ನವದೆಹಲಿ(ಫೆ.14): ಪುಲ್ವಾಮಾ ಭಯೋತ್ಪಾದಕ ದಾಳಿಗೆ ಇಂದು ಭರ್ತಿ ಒಂದು ವರ್ಷ ತುಂಬಿದ್ದು, ಇಡೀ ದೇಶ ಹುತಾತ್ಮ ಯೋಧರನ್ನು ಸ್ಮರಿಸುತ್ತಿದೆ. ಪ್ರಧಾಣಿ ಮೋದಿಯಾಗಿ ಎಲ್ಲರೂ ಪುಲ್ವಾಮಾ ಹುತಾತ್ಮರನ್ನು ಸ್ಮರಿಸಿ ಕಂಬನಿ ಮಿಡಿದಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುಲ್ವಾಮಾ ಹುತಾತ್ಮರನ್ನು ಭಿನ್ನ ಸ್ವರದಲ್ಲಿ ಸ್ಮರಿಸಿದ್ದು, ಭಯೋತ್ಪಾದಕ ದಾಳಿಯಿಂದ ಯಾರಿಗೆ ಲಾಭ ಆಗಿದೆ ಎಂದು ಪ್ರಶ್ನಿಸಿ ಪರೋಕ್ಷವಾಗಿ ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿದ್ದಾರೆ.

'ನಾವು ಮರೆತಿಲ್ಲ, ನಾವು ಕ್ಷಮಿಸೋದೂ ಇಲ್ಲ': ಪುಲ್ವಾಮಾ ವೀರರಿಗೆ CRPF ಸೆಲ್ಯೂಟ್!

ಪುಲ್ವಾಮಾ ಹುತಾತ್ಮರನ್ನು ಸ್ಮರಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಈ ಸಮಯದಲ್ಲಿ ಮೂರು ಪ್ರಶ್ನೆಗಳನ್ನು ಕೇಳುವುದಾಗಿ ಹೇಳಿದ್ದಾರೆ. ರಾಹುಲ್ ಕೇಳಿದ ಪ್ರಶ್ನೆಗಳು ಇಂತಿವೆ.

1. ಪುಲ್ವಾಮಾ ಭಯೋತ್ಪಾದಕ ದಾಳಿಯಿಂದ ಯಾರಿಗೆ ಹೆಚ್ಚು ಲಾಭವಾಗಿದೆ?
2. ಪುಲ್ವಾಮಾ ದಾಳಿಯ ತನಿಖೆ ಎಷ್ಟು ಪ್ರಗತಿ ಕಂಡಿದೆ?
3. ಭದ್ರತಾ ಲೋಪದ ಆರೋಪದ ಮೇಲೆ ಬಿಜೆಪಿ ಸರ್ಕಾರ ಇದುವರೆಗೆ ಯಾರ ಮೇಲೆ ಕ್ರಮ ಕೈಗೊಂಡಿದೆ?

ಹೀಗೆ ಪುಲ್ವಾಮಾ ದಾಳಿಯ ಕುರಿತು ಮೂರು ಪ್ರಶ್ನೆಗಳನ್ನು ಕೇಳಿರುವ ರಾಹುಲ್ ಗಾಂಧಿ, ಪರೋಕ್ಷವಾಗಿ ದಾಳಿಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ನೋಡಿ: #NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್..

"