Asianet Suvarna News Asianet Suvarna News

ಲೋಕಸಭಾ ಎಲೆಕ್ಷನ್: ಮೋದಿ ಹವಾ ಮದುವೆಗಳನ್ನು ಬಿಟ್ಟಿಲ್ಲ..!

ಸಾಮಾನ್ಯವಾಗಿ ಲಗ್ನ ಪತ್ರಿಕೆಯಲ್ಲಿ ದೇವರ ಫೋಟೋ ಅಥವಾ ಸ್ವಾಮೀಜಿಗಳ ಫೋಟೋ ಮುದ್ರಿಸುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಂದು ಜೋಡಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಲಗ್ನ ಪತ್ರಿಕೆಯಲ್ಲಿ ಪ್ರಿಂಟ್ ಹಾಕಿಸಿ ಹಂಚುವ ಮೂಲಕ ಹಸೆಮಣೆ ಏರಿದೆ. 

ಸಾಮಾನ್ಯವಾಗಿ ಲಗ್ನ ಪತ್ರಿಕೆಯಲ್ಲಿ ದೇವರ ಫೋಟೋ ಅಥವಾ ಸ್ವಾಮೀಜಿಗಳ ಫೋಟೋ ಮುದ್ರಿಸುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಂದು ಜೋಡಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಲಗ್ನ ಪತ್ರಿಕೆಯಲ್ಲಿ ಪ್ರಿಂಟ್ ಹಾಕಿಸಿ ಹಂಚುವ ಮೂಲಕ ಹಸೆಮಣೆ ಏರಿದೆ. ಸದೃಡ ಭಾರತ ನಿರ್ಮಾಣಕ್ಕೆ ಮತ್ತೊಮ್ಮೆ ನರೇಂದ್ರ ಮೋದಿಯನ್ನ ಬೆಂಬಲಿಸಿ ಎಂಬ ಸಂದೇಶವನ್ನ ಪ್ರಿಂಟ್ ಹಾಕಿಸಿ ಊರಿಗೆಲ್ಲಾ ಹಂಚಿ ಇಂದು ಸಪ್ತಪದಿ ತುಳಿದಿದ್ದಾರೆ .ಜೊತೆಗೆ ತಮ್ಮ ಮದುವೆ ರಿಷಿಪ್ಷನ್ ಗೆ ಬಂದವರ ಕೈ ಗೆ ಮೋದಿ ಫೋಟೋ ಹಿಡಿಸಿ ಮುಂಬರುವ  ಲೋಕಸಭಾ ಚುನಾವಣೆಯಲ್ಲು ಮೋದಿ ಬೆಂಬಲಿಸುವಂತೆ ತಮ್ಮದೇ ಆದ ರೀತಿಯಲ್ಲಿ ಅಭಿಮಾನ ಮೆರೆದಿದ್ದಾರೆ .

Video Top Stories