುರಿ ಸಾಧಿಸಬೇಕು ಎಂದರು. ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಲ್ಲಿ ಕೆಲವು ಫಲಾನುಭವಿಗಳು ಸಾಲ ಮಂಜೂರಾದರೂ ಸಾಲ ಪಡೆಯಲು ಬ್ಯಾಂಕ್‌ಗಳಿಗೆ ಬರುತ್ತಿಲ್ಲ. ಇದರಿಂದ ಯೋಜನೆಯಲ್ಲಿ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದರು. ಇದರಿಂದಾಗಿ 500ಕ್ಕೂ ಹೆಚ್ಚಿನ ಅರ್ಜಿಗಳು ಬಾಕಿ ಇವೆ ಎಂದು ತಿಳಿಸಿದರು.
ಫಲಾನುಭವಿಗಳಿಗೆ ನೋಟಿಸ್ ಕೊಟ್ಟು ಬ್ಯಾಂಕ್‌ಗೆ ತೆರಳುವಂತೆ ಸೂಚನೆ ನೀಡಲಾಗುವುದು ಎಂದು ಸ್ವನಿಧಿ ಯೋಜನೆ ಅನುಷ್ಠಾನ ಅಧಿಕಾರಿಗಳು ತಿಳಿಸಿದರು. ಈ ಸಂದರ್ಭ ಲೀಡ್ ಬ್ಯಾಂಕ್ ಮ್ಯಾನೇಜರ್ ಕವಿತಾ ಶೆಟ್ಟಿ, ನಬಾರ್ಡ್ ಡಿಜಿಎಂ ಸಂಗೀತಾ ಎಸ್. ಕರ್ತ ಇದ್ದರು.
ಮಂಗಳೂರಲ್ಲಿ 'ಸಜಂಕಾ' ಡಿಜೆ ಕಾರ್ಯಕ್ರಮ ರದ್ದು: ಹಿಂದೂ ಸಂಘಟನೆಗಳ ವಿರೋಧಕ್ಕೆ ಮಣಿದ
ಜ.2ರಂದು ಮಂಗೂರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಮನೆಗಳಲ್ಲಿ ಸೌರ ಫಲಕಗಳನ್ನು ಅಳವಡಿಸಿ ವಿದ್ಯುತ್ ಉತ್ಪಾದನೆ ಮಾಡುವ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಗೆ ಜ.2ರಂದು ಕಾವೂರಿನಲ್ಲಿ ಕಾರ್ಯಾಗಾರ ನಡೆಯಲಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕಾರ್ಯಾಗಾರ ಉದ್ಘಾಟಿಸಲಿದ್ದಾರೆ.
ಮೆಸ್ಕಾಂ ಮತ್ತು ಬ್ಯಾಂಕ್‌ಗಳು ಜಂಟಿಯಾಗಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು. ಕಾರ್ಯಾಗಾರದಲ್ಲಿ ಯೋಜನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಯೋಜನೆಯ ಫಲಾನುಭವಿಗಳಾಗಲು ಪ್ರೇರೇಪಣೆ ನೀಡಬೇಕು ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಸೂಚಿಸಿದರು.