ತುಮಕೂರು(ಫೆ.14): ನನಗೂ ಪ್ರಧಾನಿಯಾಗೋ ಚಟ ಇದೆ. ಪ್ರಧಾನಿಯಾಗುವವರು ಹುಚ್ಚುನಾಯಿಯಾಗಿರಬಾರದು ಎಂದು ತುಮಕೂರಿನಲ್ಲಿ ಸಂಸದ ಜಿ. ಎಸ್. ಬಸವರಾಜು ಹೇಳಿದ್ದಾರೆ.

ಪುಲ್ವಾಮ ಬಾಂಬ್ ಬ್ಲಾಸ್ಟ್ ಬಗ್ಗೆ ರಾಹುಲ್ ಗಾಂಧಿ ಟ್ವೀಟ್ ವಿಚಾರ‌ವಾಗಿ ಪ್ರತಿಕ್ರಿಯಿಸಿದ ಅವರು, ರಾಹುಲ್ ಗಾಂಧಿಯವರೇ ದೇಶದಲ್ಲಿ ದಾಳಿ ನಡೆಸುತ್ತಿದ್ದಾರೆ. ಸಿಎಎ ವಿರುದ್ಧ ಮುಸ್ಲಿಂರನ್ನು ಎತ್ತಿ ಕಟ್ಟುವ ಮೂಲಕ ದೇಶದಲ್ಲಿ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪುಲ್ವಾಮಾ ದಾಳಿ ಲಾಭ ಆಗಿದ್ಯಾರಿಗೆ?: ರಾಹುಲ್ ಕೇಳಿದ 3 ಪ್ರಶ್ನೆಗಳು ಯಾರಿಗೆ?

ರಾಹುಲ್ ಗಾಂಧಿ ಸೈನಿಕರ ಬಗ್ಗೆ ಹೇಳಿರೋದುನ್ನ ನಾನು ಖಂಡಿಸುತ್ತೇನೆ. ರಾಹುಲ್ ಗಾಂಧಿಯಂತೆ ನಾನೂ ಪ್ರಧಾನಿಯಾಗಬೇಕೆಂಬ ಚಟ ಇದೆ‌. ಆದ್ರೆ ಪ್ರಧಾನಿಯಾಗುವವರು ಭಾರತೀಯ ಪ್ರಜೆಯಾಗಿರಬೇಕು, ಹುಚ್ವುನಾಯಿಯಾಗಿರಬಾರದು‌‌ ಎಂದು ವ್ಯಂಗ್ಯ ಮಾಡಿದ್ದಾರೆ.

ರಾಹುಲ್ ಗಾಂಧಿ ಚಿನ್ನದ ಸ್ಪೂನಿನಲ್ಲಿ ಹುಟ್ಟಿದವರು, ಮೋದಿ ಟೀ ಮಾರುವವರು ಪ್ರಧಾನಿ ಆಗಿದ್ದಾರೆ. ಅದು ಸಾರ್ವಭೌಮತ್ವದ ಮಹತ್ವ ಎಂದಿದ್ದಾರೆ. ಮೊದಲು ಟಾಂಗ್ ಕೊಟ್ಟು ಆಮೇಲೆ ಸಾವರಿಸಿಕೊಂಡ ಸಂಸದ ಬಸವರಾಜು ಕಾಂಗ್ರೆಸ್ ಎತ್ತಿಕಟ್ಟೋ ಕೆಲಸ ಮಾಡುತ್ತಿದೆ ಎಂದಿದ್ದಾರೆ. ಪುಲ್ವಾಮಾ ದಾಳಿಯಿಂದ ಲಾಭವಾಗಿದ್ದು ಯಾರಿಗೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿರುವ ರಾಹುಲ್‌ಗಾಂಧಿ ಟ್ವೀಟ್‌ಗೆ ಸಂಸದ ಜಿ. ಎಸ್. ಬಸವರಾಜು ಪ್ರತಿಕ್ರಿಯಿಸಿದ್ದಾರೆ. 

ಫೆಬ್ರವರಿ 14ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ